ಸ್ವಚ್ಛತಾ ಕಾರ್ಯಕ್ರಮ…
1 min read
ಸ್ವಚ್ಛತಾ ಕಾರ್ಯಕ್ರಮ…..
ದಿನಾಂಕ 03/03/2025ಸೋಮವಾರದಂದು ಸಮಯ 10.30ಕ್ಕೆ ಹಸಿರು ಫೌಂಡೇಶನ್ (ರಿ) ವತಿಯಿಂದ ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆ ಸರ್ಕಲ್ ನಿಂದ ಚಾರ್ಮಾಡಿ ವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 250ಕ್ಕೂ ಹೆಚ್ಚು ಸ್ವಯಂ ಸೇವಕರು ಭಾಗವಹಿಸಲಿದ್ದು,ಬಣಕಲ್ ಭಾಗದ ಸಾರ್ವಜನಿಕರು ಹಾಗೂ ಎಲ್ಲಾ ಪರಿಸರ ಪ್ರೇಮಿಗಳು ಈ ಮಹತ್ಕಾರ್ಯದಲ್ಲಿ ಭಾಗಿಯಾಗಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಹಕಾರ ನೀಡುವುದರ ಜೊತೆಗೆ ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿಕೊಡಬೇಕಾಗಿ ಹಸಿರು ಫೌಂಡೇಶನ್ (ರಿ) ಅಧ್ಯಕ್ಷ ರತನ್ ಊರುಬಗೆ ಮನವಿ ಮಾಡಿದ್ದಾರೆ…
ಕಾರ್ಯಕ್ರಮಕ್ಕೆ ಆಗಮಿಸುವ ಸ್ವಯಂ ಸೇವಕರಿಗೆ ಮದ್ಯಾಹ್ನದ ಊಟದ ವ್ಯವಸ್ಥೆ ಇದ್ದು,ಕಾರ್ಯಕ್ರಮದಲ್ಲಿ ಸ್ವಯಂ ಸೇವಕರ ಆರೋಗ್ಯದ ಹಿತ ದೃಷ್ಟಿಯಿಂದ ಹ್ಯಾಂಡ್ ಗ್ಲೌಸ್, ಮಾಸ್ಕ್ ವಿತರಿಸಲಾಗುವುದು. ಹಾಗೂ ತುರ್ತು ಚಿಕಿತ್ಸಾ ವಾಹನವನ್ನು ಹೊಂದಿರುತ್ತೇವೆ ಎಂದು ತಿಳಿಸಿದರು