AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ರಕ್ತ ದಾನ ಮಾಡಿ ಜೀವ ಉಳಿಸಿ : ಗೋಣಿಬೀಡು ಜೆಸಿಐ ಅಧ್ಯಕ್ಷ ಚಂದ್ರಶೇಖರ್.”

1 min read

ರಕ್ತ ದಾನ ಶ್ರೇಷ್ಠ ದಾನ, ರಕ್ತ ದಾನ ಮಾಡಿ ಇನ್ನೊಂದು ಜೀವ ಉಳಿಸಿದರೆ ನಿಮಗೆ ಪುಣ್ಯದ ಫಲ ಸಿಗುತ್ತದೆ ಎಂದು ಗೋಣಿಬೀಡು ಜೇಸಿಐ ಹೊಯ್ಸಳ ಅಧ್ಯಕ್ಷ ಚಂದ್ರಶೇಖರ್ ಜೆ. ಸಿ. ಹೇಳಿದರು.ಅವರು ದಿನಾಂಕ 09/09/2023ರ ಶನಿವಾರದಂದು ಕಿರುಗುಂದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಜೇಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ ವತಿಯಿಂದ “ಯಶಸ್ವಿ ಚಂದ್ರಯಾನ ಜೇಸಿ ಸಪ್ತಾಹ -2023ರ ರಕ್ತ ದಾನ ಶಿಬಿರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಾತಿ ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವ್ಯಕ್ತಿಯ ಅರೋಗ್ಯ ಕಾಪಾಡುವುದಕ್ಕೆ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದೆ. ಅದು ಕೃತಕ ಉತ್ಪಾದನೆ ಸಾಧ್ಯವಿಲ್ಲದ ಕಾರಣಕ್ಕೆ ರಕ್ತ ದಾನಿಗಳಿಂದಲೇ ಸಂಗ್ರಹಿಸಬೇಕು ಇದಕ್ಕಾಗಿ ರಕ್ತ ದಾನ ಮಾಡುವುದಕ್ಕೆ ಮುಂದಾಗಬೇಕು ಎಂದರು.ಜೀವ ಸಂಜೀವನಿ ರಕ್ತ ನಿಧಿ ಮುಖ್ಯಸ್ಥ ಮೋಹನ್ ಮಾತನಾಡುತ್ತಾ ಜೇಸಿ ಸಂಸ್ಥೆಗಳು ಈ ರೀತಿಯ ಮಾನವೀಯ ಮೌಲ್ಯವುಳ್ಳ ಕಾರ್ಯಕ್ರಮಗಳನ್ನು ಮಾಡಿ ಸಾರ್ವಜನಿಕರಿಗೆ ಮತ್ತು ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಿದಾಗ ನಮ್ಮ ನಿಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದರು.

ವಲಯ ನಿರ್ದೇಶಕ ಹಾಗೂ ನಿಕಟಪೂರ್ವ ಅಧ್ಯಕ್ಷ ಯೋಗೇಶ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್. ದಿನೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಯತೀಶ್, ಪೂರ್ವಧ್ಯಕ್ಷರಾದ ಬಿ.ಕೆ.ಚಂದ್ರಶೇಖರ್, ಎಂ ಗಣೇಶ್ ಗೌಡ, ಮುಖ್ಯ ಶಿಕ್ಷಕಿ ಕಮಲ, ಆಸ್ಪತ್ರೆಯ ಸಿ.ಹೆಚ್.ಒ.ಕುಮಾರಿ ಮತ್ತು ಜೇಸಿ ಸದಸ್ಯರು ಹಾಗೂ ಗ್ರಾಮಸ್ಥರು,ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯದರ್ಶಿ ಜಗತ್ ವಂದಿಸಿದರು.

ರಕ್ತ ದಾನಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಪರೀಕ್ಷೆ ಮಾಡಲಾಯಿತು ಮತ್ತು ಬಿಪಿ. ಶುಗರ್ ತಪಾಸಣೆ ಮಾಡಲಾಯಿತು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *

You may have missed