लाइव कैलेंडर

September 2026
M T W T F S S
 123456
78910111213
14151617181920
21222324252627
282930  
07/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ ‎ಮೂಡಿಗೆರೆ ತಾಲೂಕು..

1 min read

ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ

‎ಮೂಡಿಗೆರೆ ತಾಲೂಕು..

ಸರ್ಕಾರ ನೀಡಿರುವ ನೀತಿ 3 ತಿಂಗಳ ಅವಧಿ ಮುಗಿದಿದೆ ಮತ್ತು ಸುತ್ತೋಲೆಯಂತೆ ತೆಗೆದುಕೊಂಡಿಲ್ಲ. ಸರ್ವೆ ಹಣ ಕಟ್ಟಿಸಿಕೊಂಡಿದ್ದಾರೆ. ಸರ್ವೆ ಇಲಾಖೆಯಲ್ಲಿ ಅನೇಕರಿಗೆ ಸರ್ವೆ ಬರುವುದಿಲ್ಲ, ಅನೇಕ ಅಧಿಕಾರಿಗಳು ಈ ಬಗ್ಗೆ ಸುತ್ತೋಲೆಯಲ್ಲಿರುವ ನಿಯಮಗಳನ್ನು ಓದಿ ಕಾರ್ಯವನ್ನು ಉಚಿತವಾಗಿ ಮಾಡಬೇಕಾಗಿದ್ದರೂ ಹಣ ಕಟ್ಟಿಸಿಕೊಂಡು ನಿಗಧಿತ ಅವಧಿಯಲ್ಲಿ ಸರ್ವೆ `ನೋಟಿಸು ನೀಡಿ ಸರ್ವೆ ಕಾರ್ಯಕ್ಕೆ ಹೋದಾಗ ರೈತರು ಅಡ್ಡಿಪಡಿಸುತ ಪಹಣಿ ವಿಸ್ತೀರ್ಣಕ್ಕೆ ಅನುಸಾರ ಪೋಡಿ ಮಾಡಿ ನಕ್ಷೆ ತಯಾರಿಸಿ ರೈತರಿಗೆ ವಿತರಿಸತಕ್ಕದ್ದು, ಅಸುವಂತಿಲ್ಲ ಹೊಂದಿದ ರೈತರು ನಕ್ಷೆಯನ್ನು ಪ್ರಶ್ನಿಸಿ ಅಪೀಲು ಸಲ್ಲಿಸಬಹುದಾಗಿದೆ. ಆದರೆ ಅಧಿಕಾರಿಗಳು ತಕರಾರು ಕಾರಣ ನೀಡಿ ಸರ್ವೆಯನ್ನು ಮಾಡದೆ ವಾಪಸ್ಸು ಹೋಗುವ ನೀತಿ ಅನುಸರಿಸುತ್ತಿದ್ದಾರೆ. ಪೋಡಿ ಮುಕ್ತ

ರೈತರಿಗೆ ಕನಸಾಗಿದೆ. ಇನ್ನು ಎಂಟು ದಿನಗಳಲ್ಲಿ ಫೋಡಿಮುಕ್ತ ಅಭಿಯಾನದ ಉಸ್ತುವಾರಿ ಹೊಂದಿರುವ ತಹಶೀಲ್ದಾರ್ ರವರು

‎1. ಪೋಡಿಮುಕ್ತ ಗ್ರಾಮಗಳ ಪಟ್ಟಿಯನ್ನು 8 ದಿನಗಳಲ್ಲಿ ತಾಲ್ಲೂಕು ಕಛೇರಿಯಲ್ಲಿ ಪ್ರಕಟಿಸತಕ್ಕದ್ದು.

‎2. ಪೋಡಿಮುಕ್ತ ಗ್ರಾಮದ ಬಗ್ಗೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸುವುದು.

‎3. ಪೋಡಿಮುಕ್ತವಾಗದ ಗ್ರಾಮಗಳನ್ನು ಪ್ರಕಟಿಸುವುದು.

‎ಬಿಜೆಪಿ ಸರ್ಕಾರ ಹೋಗಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅಂದಿನ ಕಂದಾಯ ಮಂತ್ರಿಗಳು ರಾಜ್ಯದ ಎಲ್ಲಾ ಗ್ರಾಮಗಳನ್ನು 6 ತಿಂಗಳಲ್ಲಿ ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡುವುದಾಗಿ ಘೋಷಣೆ ಮಾಡಿದರು.

