AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ದಲಿತ ದೌರ್ಜನ್ಯ ನಿಯಂತ್ರಣ ಕುಂದು ಕೊರತೆ ಸಭೆ : ಪ್ರಕರಣಗಳ ನೈತಿಕ ತನಿಖೆಗೆ ಒತ್ತಾಯ ಪ್ರತಿಭಟನೆಯ ಎಚ್ಚರಿಕೆ.”

1 min read

oplus_136314880

ಚಿಕ್ಕಮಗಳೂರು : ಆಲ್ದೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದಿನಾಂಕ 12/07/2026ರ ಭಾನುವಾದಂದು ದಲಿತ ದೌರ್ಜನ್ಯ ನಿಯಂತ್ರಣ ಕೊಂದು ಕೊರತೆ ಸಭೆ ದಲಿತ ಸಂಘಟನೆಗಳ ಸಹಭಾಗಿತ್ವದೊಂದಿಗೆ ನಡೆಯಿತು.

ಸರ್ಕಲ್ ಇನ್ಸ್ಪೆಕ್ಟರ್ ಪಿ.ಪಿ.ಸೋಮೇಗೌಡ ಅವರು ನೇತೃತ್ವ ವಹಿಸಿದ್ದ ಸಭೆಯಲ್ಲಿ ಹುಣಸೆಮಕ್ಕಿ ಗ್ರಾಮದಲ್ಲಿ ಕೊಲೆಯಾದ ದಲಿತ ಮಹಿಳೆ ಲಲಿತಮ್ಮ ಪ್ರಕರಣದಲ್ಲಿ ನಿಜವಾದ ಕೊಲೆ ಆರೋಪಿಗಳನ್ನು ಪತ್ತೆ ಮಾಡದೆ ಈ ಹಿಂದೆ ಇದ್ದ ವೃತ್ತ ನಿರೀಕ್ಷಕರು ಅಪರಾಧಿಗಳನ್ನು ತನಿಖೆ ಮಾಡಿ ಪತ್ತೆ ಮಾಡದೆ ಪ್ರಕರಣವನ್ನುಕೊನೆಗೊಳಿಸಿದ್ದು,ಈ ಹಿಂದೆ ನಡೆದ ದಲಿತ ಕುಂದು ಕೊರತೆ ಸಭೆಯಲ್ಲಿ ಮರು ತನಿಖೆಗೆ ಸಂಘಟನೆಗಳ ಒತ್ತಾಯದ ಮೇರೆಗೆ ಮರು ತನಿಖೆಗೆ ಗೆ ಆದೇಶವಾಗಿದ್ದು,ಪ್ರಕರಣದ ತನಿಖೆ ಮಾಡಲು ಈ ಹಿಂದೆ ಇದ್ದಂತಹ ಮತ್ತು ಪ್ರಸ್ತುತ ಮೂಡಿಗೆರೆ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇನ್ಸ್ಪೆಕ್ಟರ್ ರಾಜಶೇಖರ್ ರವರನ್ನೇ ನೇಮಕ ಮಾಡಿರುವುದಕ್ಕೆ ಆಕ್ಷೇಪಣೆ ಇದ್ದು, ತನಿಖಾಧಿಕಾರಿಯನ್ನು ಬದಲಾವಣೆ ಮಾಡಬೇಕು ಎಂದು ದಲಿತ ಸಂಘಟನೆಗಳ ಮುಖಂಡರುಗಳಾದ ಹೊನ್ನಪ್ಪ ಯಲಗುಡಿಗೆ,ನವರಾಜು ಎಚ್, ಮಂಜಯ್ಯ ಈ ಸಭೆಯಲ್ಲಿ ಒತ್ತಾಯಿಸಿದರು.
ಬಳಿಕ ಆಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹುಣಸೆಮಕ್ಕಿ ಗ್ರಾಮದ ರಮೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್ ನೋಟ್ ನಲ್ಲಿ ಉಲ್ಲೇಖಿತವಾಗಿದ್ದ ಹೆಸರುಗಳ ವ್ಯಕ್ತಿಗಳನ್ನು ವಿಚಾರಣೆ ನಡೆಸಿಲ್ಲ, ಬಿಳಿಗಿರಿ ಎಸ್ಟೇಟ್ ನ ಕೆರೆಯಲ್ಲಿ ರಮೇಶ್,ಮಹೇಶ್,ಎಂಬ ಇಬ್ಬರು ಮೃತಪಟ್ಟಿದ್ದು,ಈ ಮೇಲಿನ ಪ್ರಕರಣಗಳಲ್ಲಿಯೂ ಸೂಕ್ತ ತನಿಖೆಯೊಂದಿಗೆ ಸರ್ಕಾರ ಪರಿಹಾರ ಒದಗಿಸಬೇಕು ಮತ್ತು ಮೇಲ್ನೋಟಕ್ಕೆ ಪೊಲೀಸರು ಈ ಮೇಲಿನ ಪ್ರಕರಣಗಳಲ್ಲಿ ಶಾಮಿಲಾಗಿರುವ ಶಂಕೆ ಇದ್ದು,ಈ ಮೂರು ವಿಷಯಗಳನ್ನು ತನಿಖೆಯಲ್ಲಿ ಗಂಭೀರವಾಗಿ ಪರಿಗಣಿಸದಿದ್ದರೆ ಈ ಮೇಲಿನ ಆಗಸ್ಟ್ 14ನೇ ತಾರೀಕಿನಂದು ಆಲ್ದೂರು ಪೊಲೀಸ್ ಠಾಣೆ ಆವರಣದಲ್ಲಿ ತಮಟೆ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಠಾರದಹಳ್ಳಿ ದೇವರಾಜ್ ಅವರು ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ದಂಧೆ ನಡೆಯುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕೆಂದು ತಿಳಿಸಿದರು.ಪಿ.ಎಸ್.ಐ ರವಿ ಜಿ.ಎ., ಮತ್ತು ಸಿಬ್ಬಂದಿಗಳು,ಡಿ.ಎಸ್.ಎಸ್ ಮುಖಂಡರುಗಳಾದ ತುಡುಕೂರು ಯೋಗೇಶ್,ಹವ್ವಳ್ಳಿ ಶಿವಣ್ಣ,ಗಿರೀಶ್, ಬಿ.ಎಸ್.ಪಿ ಹೋಬಳಿ ಅಧ್ಯಕ್ಷ ಮಲ್ಲಿಕಾರ್ಜುನ್,ಸತ್ತಿಹಳ್ಳಿ ಯೋಗೇಶ್,ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಭಾಗವಹಿಸಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed