लाइव कैलेंडर

March 2025
M T W T F S S
 12
3456789
10111213141516
17181920212223
24252627282930
31  
09/03/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಚಿಕ್ಕಮಗಳೂರು02:* ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ರಾಜ್ಯ ಗೌರವ ಪ್ರಶಸ್ತಿ ಪ್ರಕಟ.

1 min read

*ಚಿಕ್ಕಮಗಳೂರು02:* ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ರಾಜ್ಯ ಗೌರವ ಪ್ರಶಸ್ತಿ ಪ್ರಕಟ.

*ಬೆಳವಾಡಿ ಪರಮೇಶ್ವರಪ್ಪ ನವರಿಗೆ ಅಕಾಡೆಮಿ ಪ್ರಶಸ್ತಿ*

ಚಿಕ್ಕಮಗಳೂರು ಜಿಲ್ಲೆ ಬೆಳವಾಡಿ ಗ್ರಾಮದ ಜಾನಪದ ಕ್ಷೇತ್ರದ ಹಿರಿಯ ಕಲಾವಿದರಾದ ಬಿ.ಪಿ. ಪರಮೇಶ್ವರಪ್ಪ ನವರು ಸೇರಿದಂತೆ ರಾಜ್ಯದ ಒಟ್ಟು 30ಜನ ಹಿರಿಯ ಕಲಾವಿದರು ಮತ್ತು ಇಬ್ಬರು ಜಾನಪದ ತಜ್ಞರು ಸೇರಿದಂತೆ ಒಟ್ಟು 32 ಜನರು ಈ ಪ್ರಶಸ್ತಿಗೆ ಆಯ್ಕೆ.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಈ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಜಾನಪದ ತಜ್ಞ ಪ್ರಶಸ್ತಿಗೆ ತಲಾ ಐವತ್ತು ಸಾವಿರ ನಗದು, ವಾರ್ಷಿಕ ಗೌರವ ಪ್ರಶಸ್ತಿಗೆ ತಲಾ ಇಪ್ಪತ್ತೈದು ಸಾವಿರ ನಗದು ಸೇರಿದಂತೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದ 71ರ ವಯೋಮಾನದ ಬಿ. ಪಿ ಪರಮೇಶ್ವರಪ್ಪನವರು ಭಜನೆ ಕಲಾವಿದರಾಗಿದ್ದು, ಜನಪದ ಭಜನೆಯ ಪ್ರಕಾರಗಳಾದ ತತ್ವಪದ. ಜಾನಪದ. ವಚನ. ಭಕ್ತಿಗೀತೆಗಳನ್ನು ಹೆಚ್ಚೆಚ್ಚು ಪಸರಿಸಲು 2007ರಲ್ಲಿ ಶ್ರೀ ಬಸವೇಶ್ವರ ಭಜನಾ ಕಲಾ ಸಂಘವನ್ನು ಕಟ್ಟಿಕೊಂಡು ನಿರಂತರವಾಗಿ ಹಾಡುತ್ತಾ ಬರುತ್ತಿದ್ದಾರೆ. ಜನಪದ ಸಂಗೀತದ ಪಕ್ಕ ವಾದ್ಯಗಳಾದ ಘಟಂ ಅನ್ನು ಕೂಡ ನುಡಿಸುತ್ತಾರೆ. ಇದುವರೆಗೆ ಸಾವಿರಾರು ಭಜನಾ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಾ ಬರುತ್ತಿದ್ದಾರೆ.

ಬೆಳವಾಡಿ ಗ್ರಾಮದ ಕಲ್ಲೇಶ್ವರ ದೇವಸ್ಥಾನದ ಆವರಣವೇ ಇವರ ನಿತ್ಯ ಭಜನಾ ಪ್ರಯೋಗ ಶಾಲೆ. ತಾತ ನಂಜುಂಡಪ್ಪನವರಿಂದ ಬಂದ ಈ ಜನಪದ ಕಲೆಯ ಬಳುವಳಿಯನ್ನು ವಂಶ ಪಾರಂಪರ್ಯವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಜಿಲ್ಲೆಯ ಪ್ರಮುಖ ನೀರಾವರಿ ಹೋರಾಟಗಳಲ್ಲಿ ಒಂದಾದ ಕರೆಗಡ ಏತ ನೀರಾವರಿ ಹೋರಾಟದಲ್ಲಿ ತಮ್ಮ ಇಡೀ ತಂಡದೊಂದಿಗೆ ನಿರಂತರವಾಗಿ ಭಾಗಿಯಾಗಿ ಭಜನೆ ಮತ್ತು ತತ್ವಪದಗಳ ಮೂಲಕ ಹೋರಾಟಕ್ಕೆ ಕಲೆಯ ಮೂಲಕ ಸ್ಪೂರ್ತಿ ತುಂಬಿದವರು ಈ ಪರಮೇಶ್ವರಪ್ಪನವರು.

ಭಜನೆಯನ್ನು ಒಂದು ತಪಸ್ಸಿನಂತೆ ಕಾಪಿಟ್ಟುಕೊಂಡು , ಅದನ್ನೇ ಆರಾಧಿಸುತ್ತಾ ಬರುತ್ತಿರುವ ಪರಮೇಶ್ವರಪ್ಪನವರು ಚಿಕ್ಕಮಗಳೂರಿನಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತಿನ ೩ನೆ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರ ಗೌರವಕ್ಕೆ ಪಾತ್ರರಾಗಿದ್ದಾರೆ,ಮತ್ತು ಜಾನಪದ ಜಿಲ್ಲಾ ಸಿರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ನನ್ನೊಬ್ಬನ ಪ್ರಶಸ್ತಿಯಲ್ಲ , ಸಂದಾಯವಾದ ಈ ಗೌರವ ತನ್ನ ತಂಡದ ಎಲ್ಲ ಸದಸ್ಯರಿಗೂ ಸಲ್ಲುತ್ತದೆ ಎಂದು ತಿಳಿಸುತ್ತಾ, ಈ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಲಭಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಜಾನಪದ ಅಕಾಡೆಮಿ ರಾಜ್ಯಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭವು ಇದೇ ಮಾರ್ಚ್ 15ರಂದು ಬೀದರ್ ನ ರಂಗಮಂದಿರದಲ್ಲಿ ನಡೆಯಲಿದೆ.
•••••••••••••✒️
ಡಿ.ಎಂ.ಮಂಜುನಾಥಸ್ವಾಮಿ

About Author

Leave a Reply

Your email address will not be published. Required fields are marked *