ಉಚಿತವಾಗಿ ಪ್ಲಾಸ್ಟಿಕ್ ನೀರಿನ ಬಾಟಲಿ ಮತ್ತು ಪ್ಲ್ಯಾಸ್ಟಿಕ್ ಪ್ಯಾಕೆಟ್ ವಸ್ತುಗಳನ್ನು ದಾನ ಮಾಡ ಬೇಡಿ
1 min read
ಉಚಿತವಾಗಿ ಪ್ಲಾಸ್ಟಿಕ್ ನೀರಿನ ಬಾಟಲಿ ಮತ್ತು ಪ್ಲ್ಯಾಸ್ಟಿಕ್ ಪ್ಯಾಕೆಟ್ ವಸ್ತುಗಳನ್ನು ದಾನ ಮಾಡ ಬೇಡಿ
ಧರ್ಮಸ್ಥಳ ಯಾತ್ರಿಗಳಿಂದ ಕಲುಷಿತಗೊಳ್ಳುತಿರುವ ಹೇಮಾವತಿ ನದಿ……
ಧರ್ಮಸ್ಥಳ ಯಾತ್ರಿಗಳಿಂದ ಹೇಮವತಿಯ ಒಡಲು ಕಲುಷಿತಗೊಳ್ಳುತ್ತಿದೆ.ನದಿಯಲ್ಲಿ ಸೋಪ್ ಶಾಂಪೂ ಕವರ್ ಬಟ್ಟೆ ಹಾಗೂ ಇನ್ನು ಅನೇಕ ವಸ್ತುಗಳನ್ನು ನದಿಯೊಳಗೆ ಬೀಸಾಡಿ ಹೋಗಿದ್ದಾರೆ ಇದರಿಂದ ನೀರು ಕಲುಷಿತಗೊಂಡಿದೆ.
ರೋಡ್ ಸೈಡ್ ಪ್ಲಾಸ್ಟಿಕ್ ಬಾಟಲ್ ಇನ್ನು ಅನೇಕ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ನಾಶಕ್ಕೂ ಕಾರಣವಾಗುತ್ತಿದಾರೆ.
ನೀರಿನ ಬಾಟಲಿಗಳನ್ನು ಅಕ್ಕ ಪಕ್ಕದಲ್ಲಿ ತೋಟದಲ್ಲಿ ಸಹ ಬಿಸಾಡಿದ್ದಾರೆ
ದಾನ ಮಾಡುವುದು ತಪ್ಪಲ್ಲ ಇದರಿಂದ ನಮ್ಮ ಸಂಪತ್ತನ್ನು ನಾವೇ ಹಾಳು ಮಾಡಿಗೊಳ್ಳುವಂತಿದ್ದರೆ ಇದರ ಅಗತ್ಯವಿಲ್ಲ ದಯವಿಟ್ಟು ನೀರಿನ ಬಾಟಟಲಿಗಳನ್ನು ಇನ್ನಿತರ ಪ್ಲಾಸ್ಟಿಕ್ ಬಳಕೆಯ ವಸ್ತುಗಳನ್ನು ದಾನ ನೀಡುವ ಮುನ್ನ ಒಮ್ಮೆ ಯೋಚಿಸಿ…
ಬೇಸಿಗೆ ಕಾಲ ಆಗಿದ್ದರಿಂದ ಹೇಮಾವತಿ ನೀರು ಕಡಿಮೆ ಇರುವ ಕಾರಣ ಇವರು ಅನೇಕ ಪ್ಲಾಸ್ಟಿಕ್ ಕಸವನ್ನು ನದಿಗೆ ಹಾಕಿರುವ ಕಾರಣ ಹೇಮಾವತಿ ನದಿಯನ್ನು ದೇವರೆ ಕಾಪಾಡಬೇಕು…
ಇನ್ನು ಮುಂದಾದರು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಗಮನ ಹರಿಸಿ ಜೀವ ಜಲವನ್ನು ಉಳಿಸಿ…..
ವರದಿ…..
ಕಿರಣ್ . ಫಲ್ಗುಣಿ