लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
17/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ವಿದ್ಯಾಭಾರತಿ ಶಾಲೆಯಲ್ಲಿ ಅರ್ಥಪೂರ್ಣ 80ನೇ ಸ್ವಾತಂತ್ರ್ಯೋತ್ಸವ.

1 min read

ಶ್ರೀ ವಿದ್ಯಾಭಾರತಿ ವಿದ್ಯಾ ಸಂಸ್ಥೆ (ರಿ) ಬಣಕಲ್. ಮೂಡಿಗೆರೆ ತಾಲ್ಲೂಕು ಇಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.ಬೆಳಗ್ಗೆ 8:00ಗಂಟೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.ಧ್ವಜಾರೋಹಣ ನಂತರ ಶಾಲಾ ವಿದ್ಯಾರ್ಥಿಗಳಿಂದ ಬಣಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹಿಳಾ ಸಬಲೀಕರಣ (ಅಡುಗೆ ಮನೆಯಿಂದ ಅಂತರಿಕ್ಷದವರೆಗೆ) ವಿಷಯವನ್ನು ಒಳಗೊಂಡ ಸ್ತಬ್ಧಚಿತ್ರದೊಂದಿಗೆ ಆಕರ್ಷಕ ಪಥಸಂಚಲನ ನಡೆಯಿತು.

ವಿಶೇಷ ಎಂಬಂತೆ ಬಣಕಲ್ ಪೋಲೀಸ್ ಠಾಣೆಯ ಮುಂಭಾಗದಲ್ಲಿ ಸಮಾಜದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ಪೋಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ನೃತ್ಯದೊಂದಿಗೆ ಗೌರವ ಸಮರ್ಪಣೆ ಯೊಂದಿಗೆ ವಂದನೆಯನ್ನು ಸಲ್ಲಿಸಿದ್ದು ನೆರೆದವರ ಗಮನಸೆಳೆಯಿತು.

ಇದೇ ದಿನ ತಾಲ್ಲೂಕು ಆಡಳಿತ ಮೂಡಿಗೆರೆಯ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ನೃತ್ಯಕಾರ್ಯಕ್ರಮದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾIIಪೂಜ ಕೊಟ್ಟಿಗೆಹಾರ.ಮತ್ತು ವಿಶೇಷ ಚೇತನವನ್ನು ಮೆಟ್ಟಿನಿಂತು ಬದುಕನ್ನು ಕಂಡುಕೊಂಡಿರುವ ಶ್ರೀಮತಿ ಡೀನಾ ಇವರನ್ನು ಶಾಸಕಿ ನಯನಾ ಮೋಟಮ್ಮನವರು ಶಾಲೆಯ ಪರವಾಗಿ ಗೌರವಿಸಿ ಅಭಿನಂದಿಸಿದರು.

ವಿದ್ಯಾರ್ಥಿಗಳು ಮಾಡಿದ ವಿಷಯಾಧಾರಿತ ನೃತ್ಯ ಪ್ರದರ್ಶನ ಶಾಸಕರಾದಿಯಾಗಿ ನೆರೆದವರ ಮೆಚ್ಚುಗೆಗೆ ಪಾತ್ರವಾಯಿತು.
ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ತೊಡಗಿರುವ ಶ್ರೀ ಯಶೋಧರ್ ರಾವ್ ಬಣಕಲ್ ರವರಿಗೆ “ಶ್ರೀ ವಿದ್ಯಾ ಸೇವಾ ರತ್ನ ಪ್ರಶಸ್ತಿ”, ವೀರ ಸಾವರ್ಕರ್ ಪ್ರತಿಷ್ಠಾನ ಬಣಕಲ್ ತಂಡಕ್ಕೆ “ಶ್ರೀ ವಿದ್ಯಾ ಯುವ ಸ್ಪೂರ್ತಿ ಪ್ರಶಸ್ತಿ”, ಹಾಗೂ ಕರ್ನಾಟಕ ಟೈಲರ್ ಅಸೋಸಿಯೇಷನ್ ಬಣಕಲ್ ವಲಯ ಸಂಘಕ್ಕೆ “ಶ್ರೀ ವಿದ್ಯಾ ಸೇವಾ ಸಿರಿ ಪ್ರಶಸ್ತಿ”, ನೀಡಿ ಗೌರವಿಸಲಾಯಿತು.

ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಸಮಿತಿಯ ಉಪಾಧ್ಯಕ್ಷ ಬಿ.ಇ.ಸುಬ್ರಾಯ ಗೌಡ.ಕಾರ್ಯದರ್ಶಿ ಬಿ.ಪಿ.ಲಿಂಗಪ್ಪ.ಕೋಶಾಧಿಕಾರಿ ರಾಮಚಂದ್ರ ಹೊಳ್ಳ. ನಿರ್ದೇಶಕರಾದ ಬಿ.ರಮೇಶ್. ಬಿ.ಬಿ.ಮಂಜುನಾಥ್.ವೀರ ಸಾವರ್ಕರ್ ಪ್ರತಿಷ್ಠಾನದ ಅಧ್ಯಕ್ಷ ವಿನಯ್ ಶೆಟ್ಟಿ ಮತ್ತು ಸದಸ್ಯರು, ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಅಧ್ಯಕ್ಷ ಶಂಕರ ಆಚಾರ್ಯ ಮತ್ತು ಸದಸ್ಯರು.ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಟಿ.ಆರ್.ಮಾಲತಿ. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಸಿ.ನಾಗರಾಜು. ಉಪಮುಖ್ಯ ಶಿಕ್ಷಕ ವಸಂತ್ ಹಾರ್ಗೋಡು. ಶಿಕ್ಷಕರಾದ ಭಕ್ತೇಶ್. ವಿಜಯೇಂದ್ರ.
ಲಿಂಗರಾಜು. ಪ್ರತಾಪ್. ವಿಜೇಂದ್ರ. ಲೋಕೇಶ್. ದೈಹಿಕ ಶಿಕ್ಷಣ ಶಿಕ್ಷಕ ಜಯಪಾಲ್. ನೃತ್ಯ ಶಿಕ್ಷಕ ಕಿಶೋರ್. ಲೀಲಾಮಣಿ. ಶ್ವೇತಾ. ಕನ್ನಿಕ. ಸಾಯಿಕೀರ್ತನಾ.
ಕುಸುಮ.ಎಸ್.ಶೆಟ್ಟಿ. ಗೀತಾ. ಕಮಲಮ್ಮ. ಅಶ್ವಿತಾ. ಆಶಾ. ಪೂಜಾ. ಅನುಷ. ಆರೋಗ್ಯವಾಣಿ. ಚಂದನ. ಪ್ರೀತಿ. ಸುಶ್ಮಿತಾ. ಶಾಲಾ ಬೋಧಕೇತರ ಸಿಬ್ಬಂದಿ .ಅಡುಗೆ ಸಿಬ್ಬಂದಿ.ಪೋಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *