ವಿದ್ಯಾರ್ಥಿಗಳಿಗೆಉಚಿತ ನೋಟ್ ಪುಸ್ತಕ. ಲೇಖನಿ ವಿತರಣೆ..
1 min read
ಮೂಡಿಗೆರೆ:ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ವತಿಯಿಂದ ವಿದ್ಯಾರ್ಥಿಗಳಿಗೆಉಚಿತ ನೋಟ್ ಪುಸ್ತಕ. ಲೇಖನಿ ವಿತರಣೆ.
ಮೂಡಿಗೆರೆ:ದುಡಿದು ಗಳಿಸಿದ್ದರಲ್ಲಿಸ್ವಲ್ಪ ಭಾಗ ವನ್ನು ದೀನರಿಗೆ ನೀಡುವುದರಿಂದ ದೇವರು ಮೆಚ್ಚುತ್ತಾನೆ ಎಂದು ಕಿರುಗುಂದ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ.ಬಿ.ಕೆ.ಚಂದ್ರಶೇಖರ್ ಹೇಳಿದರು.
ಅವರು
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ )ಗೋಣಿಬೀಡು. ಮೂಡಿಗೆರೆ ತಾಲ್ಲೂಕು.
ಜೇಸಿಐ ಗೋಣಿಬೀಡು ಹೊಯ್ಸಳ. ಇವರ ವತಿಯಿಂದ.
79ನೇ ಸ್ವಾತಂತ್ಯೋತ್ಸವ ದ ಪ್ರಯುಕ್ತ.
ಕಣಚೂರು. ಕೆ. ಚಂದ್ರಪುರ. ಬೆಟ್ಟದಮನೆ. ಕಿರುಗುಂದ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಳ *ವಿದ್ಯಾರ್ಥಿಗಳಿಗೆ* .
*”ಉಚಿತ ನೋಟ್ ಪುಸ್ತಕ ಹಾಗೂ ಲೇಖನಿವಿತರಣಾ ಸಮಾರಂಭ* “.ವನ್ನು ಉದ್ಘಾಟಿಸಿ ಮಾತನಾಡಿದರು.
ಬಡ ಮಕ್ಕಳ ಬಾಳಿಗೆ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ಸಹಾಯ ದಾರಿ ದೀಪ ವಾಗತ್ತದೆ ಎಂದರು.
ಪ್ರಾಸ್ತವಿಕ ನುಡಿಯನ್ನು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಮಕ್ಕಳ ಉತ್ತಮ ಭವಿಷ್ಯ ರುಪುಗೊಳ್ಳುವುದು ಶಾಲಾ ಹಂತ ದಲ್ಲಿಯೇ ಆಗಿದೆ ಸರ್ಕಾರಿ ಶಾಲೆ ಯಲ್ಲಿ ಓದುತ್ತಿರುವ ಮಕ್ಕಳು ಪ್ರತಿಭಾವಂತರು ಸೃಜನ ಶೀಲ ವಿದ್ಯಾರ್ಥಿಗಳು ಇರುತ್ತಾರೆ ಇವರ ವಿದ್ಯಾ ಬ್ಯಾಸ ಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಉಚಿತ ನೋಟ್ ಪುಸ್ತಕ ಮತ್ತು ಕಲಿಕಾ ಸಾಮಗ್ರಿ ಗಳನ್ನು ನೀಡಲಾ ಗುತ್ತಿದೆ ವಿದ್ಯಾರ್ಥಿಗಳು ಇವುಗಳನ್ನು ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಶಾಲೆಗೆ. ತಂದೆ ತಾಯಿಗೆ. ಊರಿಗೆ ಕೀರ್ತಿ ತರಬೇಕು ಎಂದರು.
ಮುಖ್ಯ ಅತಿಥಿ ಗಳಾದ ಸಮೂಹ ಸಂಪನ್ಮೂಲವ್ಯಕ್ತಿ ಶಿಕ್ಷಕ.ಪುರುಷೋತ್ತಮ್ ಮಾತನಾಡಿ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ತುಂಬಾ ಮೌಲ್ಯ ಯುತ ಕಾರ್ಯಕ್ರಮ ಮಾಡಿ ಬಡ ಸರ್ಕಾರಿ ಶಾಲಾ ಮಕ್ಕಳಿಗೆ ಮಾನವೀಯತೆ ವುಳ್ಳ ಕಾರ್ಯ ಮಾಡುತ್ತಿರುವುದು ಪ್ರಶಂಶನಿಯ.ಮತ್ತು ಇಂತಹ ಕಾರ್ಯಕ್ರಮ ಗಳನ್ನು ಇನ್ನು ಹೆಚ್ಚು ಹೆಚ್ಚು ಮಾಡಲಿ ಎಂದು ಶುಭ ಹಾರೈಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ನಾಗರತ್ನ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ಉಮಾ ಮೋಹನ್ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ಪೆನ್ನು ವಿತರಿಸಿದರು.
ಜೇಸಿಐ ಗೋಣಿಬೀಡು ಹೊಯ್ಸಳ ಅಧ್ಯಕ್ಷ.ಬಿ.ಎಂ.ಜಗತ್.
ಸ್ವಾಗತಿಸಿ.. ಶಿಕ್ಷಕ ಸುಂದರೇಶ್ ಮಾತನಾಡಿದರು.
ಗೌರವ ಟ್ರಸ್ತಿ ಸಿ ಸಿ ರಾಜಣ್ಣ. ಶಿಕ್ಷಕ ರಾಘವೇಂದ್ರ..ಶಿಕ್ಷಕಿ ಶ್ರೀಮತಿ ಕಮಲಮ್ಮ.ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಜ್ಯೋತಿ ವಂದಿಸಿದರು.
ಶಿಕ್ಷಕ ಚನ್ನಬಸಯ್ಯಕಾರ್ಯಕ್ರಮ ನಿರೂಪಿಸಿದರು..
.


