ಮೃತ ತಾಯಿಯ ಪಾದಕ್ಕೆ ನಮಿಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ; ಮನಕಲಕುವ ದೃಶ್ಯ ಕಂಡು ಕುಟುಂಬಸ್ಥರು ಕಣ್ಣೀರು
1 min read
ಮೃತ ತಾಯಿಯ ಪಾದಕ್ಕೆ ನಮಿಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ; ಮನಕಲಕುವ ದೃಶ್ಯ ಕಂಡು ಕುಟುಂಬಸ್ಥರು ಕಣ್ಣೀರು | Mother Death
Mother Death: ಮೃತ ತಾಯಿಯ ಪಾದವನ್ನು ನಮಸ್ಕರಿಸಿದ ಮಗನೊಬ್ಬ, ಆರ್ಶಿವಾದ ಪಡೆದು ತನ್ನ ದ್ವಿತೀಯ ಪರೀಕ್ಷೆ ಬರೆಯಲು ತೆರಳಿದ ಮನಕಲಕುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ತನ್ನ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭಕ್ಕೆ ಇನ್ನೇನು ಎರಡು ಗಂಟೆಗಳು ಮಾತ್ರ ಬಾಕಿ ಉಳಿದಿದೆ ಎನ್ನುವಾಗ ತಾಯಿಯ ಅಕಾಲಿಕ ಮರಣದ ಸುದ್ದಿ ತಿಳಿದು ವಿದ್ಯಾರ್ಥಿ ಆಘಾತಕ್ಕೊಳಗಾಗಿದ್ದೇನೆ.
ದುಃಖದ ನಡುವೆಯೂ ಹೆತ್ತವಳ ಆಸೆ, ಕನಸನ್ನು ನನಸಾಗಿಸುವ ಹಂಬಲದಿಂದ ಗಟ್ಟಿ ಮನಸ್ಸಿನಿಂದ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ ದೃಶ್ಯ ಕುಟಂಬಸ್ಥರನ್ನು ಭಾವುಕರನ್ನಾಗಿಸಿದೆ.
ತಿರುನಲ್ವೇಲಿ ಜಿಲ್ಲೆಯ ವಲ್ಲಿಯೂರ್‌ನ ವಿದ್ಯಾರ್ಥಿ ಸುನಿಲ್ ಕುಮಾರ್, ಇಂದಿನಿಂದ ಶುರುವಾದ ದ್ವಿತೀಯ ಪಿಯು ಪರೀಕ್ಷೆಯ ಮೊದಲ ಪರೀಕ್ಷೆಗೆ ಸಿದ್ಧವಾಗಿದ್ದ. ಆದರೆ, ಇಂದು (ಮಾ. 3) ಬೆಳಗ್ಗೆ ಹಠಾತ್ ಹೃದಯಾಘಾತದಿಂದ ತನ್ನ ತಾಯಿ ಸುಬಲಕ್ಷ್ಮಿಯನ್ನು ಕಳೆದುಕೊಂಡ ಸುನಿಲ್, ಆರು ವರ್ಷಗಳ ಹಿಂದೆಯಷ್ಟೇ ತಂದೆ ಕೃಷ್ಣಮೂರ್ತಿ ಅವರನ್ನು ಕಳೆದುಕೊಂಡಿದ್ದ. ಈಗ ತಾಯಿಯೂ ಜತೆಗಿಲ್ಲ. ಅವರ ಸಾವಿನಿಂದ ಕಂಗಾಲಾದ ಸುನಿಲ್ಗೆ ಸಾಂತ್ವನ ಹೇಳಿದ ಕುಟುಂಬಸ್ಥರು, ಅಮ್ಮನ ಆಸೆಯನ್ನು ಈಡೇರಿಸುವಂತೆ ಕೋರಿಕೊಂಡರು.
ಸಂಬಂಧಿಕರು ಮತ್ತು ನೆರೆಹೊರೆಯವರು ಪರೀಕ್ಷೆ ಬರೆಯುವಂತೆ ಪ್ರೋತ್ಸಾಹಿಸಿದ್ದಾರೆ. ನಿಮಗೆ ಶಿಕ್ಷಣ ಕೊಡಲು ದೃಢಸಂಕಲ್ಪ ಮಾಡಿ, ಜೀವನದಲ್ಲಿ ಸಾಕಷ್ಟು ಹೋರಾಡಿದ್ದಾರೆ. ಆಕೆಯ ಆಸೆ, ಕನಸು ಕಮರಿ ಹೋಗುವಂತೆ ಮಾಡಬೇಡ ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿ ಭಾವುಕನಾದ ಸುನಿಲ್, ಪರೀಕ್ಷೆ ಹಾಲ್ ಟಿಕೆಟ್ ಅನ್ನು ತಾಯಿಯ ಪಾದಗಳ ಮುಂದಿಟ್ಟು, ಆರ್ಶಿವಾದ ಪಡೆದು, ಪರೀಕ್ಷೆಗೆ ತೆರಳಿದ್ದಾರೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಕಂಬನಿ ಮಿಡಿದಿದ್ದಾರೆ,