लाइव कैलेंडर

September 2026
M T W T F S S
 123456
78910111213
14151617181920
21222324252627
282930  
07/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಟೈಲರ್ ಸಂಘದ ರಜತ ಮಹೋತ್ಸವ ಮತ್ತು ಟೈಲರ್ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ…

1 min read

ಮೂಡಿಗೆರೆ ಟೈಲರ್ ಸಂಘದ ರಜತ ಮಹೋತ್ಸವ ಮತ್ತು ಟೈಲರ್ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವನ್ನು ಹೆಚ್ ಎಂ  ಶಿವೇಗೌಡ ರವರ ಅಧ್ಯಕ್ಷತೆಯಲ್ಲಿ

ಜಿ ಭೀಮೇಶ್ವರ ಜೋಷಿ ಉದ್ಘಾಟಿಸಿ ದರ್ಜಿಗಳ ಬದುಕು ಹಿಂದಿಗಿಂತಲೂ ಶೋಚನೀಯವಾಗಿದೆ ಆಧುನಿಕತೆಗೆ ಒಗ್ಗಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂದರು

‎ಮುಖ್ಯ ಅತಿಥಿಗಳಾಗಿ ಮಾಜಿ ಉಪ ಸಭಾಪತಿ ಎಂ.ಕೆ ಪ್ರಾಣೇಶ್, ಮಾಜಿ ಸಚಿವರಾದ ಬಿಬಿ ನಿಂಗಯ್ಯ , ಮಾಜಿ ಶಾಸಕರಾದ ಎಂ ಪಿ ಕುಮಾರಸ್ವಾಮಿ,

ಕೆ ಎಸ್ ಟಿ ಎ ರಾಜ್ಯಾಧ್ಯಕ್ಷರಾದ ಸುರೇಶ್ ಬಿ.ಸಿ ರೋಡ್,ಕೆ ಜಿ ಎಫ್ ಮಾಜಿ ಅಧ್ಯಕ್ಷರಾದ ಬಿ  ಎಸ್ ಜಯರಾಂ, ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ ಆರ್ ಬಾಲಕೃಷ್ಣ ಉಪಸ್ಥಿತರಿದ್ದು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು

‎ಈ ಸಂದರ್ಭದಲ್ಲಿ 12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು

‎ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶ್ರೀನಿವಾಸ (ಆರೋಗ್ಯ)ಇಲಾಖೆ,ಕೆಂಪಮ್ಮ (ಮಗನಿಗೆ ಅಂಗಾಂಗ ದಾನ) ಪ್ರತಿಮಾ (ಪಶು ಇಲಾಖೆ), ಪೂರ್ಣೇಶ್ (ಸೇನೆ), ಮಂಜುನಾಥ್ (ಟೈಲರ್), ಮೋಹನ್ (ಆರೋಗ್ಯ ಇಲಾಖೆ),ಟ್ರಸಿಲ್ಲಾ (ಶಿಕ್ಷಣ), ಯೂಸುಫ್ (ಟೈಲರ್) ,ಸಾಧಕರಿಗೆ ಸನ್ಮಾನ ಮಾಡಲಾಯಿತು

‎ಈ ಸಂದರ್ಭದಲ್ಲಿ ಕೆ ಎಸ್ ಟಿ ಎ ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ಮೂಡಿಗೆರೆ ಕ್ಷೇತ್ರ ಸಮಿತಿ,ಜನ್ನಾಪುರ,ಬಿಳಗುಳ ಬಣಕಲ್, ಆಲ್ದೂರು,ಕಳಸ, ಮೂಡಿಗೆರೆ ನಗರದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ರಜತ ಮಹೋತ್ಸವದ ಆಚರಣ ಸಮಿತಿಯ ಷಣ್ಮುಖಾನಂದ, ಗಿರೀಶ್, ಸತೀಶ್, ಉಮಾ, ಮಂಜುಳಾ, ಸುಜಾತಾ, ಪೂಜಾ, ಶೃತಿ, ಸುರೇಶ್, ಗಣೇಶ್, ಮೋಹನ್, ಪ್ರಕಾಶ್,ತೀರ್ಥ ಪ್ರದೀಪ್, ವೆಂಕಟೇಶ್ ಉಪಸ್ಥಿತರಿದ್ದರು.

‎ಸೂಜಿಯ ತುದಿಯಲಿ ಬದುಕು ಟೈಲರ್ ಸ್ಮರಣ ಸಂಚಿಕೆ ಸಂಪಾದಕರಾದ ನರಸಿಂಹ ಟೈಲರ್ ರವರನ್ನು ಸನ್ಮಾನಿಸಲಾಯಿತು

‎ಈ ಸಂದರ್ಭದಲ್ಲಿ ಕಣ್ಣು, ಕ್ಷಯರೋಗ ಪತ್ತೆ, ಬಿಪಿ, ಶುಗರ್ ಹಾಗೂ ಅಂಚೆ ಇಲಾಖೆಯಿಂದ ಸಾರ್ವಜನಿಕ ಶಿಬಿರ ಆಯೋಜಿಸಿ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು..

ವರದಿ….

ನರಸಿಂಹಟೈಲರ್..ಮೂಡಿಗೆರೆ.

About Author

More Stories

Leave a Reply

Your email address will not be published. Required fields are marked *

You may have missed