ಮಹಿಳೆ ಇಲ್ಲದ ಕ್ಷೇತ್ರ ಶೂನ್ಯಕ್ಕೆ ಸಮ: ದೀಪಕ್ ದೊಡ್ಡಯ್ಯ
1 min read
ಮಹಿಳೆ ಇಲ್ಲದ ಕ್ಷೇತ್ರ ಶೂನ್ಯಕ್ಕೆ ಸಮ: ದೀಪಕ್ ದೊಡ್ಡಯ್ಯ
ಎಲ್ಲಾ ಮಹಿಳೆಯರ ಶಕ್ತಿ ಮಾತೃಶಕ್ತಿಗೆ ಸಮನಾಗಿದ್ದು. ಮಹಿಳೆಯರು ಇಲ್ಲದ ಕ್ಷೇತ್ರ ಇಡೀ ವಿಶ್ವದಲ್ಲಿ ಶೂನ್ಯಕ್ಕೆ ಸಮಾನ. ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ತಿಳಿಸಿದರು.
ಅವರು ಇಲ್ಲಿನ ಬಿಜೆಪಿ ಪಂಚವಟಿ ಕಚೇರಿಯಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ ಇಡೀ ವಿಶ್ವದಲ್ಲಿ ಮಹಿಳೆಯರು ಐವತ್ತಕ್ಕೂ ಹೆಚ್ಚು ವಿವಿಧ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದು ಇವರು ಸೇವೆ ಸದಸ್ಯರು ಕ್ಷೇತ್ರಗಳು ಸಮಾಜಕ್ಕೆ ಮಾದರಿಯಾಗಿದ್ದು ಇಂದು ಸೇನೆ ಪೈಲೆಟ್ ಅಂತರಿಕ್ಷಾ ಹೇಳಿದಂತೆ ಬಹುತೇಕ ಅಂಗಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಮಾತೃದೇವೋಭವ ಎಂಬಂತೆ ಇವರಿಲ್ಲದ ವ್ಯವಸ್ಥೆ ತೃಣಕ್ಕೆ ಸಮಾನವಾಗಿದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸರೋಜಾ ಸುರೇಂದ್ರ ಮಾತನಾಡಿ. ಹೆಣ್ಣು ಮಕ್ಕಳು ಸಮಾಜದಲ್ಲಿ ಮುಖ್ಯವಾಹಿನಿಗೆ ಬಂದಲ್ಲಿ ಇಡೀ ಕುಟುಂಬವೇ ಸುಖಿಯಾಗುತ್ತದೆ ಯಾವುದೇ ಹೆಣ್ಣು ಮಕ್ಕಳು ಕೀಳಾದ ಮೇಲೆ ಬಿಟ್ಟು ತಮ್ಮ ದೈತ್ಯ ಶಕ್ತಿಯನ್ನು ಅನುದಿನ ತೋರಿಸಿದಲ್ಲಿ ಸಮಾಜ ನಿಮಗೆ ಕೈ ಮುಗಿಯುವ ದಿನ ದೂರವಿಲ್ಲ ಸಾಧನ ಮಹಿಳೆಯರ ಹೇಮಂತಿಕೆಯನ್ನು ಅಳವಡಿಸಿಕೊಂಡು ತಮ್ಮ ದೊಡ್ಡಸ್ತಿಕೆಯನ್ನು ಪ್ರದರ್ಶಿಕದೆ ಯಾರ ಹಂಗು ಇಲ್ಲದ ಬದುಕು ಸಾಧಿಸಿ ಎಂದು ತಿಳಿಸಿದರು
ಜಿಲ್ಲಾದ್ಯಕ್ಷೆ ಜಸಿಂತಾಅನಿಲ್ ಮಾತನಾಡಿ ರಾಷ್ಟ್ರಪತಿ ಸೇರಿದಂತೆ ದೇಶದ ಅನೇಕ ವ್ಯಕ್ತಿಗಳನ್ನು ನನ್ನ ಪ್ರಧಾನಿಯವರು ಮಹಿಳೆಯರಿಗೆ ನೀಡಿದ್ದಾರೆ ಮಹಿಳೆಯರು ರಾಜಕೀಯದಲ್ಲಿ ಮುನ್ನೆಲೆಗೆ ಬರಬೇಕೆಂದು ಶೇಕಡ 33% ರಷ್ಟು ಮೀಸಲಾತಿಯನ್ನು ಪ್ರಕಟಿಸಿದ್ದಾರೆ. ಇವುಗಳ ಮಧ್ಯದಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸುವುದು ಸಮಾಜದ ಕರ್ತವ್ಯ. ತಾಯಂದಿರ ಸೇವೆ ಮಾತೃಭೂಮಿ ಪೂಜಿಸುವಷ್ಟು ಸಮಾನವಾಗಿದ್ದು. ಮಹಿಳೆಯರು ವ್ಯವಸ್ಥೆಗೆ ಪ್ರಮುಖ ರಾಗಿದ್ದಾರೆ ಎಂದು ತಿಳಿಸಿದರು.
ಜಯಮ್ಮ ರಾಮೇಗೌಡ. ಸುಮಬಿಳಗುಳ ಇವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಡಲ ಮಹಿಳಾ ಮೋರ್ಚಾ ಅದ್ಯಕ್ಷೆ ಕಾಮಾಕ್ಷಿ. ವೀಣಾಶೆಟ್ಟಿ.. ಮಂಜುಳ ಮಂಜುನಾಥ್. ಅಶ್ವಿನಿ ಸಂತೋಷ್. ಪ.ಪಂ ಸದಸ್ಯೆ ಕಮಲಾಕ್ಷಿ. ರಂಜಿತಾ. ಚಂದ್ರಾವತಿ. ಮತ್ತಿತರರಿದ್ದರು.