ಆ.3 ರಿಂದ ಕೆನರಾ ಬ್ಯಾಂಕ್ ಆಯ್ದ ಶಾಖೆಗಳಲ್ಲಿ ಕ್ಯಾನ್ ಅದಾಲತ್….
1 min read
ಆ.3 ರಿಂದ ಕೆನರಾ ಬ್ಯಾಂಕ್ ಆಯ್ದ ಶಾಖೆಗಳಲ್ಲಿ ಕ್ಯಾನ್ ಅದಾಲತ್
ಚಿಕ್ಕಮಗಳೂರು: ಬ್ಯಾಂಕ್ ಸುಸ್ತಿದಾರ ಬೆಳೆಗಾರರ ಅನುಕೂಲಕ್ಕಾಗಿ ಕೆನರಾ ಬ್ಯಾಂಕ್ ಕಾಫಿ ಬೆಳೆಯುವ ಜಿಲ್ಲೆಗಳ ಆಯ್ದ ಕೆಲವು ಶಾಖೆಗಳಲ್ಲಿ ಕ್ಯಾನ್ ಅದಾಲತ್ ನಡೆಸುತ್ತಿದ್ದು, ಸುಸ್ತಿದಾರ ಬೆಳೆಗಾರರು ಈ ಅವಕಾಶ ಸದುಪಯೋಗಪಡಿಸಿಕೊಂಡು ಬ್ಯಾಂಕ್ ಸಾಲದಿಂದ ಮುಕ್ತಿ ಹೊಂದಬೇಕೆಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವ ಅವರು, ಕಾಫಿ ಬೆಳೆಗಾರರು ಕಳೆದ ಕೆಲವು ವರ್ಷಗಳಿಂದ ತಲೆದೋರಿದ ವಿವಿಧ ಸಮಸ್ಯೆಗಳಿಂದಾಗಿ ಬ್ಯಾಂಕ್ ಸಾಲ ತೀ-ರಿಸಲಾಗದೆ, ಸಂಕಷ್ಟಕ್ಕೆ ಸಿಲುಕಿ ಕೆಲವು ಹರಾಜು ಹಂತಕ್ಕೆ ಖಾತೆದಾರರ ಹೋಗಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ನಿರಂತರ ಚರ್ಚೆ ನಡೆಸಿದ್ದರ ಫಲವಾಗಿ ಈಗಾಗಲೇ ಬ್ಯಾಂಕ್‌ಗಳಲ್ಲಿ ಒನ್ ಟೈಮ್ ಸೆಟ್ಸ್‌ಮೆಂಟ್ ಮೂಲಕ ರಿಯಾಯ್ತಿ ದೆರದಲ್ಲಿ ಸಾಲ ಮರುಪಾವತಿಗೆ ಅವಕಾಶ ನೀಡಲಾಗಿತ್ತು ಎಂದವರು ಹೇಳಿದ್ದಾರೆ.
ಹೀಗಿದ್ದರೂ ಕೆಲವು ಬೆಳೆಗಾರರು ವೈಯಕ್ತಿಕ ಕಾರಣಗಳಿಂದ ಅವಕಾಶ ವಂಚಿತರಾಗಿದ್ದರು. ಹಾಗಾಗಿ ಮತ್ತೊಮ್ಮೆ ಕೆನರಾ ಬ್ಯಾಂಕ್ ಕಾರ್ಯ ನಿರ್ವಾಹಕ ನಿರ್ದೇಶಕರಾದ ಹಾರ್ದಿಕ್ ಸಿಂಗ್ ಅಹ್ವಾಲಿಯ ಅವರನ್ನು ಖುದ್ದಾಗಿ ಭೇಟಿ ಮಾಡಿ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಗಮನಕ್ಕೆ ತಂದು ಒನ್ ಟೈಮ್ ಸೆಟ್ಸ್ ಮೆಂಟ್ ಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ತಮ್ಮ ಮನವಿಗೆ ಸ್ಪಂದಿಸಿದ ಕೆನರಾ ಬ್ಯಾಂಕ್ ಕಾರ್ಯ ನಿರ್ವಾಹಕರ ನಿರ್ದೇಶಕರು ಹಲವು ಕಡೆಗಳ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಕ್ಯಾನ್ ಅದಾಲತ್ ಗೆ ಅವಕಾಶ ನೀಡಿದ್ದಾರೆ. ಈ ಅವಕಾಶವನ್ನು ಕಾಫಿ ಬೆಳೆಗಾರರು ಸದುಪಯೋಗಪಡಿಸಿಕೊಂಡು ಸಾಲದಿಂದ ಮುಕ್ತರಾಗುವಂತೆ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಅವರು ವಿನಂತಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಆಗಸ್ಟ್ 3 ರಂದು. ಕಳಸದಲ್ಲಿ ಆ.4 ರಂದು, ಚಿಕ್ಕಮಗಳೂರಿನಲ್ಲಿ ಆ.4 ಮತ್ತು 5 ರಂದು, ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಆ.4 ರಂದು, ಬೇಲೂರಿನಲ್ಲಿ ಆ.5 ರಂದು ಹಾಗೂ ಹಾಗೂ ಹಾಸನದಲ್ಲಿ ಆ.5 ಮತ್ತು 6 ರಂದು,
ಕೊಡಗು ಜಿಲ್ಲೆಯ ಕುಶಾಲನಗದಲ್ಲಿ ಆ.3 ರಂದು, ಗೋಣಿಕೊಪ್ಪಲಿನಲ್ಲಿ ಆ.4 ರಂದು, ಮಡಿಕೇರಿಯಲ್ಲಿ 4 ಮತ್ತು 5 ರಂದು ಮಂಗಳೂರು ಮತ್ತು ದಾವಣಗೆರೆಯಲ್ಲಿ ಆ.7 ರಂದು ಕ್ಯಾನ್ ಅದಾಲತ್ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಿರ್ದೇಶಕರಾದ ಜುಲೈ 15 ರಂದೇ ಮಂಡಳಿಯ ಅಧ್ಯಕ್ಷ ಎಂ.ಜೆ.ದಿನೇಶ್ ಹಾಗೂ ಸಿಇಒ ಕೂರ್ಮರಾವ್ ಅವರು ಕೆನರಾ ಬ್ಯಾಂಕ್ ಕಾರ್ಯ ನಿರ್ವಾಹಕ ಹಾರ್ದಿಕ್ ಸಿಂಗ್ ಆಹ್ವಾಲಿಯ ಅವರನ್ನು ಭೇಟಿ ಮಾಡಿ ಹವಾಮಾನ ವೈಪರೀತ್ಯ, ಕೀಟ ಬಾಧೆ, ಕಾರ್ಮಿಕರ ಸಮಸ್ಯೆ, ಹಾಗೂ ಬೆಲೆ ಏರಿಳಿತದಿಂದ ಬೆಳೆಗಾರರು ಅನುಭವಿಸುತ್ತಿರುವ ಕಷ್ಟನಷ್ಟಗಳ ಬಗ್ಗೆ ಗಮನ ಸೆಳೆದಿದ್ದು, ಆ ಸಂದರ್ಭದಲ್ಲಿ ಬೆಳೆಗಾರರಿಗೆ ಸೆಟಲಮೆಂಟ್‌ನಲ್ಲಿ ಉತ್ತಮ ಭರವಸೆ ನೀಡುವ ಮೂಲಕ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವುದನ್ನು ಇಲ್ಲಿ ಸ್ಮರಿಸಬಹುದು. ಒನ್‌ಟೈಂ ಸೆಟಲಮೆಂಟ್.

