ವೃತ್ತಿ ಬದುಕಿನ ಸಾರ್ಥಕ ಪುಟ ಬರೆದ ಸಾವಿತ್ರಿ ಮರಿಯಪ್ಪ”
1 min read
“ವೃತ್ತಿ ಬದುಕಿನ ಸಾರ್ಥಕ ಪುಟ ಬರೆದ ಸಾವಿತ್ರಿ ಮರಿಯಪ್ಪ”
ದಿನಾಂಕ -02-೦3-2025 ನೆ ಭಾನುವಾರ ಅಂದರೆ ಇಂದು ಮೂಡಿಗೆರೆಯ ಜೈ ಭೀಮ್ ಹಾಲ್ ನಲ್ಲಿ ವೃತಿಯಲ್ಲಿ ಸುದೀರ್ಘ ಉಪನ್ಯಾಸಕಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಾವಿತ್ರಿ ಮರಿಯಪ್ಪ ಇವರಿಗೆ ಗುರು ವಂದನಾ ಅಭಿನಂದನಾ ಕಾರ್ಯಕ್ರಮ ನಡೆಯಿತು .
ಸಾವಿತ್ರಿ ಮರಿಯಪ್ಪ ಅವರು ಉಪನ್ಯಾಸಕ ವೃತ್ತಿಯನ್ನು ನಿರ್ವಹಿಸಿ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಆವರ ಅಪಾರವಾದ ಶಿಷ್ಯರು ಕುಟುಂಬದವರು ಹಾಗೂ ಆವರ ಹಿತೈಷಿಗಳು ಸೇರಿದ ಈ ಒಂದು ಕಾರ್ಯಕ್ರಮದಲ್ಲಿ ಅವರ ಸಾರ್ಥಕತೆಯ ದಿನಗಳನ್ನು ಮೆಲುಕು ಹಾಕುವ ಕ್ಷಣಗಳಿಗೆ ಒಂದು ಸುಂದರ ವೇದಿಕೆಯಾಗಿತ್ತು..
ಅಲ್ಲದೆ ಆವರ ವೃತ್ತಿ ಜೀವನದ ಜೊತೆಗೆ ಕುಟುಂಬದ ನಿರ್ವಹಣೆ ಹಾಗೂ ಸಮಾಜದೊಡನೆ ಇದ್ದ ಒಡನಾಟವನ್ನ ಸೇರಿದ ಹಲವಾರು ಗಣ್ಯರು ವ್ಯಕ್ತ ಪಡಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಆದ ಶ್ರೀ ನಿಂಗಯ್ಯ ಬಿ ಬಿ, ಮಾಜಿ ಶಾಸಕ ಎಂ ಪಿಂ ಕುಮಾರಸ್ವಾಮಿ,, ತ್ರಿವೇಣಿ ನಿಂಗಯ್ಯ, ಮಂಜಯ್ಯ,ರಮೇಶ್,ಮಂಜುನಾಥ್, ಕೆಂಚಯ್ಯ, ಮೊಗಯ್ಯ,ರುದ್ರಯ್ಯ ಯು.ಆರ್, ಮಲ್ಲೇಶ್, ಹಾಲಯ್ಯ,ಸಹೋದರರಾದ ಬಸವರಾಜ್, ಪತಿ ಮಹೇಂದ್ರ ಮೌರ್ಯ.ಬೆಟ್ಟ ಗೆರೆ ರುದ್ರಯ್ಯ, ಪಿಕೆ ಮಂಜುನಾಥ್,ಮುಂತಾದವರು ಭಾಗವಹಿಸಿದ್ದರು.