ಕೆಎಸ್‌ಆರ್ಟಿಸಿ ಬಸ್ ಹಾಗೂ ಮಹಿಂದ್ರ ಪಿಕಪ್ ನಡುವೆ ಡಿಕ್ಕಿ …
1 min read
ಚಿಕ್ಕಮಗಳೂರು: ಕೆಎಸ್‌ಆರ್ಟಿಸಿ ಬಸ್ ಹಾಗೂ ಮಹಿಂದ್ರ ಪಿಕಪ್ ನಡುವೆ ಡಿಕ್ಕಿ ಸಂಭವಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಾಂದಿ ಗ್ರಾಮದ ಬಳಿ ನಡೆದಿದೆ. ಧರ್ಮಸ್ಥಳದಿಂದ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದ ಕೆಎಸ್‌ಆರ್ಟಿಸಿ ಬಸ್ಸಿಗೆ ಚಿಕ್ಕಮಗಳೂರಿನಿಂದ ತರಕಾರಿ ತುಂಬಿಕೊಂಡು ಹೋಗುತ್ತಿದ್ದ ಪಿಕಪ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನದ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅದೃಷ್ಟ ವಶಾತ್ ಪಿಕಪ್ ನಲ್ಲಿ ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಿಕಪ್ ಚಾಲಕ ನಿದ್ದೆ ಮಂಪರಿನಲ್ಲಿ ಇದ್ದದೆ ಘಟನೆಗೆ ಕಾರಣ ಎನ್ನಲಾಗಿದ್ದು, ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿಕ್ಕಮಗಳೂರಿನಿಂದ ದಕ್ಷಿಣಕನ್ನಡಕ್ಕೆ ಸಂಪರ್ಕಿಸುವ ಈ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದು ಕಳೆದ ಎರಡು ದಿನಗಳ ಹಿಂದಷ್ಟೇ ಕೆಎಸ್‌ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಆಲದಗುಡ್ಡೆ ಬಳಿ ಅಪಘಾತ ಸಂಭವಿಸಿತ್ತು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ತಾಲೂಕಿನ ಶಿರಗುಂದ ಗ್ರಾಮದ ಬಳಿ ಅರ್ಧಕ್ಕೆ ನಿಂತಿದೆ ಪ್ರತಿನಿತ್ಯ ಈ ರಸ್ತೆಯಲ್ಲಿ ಧರ್ಮಸ್ಥಳ, ಶೃಂಗೇರಿ, ಹೊರನಾಡು ಸೇರಿದಂತೆ ವಿವಿಧ ಸ್ಥಳಗಳಿಗೆ ಭಕ್ತರು ಹಾಗೂ ಪ್ರವಾಸಿಗಳು ಪ್ರಯಾಣಿಸುತ್ತಾರೆ.
ಹೀಗಾಗಿ ಈ ರಸ್ತೆಯಲ್ಲಿ ಎಚ್ಚರಿಕೆಯಿಂದ ಸಾಗಬೇಕಿದೆ.