AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ರಾಘವೇಂದ್ರ ಸ್ವಾಮಿಯ
354ನೇ ಆರಾಧನೆ ಮಹೋತ್ಸವ.

ತರೀಕೆರೆ : “ರಾಯರಿದ್ದಾರೆ ಎನ್ನುವ ಶಬ್ದ ಮನ ಮನಸ್ಸಿನಲ್ಲಿದ್ದರೆ ಸಾಕು. ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರು ದೂರವಾಗುವುದು ಎಂದು ಶ್ರೀ ಸಪ್ತಗಿರಿ ಭಜನಾ ಮಂಡಳಿಯ ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ ಹೇಳಿದರು.

ಅವರು ಪಟ್ಟಣದ ವಿನಾಯಕ ನಗರದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆಯ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ನಿವಾಸದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯ 354ನೇ ಆರಾಧನೆ ಮಹೋತ್ಸವದ ಪ್ರಥಮ ದಿನದ ಪೂರ್ವ ಆರಾಧನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಘವೇಂದ್ರ ಸ್ವಾಮಿ ಆರಾಧನೆಯು ಭಾರತದಾದ್ಯಂತ ಆಚರಿಸುವ ಆತ್ಯಂತ ಭಕ್ತಿ ಹಾಗೂ ಪೂಜನೀಯ ಹಬ್ಬವಾಗಿದೆ. ರಾಯರು ಬೃಂದಾವನವನ್ನು ಅಂದರೆ ಜೀವ ಸಮಾಧಿಯನ್ನು ಪ್ರವೇಶಿಸಿದ ದಿನವನ್ನು ಸ್ಮರಿಸುವ ವಿಶೇಷ ದಿನವಾಗಿದೆ, ರಾಯರ ಮಠದಲ್ಲಿ ಭಕ್ತರಿಗೆ ನೀಡುವ ಮಂತ್ರಾಕ್ಷತೆಯು ಬಹಳ ಶಕ್ತಿಯುತವಾಗಿರುತ್ತದೆ. ಇದನ್ನು ಭಕ್ತಿಯಿಂದ ಸ್ವೀಕರಿಸಿದರೆ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಶೇಷಗಿರಿ ಭಜನಾ ಮಂಡಳಿಯ ಸದಸ್ಯೆ ರತ್ನಮ್ಮ ಮಂಜುನಾಥ್ ಮಾತನಾಡಿ ನಂಬಿದವರು ಕೈ ಬಿಟ್ಟಾಗ, ಧೈರ್ಯ ಕಳೆದುಕೊಂಡಾಗ, ಸೋಲುತ್ತಿದ್ದೇವೆ ಎಂದು ಭಯ ಪಟ್ಟಾಗ, ಯಾವುದೇ ದಾರಿ ಕಾಣಿಸದೆ ಇದ್ದಾಗ ನಮ್ಮನ್ನು ಗೆಲುವಿನೆಡೆಗೆ ನಡೆಸುವ, ಧೈರ್ಯ ತುಂಬುವ ಏಕೈಕ ಮಂತ್ರ ರಾಯರಿದ್ದಾರೆಂದು ಹೇಳಿದರೆ ಸಾಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಸಪ್ತಗಿರಿ, ಶೀ ಶೇಷಗಿರಿ ಭಜನಾ ಮಂಡಳಿಯ ಸದಸ್ಯರು, ಟಿ.ಆ‌ರ್.ಸೋಮಶೇಖರಯ್ಯ ಮತ್ತು ಕುಟುಂಬ ಹಾಗೂ ಭಕ್ತರು ಉಪಸ್ಥಿತರಿದ್ದರು. ಶ್ರೀ ಸಪ್ತಗಿರಿ, ಶ್ರೀ ಶೇಷಗಿರಿ ಭಜನಾ ಮಂಡಳಿಯ ಸದಸ್ಯರು ಭಜನೆ ನೆರವೇರಿಸಿದರು. ವರದಿ..
ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..
8971536986….🙏

About Author

Leave a Reply

Your email address will not be published. Required fields are marked *

You may have missed