“ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯಿಂದ ಆಶ್ರಮಕ್ಕೆ ಮಾನಸಿಕ ಅಸ್ವಸ್ಥ ಯುವಕನ ರವಾನೆ.”
1 min read
ಆಲ್ದೂರು:ಹಾಂದಿ ಸಮೀಪದ ಬಾರ್ಗಲ್ ಗ್ರಾಮದ ಮಾನಸಿಕ ಅಸ್ವಸ್ಥ ಯುವಕ ಮಹಮ್ಮದ್ ಅಲಿ (18) ಅವರನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ವತಿಯಿಂದ ತುಮಕೂರಿನ ಶಾರದಾಂಬ ಆಶ್ರಮಕ್ಕೆ ಭಾನುವಾರ ದಾಖಲಿಸಲಾಯಿತು.

ಈ ಕುರಿತು ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರೆಹಮಾನ್, ಮಹಮ್ಮದ್ ಅಲಿ ಅವರ ಕುಟುಂಬ ಮೂಲತಃ ಹಾವೇರಿ ಜಿಲ್ಲೆಯದ್ದಾಗಿದ್ದು, ಕಳೆದ 20 ವರ್ಷಗಳಿಂದ ಹಾಂದಿ ಬಾರ್ಗಲ್ ಗ್ರಾಮದಲ್ಲಿ ವಾಸವಾಗಿದ್ದಾರೆ. ಮಹಮ್ಮದ್ ಅಲಿ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥರಾಗಿದ್ದು, ತಂದೆ ಮೃತಪಟ್ಟಿದ್ದಾರೆ. ತಾಯಿ ಖತೀಜಾಬಿ ಕೂಲಿ ಕೆಲಸ ಮಾಡಿಕೊಂಡು ಮಗನನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಸುಮಾರು ಒಂದು ವರ್ಷದ ಹಿಂದೆ ಮಹಮ್ಮದ್ ಅಲಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ,ಅವರು ಗಂಭೀರವಾಗಿ ಗಾಯಗೊಂಡು ನಡೆಯಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ಕುರಿತು ಪೊಲೀಸ್ ಇಲಾಖೆ ಹಾಗೂ ಸ್ಥಳೀಯರಾದ ಮೂರ್ತಿ ಅವರ ಮೂಲಕ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ,ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯು ಮುಂದಾಗಿ ಮಹಮ್ಮದ್ ಅಲಿಯನ್ನು ಭಾನುವಾರ ತುಮಕೂರಿನ ಶಾರದಾಂಬ ಆಶ್ರಮಕ್ಕೆ ದಾಖಲಿಸಿದೆ ಎಂದು ಅಬ್ದುಲ್ ರೆಹಮಾನ್ ಮಾಹಿತಿ ನೀಡಿದರು.
🎙️ವರದಿ🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