‎ಕಂದಾಯ ಮಂತ್ರಿಗಳು ಬದಲಾದರೂ ಪೋಡಿಮುಕ್ತ ಗ್ರಾಮಗಳ ಅಭಿಯಾನ ಪೂರ್ಣವಾಗಿಲ್ಲ. ಈ ಕಾರ್ಯಕ್ರಮದ ವಿಶೇಷವೇನೆಂದರೇ, ಈ ಕಾರ್ಯಕ್ರಮದ ಉಸ್ತುವಾರಿಯನ್ನು ತಹಶೀಲ್ದಾರ್ ರವರಿಗೆ ನೀಡಲಾಗಿತ್ತು. ಸರ್ವೆ ಮತ್ತು ಕಂದಾಯ ಇಲಾಖೆ ಸ್ವಯಂ ಆಗಿ ಸರ್ಕಾರದಿಂದ ಮಂಜೂರಾದ ಮತ್ತು ಅಕ್ರಮ ಸಕ್ರಮದ ಅರ್ಜಿಗಳ ಮೂಲಕ ಮಂಜೂರಾದ ಎಲ್ಲಾ ರೈತರ ಜಮೀನುಗಳನ್ನು ಗುರುತಿಸಿ ಸ್ವಯಂ ಆಗಿ ನೋಟೀಸು ನೀಡಿ ಉಚಿತವಾಗಿ ರೈತರ ಜಮೀನಿಗೆ ಹೋಗಿ ಸರ್ವೆ ಕಾರ್ಯ ಮುಗಿಸಿ ಪೋಡಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿತ್ತು. 50 ವರ್ಷಗಳಿಂದ ಪೋಡಿ ಆಗದೆ ಜಮೀನುಗಳನ್ನು ಮುಕ್ತಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ಬಗ್ಗೆ ಶಾಸಕರನ್ನು ಕೇಳಿದರೆ ಅಸ್ಸೆಂಬ್ಲಿಯಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ.

‎ತಹಶೀಲ್ದಾರ್ ಕೇಳಿದರೆ ಇದು ಸರ್ವೆ ಇಲಾಖೆಯಲ್ಲಿ ವಿಚಾರಿಸಿ ಎಂದು ಹೇಳುತ್ತಾರೆ. ಆಡಳಿತ ಪಕ್ಷದ ಕಾರ್ಯಕರ್ತರನ್ನು ಕೇಳಿದರೆ ಶಾಸಕರಿಗೆ ಮತ್ತು ಉಸ್ತುವಾರಿ ಸಚಿವರಿಗೆ ಪತ್ರ ಬರೆಯಿರಿ ಎಂದು ಹೇಳುತ್ತಾರೆ.

‎ರೈತರು ಸರ್ಕಾರಕ್ಕೆ ಪಾವತಿಸಿದ ಹಣ ಹಿಂತಿರುಗಿಸಲು ಕ್ರಮ ಕೈಗೊಳ್ಳಬೇಕು.

‎10 ದಿನಗಳಲ್ಲಿ ಕ್ರಮ ವಹಿಸದಿದ್ದರೆ ತಹಶೀಲ್ದಾರ್ ರವರ ಮುಂದೆ ವಿನೂತನ ಚಳುವಳಿ ಮಾಡಲಾಗುವುದು.

ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಹಾರ ನೀಡುವುದು.

ಪತ್ರಿಕಗೊಸ್ಟಿಯಲ್ಲಿ

ಬಿಳ್ಳೂರುಮಂಜುನಾಥ.

‎ತಾಲೂಕು ಅದ್ಯಕ್ಷ ದಾರದಹಳ್ಳಿ ಪುಟ್ಟಸ್ವಾಮಿಗೌಡ…

ಎಂ.ಎನ್.ಚಂದ್ರೆಗೌಡ…..ಕುಂದುರು ಚಂದ್ರೆಗೌಡ…

ಹೊನ್ನೆಕೂಲು ಮಂಜುನಾಥ..ಮಗ್ಗಲಮಕ್ಕಿ ವರಪ್ರಸಾದ್…ಇತರರು ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed