लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
07/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರಕಾರಿ ಶಾಲೆಗಳನ್ನು ಬಲಪಡಿಸಲು ಸರಕಾರ ಮುಂದಾಗಬೇಕು: ಬಿ.ಎಲ್.ಶಂಕರ್…….

1 min read

ಸರಕಾರಿ ಶಾಲೆಗಳನ್ನು ಬಲಪಡಿಸಲು ಸರಕಾರ ಮುಂದಾಗಬೇಕು: ಬಿ.ಎಲ್.ಶಂಕರ್

ಅಕ್ಷರತೋರಣ, ಮೂಡಿಗೆರೆ: ಕನ್ನಡ ಭಾಷೆಯ ಉಳಿವು ಕೇವಲ ಸರಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಕನ್ನಡಿಗನೂ ತನ್ನ ದೈನಂದಿನ ಬದುಕಿನಲ್ಲಿ ಕನ್ನಡವನ್ನು ಗೌರವದಿಂದ ಬಳಸುವ ಮನೋಭಾವ ಬೆಳೆಸಿಕೊಂಡರೆ ಮಾತ್ರ ಕನ್ನಡ ಭಾಷೆ ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ರಾಜ್ಯ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್

ಅವರು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಡ್ಡಿಕೆರೆ ಗೋಪಾಲ್ ಮಹಾವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಮೇಕನಗದ್ದೆ ಲಕ್ಷ್ಮಣ್‌ಗೌಡ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ 7ನೇ ತಾಲೂಕು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡದಲ್ಲಿ ಓದುವುದು, ಬರೆಯುವುದು ಹಾಗೂ ಮಾತನಾಡಲು ಕೀಳರಿಮೆ ಇರಬಾರದು. ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದು, ತಮ್ಮದೇ ಭಾಷೆಯಲ್ಲಿ ಸಾಧನೆಯ ಶಿಖರಕ್ಕೇರಿರುವ ಅನೇಕ ಮಹನೀಯರು ನಮ್ಮ ಮುಂದಿದ್ದಾರೆ. ಬ್ರಿಟನ್ ಹೊರತುಪಡಿಸಿದರೆ ಬಹುತೇಕೆ ದೇಶಗಳು ತಮ್ಮ ಸ್ಥಳೀಯ ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಆಂಗ್ಲ ಭಾಷೆಯನ್ನು ವ್ಯಾವಹಾರಿಕ ಉದ್ದೇಶಕ್ಕೆ ಬಳಸುತ್ತಿವೆ. ಇದನ್ನು ಕನ್ನಡಿಗರು ಮಾಡಬೇಕೆಂದು ಸಲಹೆ ನೀಡಿದರು.

ಆರಂಭದಲ್ಲಿ ಸಮ್ಮೇಳನಾಧ್ಯಕ್ಷ ಮೇಕನಗದ್ದೆ ಲಕ್ಷ್ಮಣ್‌ ಗೌಡ ಅವರನ್ನು ದಿವ್ಯ ಮಂಟಪದ ರಥದಲ್ಲಿ ಕುಳ್ಳಿರಿಸಿ ವಿವಿಧ ಕಲಾ ತಂಡಗಳೊಂದಿಗೆ ಮರವಣಿಗೆ ನಡೆಸಲಾಯಿತು. ಬಳಿಕ ರಾಷ್ಟ್ರ ಧ್ವಜಾರೋಹಣವನ್ನು ತಹಸೀಲ್ದಾ‌ರ್ ಎಸ್.ಅಶ್ವಿನಿ, ನಾಡ ಧ್ವಜಾರೋಹಣವನ್ನು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಲಕ್ಷ್ಮಣ್ ಕುಮಾರ್, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ ನೆರವೇ-ರಿಸಿದರು. ಕಾರ್ಯಕ್ರಮದಲ್ಲಿ ಪರಿಷತ್ತು ವತಿಯಿಂದ ಪ್ರಕಟಿಸಿದ್ದ ಸಾಹಿತಿ ದೊಡ್ಡಮನೆ ಆನಂದ್ ಅವರ ಸಂಪಾದಕತ್ವದ ಡಾ.ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳ ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು.

ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ, ಸಾಹಿತಿಗಳಾದ ರಮೇಶ್ ಹಳೆಕೋಟೆ, ಆ.ರಾ.ರಾಧಾಕೃಷ್ಣ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಮೇಕನಗದ್ದೆ ಲಕ್ಷ್ಮಣ್‌ ಗೌಡ, ಸಾಹಿತಿ ದೊಡ್ಡನೆ ಆನಂದ್, ಭಾಗ್ಯ ಲಕ್ಷ್ಮಣಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಪದ್ಮರಾಜ್, ಬಿ.ಎಸ್.ಜಯರಾಂಗೌಡ,  ಮಗ್ಗಲಮಕ್ಕಿಗಣೇಶ್.. ಎಚ್. ಎಂ.ಶಾಂತಕುಮಾ‌ರ್, ರವಿ ಕುನ್ನಳ್ಳಿ, ದಿನೇಶ್ ದೇವವೃಂದ, ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

You may have missed