लाइव कैलेंडर

September 2026
M T W T F S S
 123456
78910111213
14151617181920
21222324252627
282930  
07/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ ಮೈಸೂರು-ಕುಶಾಲನಗರ ಮುಖ್ಯ ಹೆದ್ದಾರಿಯ ಹಾಗೂ ಕುಶಾಲನಗರ ಮುಖ್ಯ ರಸ್ತೆಯಲ್ಲಿರುವ ಹಂಪ್‌ಗಳಿಗೆ ಸ್ವತಃ ಬಣ್ಣ ಬಳಿದ ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು*

1 min read

*ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ ಮೈಸೂರು-ಕುಶಾಲನಗರ ಮುಖ್ಯ ಹೆದ್ದಾರಿಯ ಹಾಗೂ ಕುಶಾಲನಗರ ಮುಖ್ಯ ರಸ್ತೆಯಲ್ಲಿರುವ ಹಂಪ್‌ಗಳಿಗೆ ಸ್ವತಃ ಬಣ್ಣ ಬಳಿದ ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು*
—————–

ರಾಜ್ಯ ಹೆದ್ದಾರಿಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ, ಹಂಪ್‌ಗಳಿಗೆ ವೇಗ ನಿಯಂತ್ರಕಗಳು ಬಣ್ಣ ಬಳಿಯದ ಕಾರಣ ಸರಣಿ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕವು ಇಂದು ಜನಹಿತ ರಕ್ಷಣೆಗೆ ಮುಂದಾಗಿದೆ. ಸಾರ್ವಜನಿಕರಿಂದ ಸತತವಾಗಿ ಬರುತ್ತಿದ್ದ ಅಪಘಾತಗಳ ಸುದ್ದಿಗೆ ತಕ್ಷಣವೇ ಸ್ಪಂದಿಸಿದ ಕರವೇ ಸ್ವಾಭಿಮಾನಿ ಸೇನೆ ಸಂಘಟನೆಯ ಪದಾಧಿಕಾರಿಗಳು, ಸ್ವತಃ ರಸ್ತೆಗಿಳಿದು ಅಪಾಯಕಾರಿ ಹಂಪ್‌ಗಳಿಗೆ ಬಿಳಿ ಬಣ್ಣ ಬಳಿಯುವ ಮೂಲಕ ರಸ್ತೆ ಸುರಕ್ಷತೆಯ ಮಹತ್ತರ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಮೈಸೂರಿನಿಂದ ಕುಶಾಲನಗರಕ್ಕೆ ಬರುವ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ, ಪ್ರಸಿದ್ಧ ಪ್ರವಾಸಿ ತಾಣವಾದ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್‌ಗೆ ತಿರುಗುವ ರಸ್ತೆ ಪಕ್ಕದಲ್ಲಿರುವ ಹಂಪ್‌ಗಳಿಗೆ ಮೊದಲು ಬಿಳಿ ಬಣ್ಣವನ್ನು ಹಚ್ಚಲಾಯಿತು.
ಈ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಹಾಗೂ ಹಂಪ್‌ಗಳು ಕಾಣಿಸದೆ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದವು.
ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಇಲ್ಲಿ ಬಣ್ಣ ಬಳಿದಿದ್ದರಿಂದ, ಈಗ ದೂರದಿಂದಲೇ ವಾಹನ ಚಾಲಕರಿಗೆ ಹಂಪ್‌ಗಳು ಸ್ಪಷ್ಟವಾಗಿ ಗೋಚರಿಸುವಂತಾಗಿದ್ದು, ಸಾರ್ವಜನಿಕರಿಗೆ ಯಾವುದೇ ಅಪಾಯವಾಗದಂತೆ ಸುರಕ್ಷತೆ ಒದಗಿಸಲಾಗಿದೆ.

ರಸ್ತೆ ಸುರಕ್ಷತೆಯ ಈ ಅಭಿಯಾನವನ್ನು ಮುಂದುವರಿಸಿದ ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಕುಶಾಲನಗರ ತಾಲೂಕಿನ ವಿವಿಧ ಪ್ರಮುಖ ರಸ್ತೆಗಳಲ್ಲಿದ್ದ ಒಟ್ಟು ಆರು ಹಂಪ್‌ಗಳಿಗೆ ಬಣ್ಣ ಬಳಿದಿದ್ದಾರೆ. ಅದರ ವಿವರ ಹೀಗಿದೆ:

