ಸಂತ ಸೇವಾಲಾಲ್ ರವರ 286ನೆ ಜಯಂತಿ ಆಚರಣೆ ಮೂಡಿಗೆರೆ.
1 min read
ಸಂತ ಸೇವಾಲಾಲ್ ರವರ 286ನೆ ಜಯಂತಿ ಆಚರಣೆ ಮೂಡಿಗೆರೆ.
ಸಂತ ಸೇವಾಲಾಲ್ ಜಯಂತಿ ಆಚರಣ ಸಮಿತಿ ವತಿಯಿಂದ 286ನೆ ಸಂತ ಸೇವಾಲಾಲ್ ರವರ ಜಯಂತಿಯನ್ನು ಮೂಡಿಗೆರೆ ದೀನ್ ದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಾಜಿ ಸಚಿವರಾದ ಬಿ. ಬಿ. ನಿಂಗಯ್ಯ ಉದ್ಘಾಟಿಸಿ ಮಾತನಾಡಿ ಇಂತ ಒಂದು ಕಾರ್ಯಕ್ರಮವು ಕೇವಲ ಸಂಭ್ರಮಕ್ಕೆ ಆಗದೆ ಒಂದು ಉತ್ತಮ ಚರ್ಚೆ ಸಂವಾದ ಆಗಬೇಕಿದೆ ಎಂದರು.
ಮೂಡಿಗೆರೆ ತಹಶೀಲ್ದಾರರಾದ ರಾಜಶೇಖರ್ ಮೂರ್ತಿ, ದೀಪಕ್ ದೊಡ್ಡಯ್ಯ, ಪ ಪಂ ಅಧ್ಯಕ್ಷ ಹೊಸಕೆರೆ ರಮೇಶ್, ಲೋಕಳ್ಳಿ ರಮೇಶ್, ಕಾಂತರಾಜ್, ಜಗದೀಶ್ ನಾಯ್ಕ, ಗೌರಿ ಭಾಯ್,ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಚರಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ನಾಯ್ಕ ವಹಿಸಿದ್ದರು,ಕಾರ್ಯಕ್ರಮದಲ್ಲಿ ಸೇವಾಲಾಲ್ ರವರ ಕುರಿತು ಉಪನ್ಯಾಸವನ್ನು ಜಗದೀಶ್ ನಾಯ್ಕ ನೀಡಿದರು.