AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವೀರಶೈವ ಲಿಂಗಾಯತ ಮಹಾಸಭಾ ಸೇವಾದೀಕ್ಷೆ ಸಮಾರಂಭ. ಪರೋಪಕಾರಿ ಗುಣ ಮೈಗೂಡಿಸಿಕೊಳ್ಳಿ : ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ.

1 min read

ಮಾನವ ಪರೋಪಕಾರಿ ಗುಣ ಮೈಗೂಡಿಸಿಕೊಂಡಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ “ಎಂದು ರಂಭಾಪುರಿ ಶಾಖಾ ಬೇರುಗಂಡಿ ಮಠದ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮೂಡಿಗೆರೆ ಪಟ್ಟಣದ ಮಹಾಂತಿನ ಮಠದ ಆವರಣ ದಲ್ಲಿ ಸೋಮವಾರ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಮಾತೃ ಘಟಕ ಮತ್ತು ಯುವ ಘಟಕದ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಶ್ರಾವಣ ಪೂಜಾ ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲಾ ಅಧ್ಯಕ್ಷ ಹೆಚ್.ಎಂ.ಲೋಕೇಶ್, ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವನಮಲಾ ಮೃತ್ಯುಂಜಯ ಯುವ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು.

ನೂತನ ಅಧ್ಯಕ್ಷ ಬಿ. ಎಸ್. ಓಂಕಾರ್,ಅಧಿಕಾರದಿಂದ ನಮ್ಮ ಸಮಾಜದ ಮೇಲಿನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಇಡೀ ಸಮಾಜವನ್ನು ಒಟ್ಟು ಗೂಡಿಸಿ ಬಲಿಷ್ಠವಾಗಿ ಕಟ್ಟಲಾಗುವುದು ಎಂದರು.

ಎಸ್ಸೆಸ್ಸೆಲ್ಸಿ ಹಾಗೂ
ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಆಕಾಶ್ ರವಿ,ತಿಲಕ್ ಪಟೇಲ್, ಸನ್ನಿಧಿ,ಹೇಮಲತಾ ಹಾಗೂ
ಸಮಾಜದ ಹಿರಿಯ ಮುಖಂಡರಾದ ರಾಜ್ ಶೇಖರ್ ಉಗ್ಗೇಹಳ್ಳಿ ಮತ್ತು ಮಹೇಶ್ ಮೇಗಳಪೇಟೆ,ಬಿ.ಬಿ. ಬಸವರಾಜ್,ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.

ವೀರಶೈವ ಲಿಂಗಾಯತ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮೀ ಕಾಂತರಾಜ್,ಕೊಡಗು ಜಿಲ್ಲಾ ಮಹಿಳಾ ಅಧ್ಯಕ್ಷೆ ಮಮತ ಸತೀಶ್,ಜಿಲ್ಲಾ ಉಪಾಧ್ಯಕ್ಷೆ ಶಾಲಿನಿ ಅನಿಲ್,ಜಿಲ್ಲಾ ನಿರ್ದೇಶಕರಾದ ಪೂರ್ಣೇಶ್ ಮೂರ್ತಿ, ಡಾ. ಮೋಹನ್ ರಾಜಣ್ಣ,ಆದರ್ಶ್,ಬಿ ಬಸವರಾಜ್, ಚಂದ್ರಶೇಖರ್,ಯುವ ಘಟಕದ ನೂತನ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್ ಮಾತನಾಡಿದರು.
ಎಂ.ಸಿ.ಆದರ್ಶ್ ಸ್ವಾಗತಿಸಿ. ಚಂದ್ರಶೇಖರ್ ವಂದಿಸಿದರು. ಮಲ್ಲಿಕಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *

You may have missed