* ಗೋಲ್ಡನ್ ಟೆಂಪಲ್ ಹೋಗುವ ರಸ್ತೆ ಪಕ್ಕದ ಹೆದ್ದಾರಿ ಹಂಪ್‌ಗೆ ಬಣ್ಣ ಹಚ್ಚಿ ಸುರಕ್ಷತೆಗೆ ಆದ್ಯತೆ ನೀಡಲಾಯಿತು.
* ಕುಶಾಲನಗರ ಹಳೆ ಮಾರ್ಕೆಟ್ ರಸ್ತೆ ಇಲ್ಲಿನ ಅತ್ಯಂತ ಬ್ಯುಸಿ ರಸ್ತೆಯಲ್ಲಿದ್ದ ಎರಡು ಹಂಪ್‌ಗಳಿಗೆ ಬಣ್ಣ ಬಳಿಯಲಾಯಿತು.
* ಮುಖ್ಯ ರಸ್ತೆಯ ಐಬಿ ರಸ್ತೆ ವಾಹನ ಸಂಚಾರ ದಟ್ಟಣೆ ಇರುವ ಐಬಿ ರಸ್ತೆಯ ಎರಡು ಹಂಪ್‌ಗಳಿಗೆ ಬಿಳಿ ಬಣ್ಣ ಲೇಪಿಸಲಾಯಿತು.
* ಸೋಮವಾರಪೇಟೆ ಮುಖ್ಯ ರಸ್ತೆ ಈ ವ್ಯಾಪ್ತಿಯ ಒಂದು ಪ್ರಮುಖ ಹಂಪ್‌ಗೆ ಬಣ್ಣ ಬಳಿದು ಸಾರ್ವಜನಿಕರ ಗಮನಕ್ಕೆ ಬರುವಂತೆ ಮಾಡಲಾಯಿತು.

ಭಾಗವಹಿಸಿದ ಪ್ರಮುಖ ಪದಾಧಿಕಾರಿಗಳು:
ರಸ್ತೆ ಸುರಕ್ಷತೆಯ ಈ ಮಹತ್ವದ ಕಾರ್ಯಾಚರಣೆಯ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ಮತ್ತು ಜಿಲ್ಲಾ ಗೌರವಾಧ್ಯಕ್ಷರಾದ ಚಂದ್ರು ಮತ್ತು ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್ ಮತ್ತು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಫ್ರೆಡ್ಡಿ ಮತ್ತು ಕುಶಾಲನಗರ ತಾಲೂಕು ಅಧ್ಯಕ್ಷರಾದ ಕೆ.ಎಸ್. ಶಿವ ಮತ್ತು ಕುಶಾಲನಗರ ತಾಲೂಕು ಉಪಾಧ್ಯಕ್ಷರಾದ ನಾಸಿರ್ ಮತ್ತು ಕುಶಾಲನಗರ ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷರಾದ ಆರ್. ಚಂದ್ರು ಮತ್ತು ತಾಲೂಕು ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಮಣಿಕಂಠ ಮತ್ತು ಸಂಚಾಲಕರಾದ ವಿಪಿ ಚಂದ್ರಶೇಖರ್ ಮತ್ತು ಕೂಡಿಗೆ ವಲಯ ಅಧ್ಯಕ್ಷರಾದ ನಿಶಾ ಮತ್ತು ಸುಂಟಿಕೊಪ್ಪ ಹೋಬಳಿ ಯುವ ಘಟಕದ ಅಧ್ಯಕ್ಷರಾದ ಕ್ಲಿಫರ್ಡ್ ರೊಡ್ರಿಗಸ್ ಹಾಗೂ ಪ್ರಮುಖರಾದ ಅಂತೋಣಿ ಮತ್ತು ನಂಜಪ್ಪ ಮತ್ತು ವಿಲ್ಸನ್ ಮತ್ತು ಬಾಲಕೃಷ್ಣ ಮತ್ತು ಖಾಸಿಂ ಮತ್ತು ಜೈರುದ್ದೀನ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿದ್ದರು.
ಸಂಬಂಧಪಟ್ಟ ಇಲಾಖೆಗಳು ಮಾಡಬೇಕಿದ್ದ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಈ ಸಾಮಾಜಿಕ ಕಳಕಳಿಗೆ ಮತ್ತು ಸಮಯೋಚಿತ ಹೆಜ್ಜೆಗೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಚಾಲಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

About Author

Leave a Reply

Your email address will not be published. Required fields are marked *

You may have missed