ಗೆಳೆಯರ ಒಂದು ಆತ್ಮೀಯ ಪ್ರತಿಕ್ರಿಯೆ……
1 min read
ಗೆಳೆಯರ ಒಂದು ಆತ್ಮೀಯ ಪ್ರತಿಕ್ರಿಯೆ……
ಸತತವಾಗಿ 11 ವರ್ಷಗಳಿಂದ ಬೆಳಗಿನ 4:00 ಗಂಟೆಗೆ, ಹಾಸಿಗೆಯ ಮೇಲೆಯೇ ಕುಳಿತು, ನನ್ನ ಬಳಿ ಇರುವ ಸಾಧಾರಣ ಮೊಬೈಲಿನಿಂದ ನಾನು ಅನುಭವಿಸಿದ ಜೀವನದ ಅನುಭವಗಳನ್ನು ಅಕ್ಷರಗಳ ರೂಪದಲ್ಲಿ ಬರೆಯುತ್ತಾ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಾ, ಸಾಗಿ ಬಂದ ಸಾರ್ಥಕ ಕ್ಷಣಗಳಿಗೆ ಸಾಕ್ಷಿಯಾಗಿ ಆತ್ಮೀಯ ಮಿತ್ರರ ಈ ಒಂದು ಪ್ರತಿಕ್ರಿಯೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಅನೇಕರು ಪ್ರತಿನಿತ್ಯ ದೂರವಾಣಿ ಕರೆ ಮಾಡಿ ಚರ್ಚಿಸುತ್ತಿರುತ್ತಾರೆ. ಕೆಲವರು ಬರಹ ರೂಪದಲ್ಲೂ ಕಳಿಸುತ್ತಿರುತ್ತಾರೆ. ಅಂತಹ ಒಂದು ಪತ್ರ ಇಲ್ಲಿದೆ. ಇದಕ್ಕೆಲ್ಲಾ ಅಕ್ಷರಗಳ ರೂಪದಲ್ಲಿ ಕೃತಜ್ಞತೆ ಸಲ್ಲಿಸಲು ನನಗೆ ಸಾಧ್ಯವಿಲ್ಲ. ನನ್ನ ಬದುಕನ್ನು ಹೆಚ್ಚು ಹೆಚ್ಚು ಸಮಾಜಮುಖಿಯಾಗಿ ತೊಡಗಿಸಿಕೊಂಡು ಮತ್ತಷ್ಟು ಶುದ್ಧವಾಗಿ ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆಯ ನಿಟ್ಟಿನಲ್ಲಿ ಕಾಯಕ ಮಾಡುವುದಷ್ಟೇ ನನ್ನ ಪ್ರತಿ ವಂದನೆ ಸಲ್ಲಿಸುವ ಪ್ರತಿಜ್ಞಾ ಪರಿ………..
**********************
ಶ್ರೀಯುತ ವಿವೇಕಾನಂದ ರವರೆ,
ನಿಮಗಿದೋ ಒಂದು ವಿನಂತಿ….
ಈ ಕ್ಷಣಕ್ಕೆ ನನ್ನಲ್ಲಿ ಸುಳಿದ ನಾಲ್ಕಾರು ಪ್ರಶ್ನೆಗಳಿಗೆ ದಯವಿಟ್ಟು ಉತ್ತರಿಸಿ.
ನಿಮ್ಮ ಪ್ರತಿ ಲೇಖನವನ್ನು ಓದಿದಾಗ ಪ್ರತಿ ಬಾರಿಯೂ ನನಗೆ ನೀವು ವಿಭಿನ್ನ ಚಿಂತನೆ ಮತ್ತು ಬಹುಮುಖಿ ವ್ಯಕ್ತಿತ್ವದೊಡನೆ ವ್ಯಕ್ತವಾಗುತ್ತೀರಿ.
ನಮ್ಮ ಸಮಕಾಲಿನ ಪ್ರಖರ ಸಾಮಾಜಿಕ ಚಿಂತಕರಾದ ನಿಮ್ಮನ್ನು, ಒಬ್ಬ ದಾರ್ಶನಿಕ ಎನ್ನಲೇ…..
ಪ್ರತಿಕ್ಷಣವೂ ಪ್ರಬುದ್ಧ ಸಮಾಜಕ್ಕಾಗಿ ಪರಿತಪಿಸುವ ನಿಮ್ಮನ್ನು ಸಮಾಜ ಸುಧಾರಕ ಎನ್ನಲೇ…..
ಪ್ರತಿನಿತ್ಯವೂ ಸಮಾಜದ ಏಳಿಗೆಗಾಗಿ ಅರ್ಥಪೂರ್ಣ ಬರಹವನ್ನು ಬರೆಯುವ ಒಬ್ಬ ಅಕ್ಷರ ಯೋಗಿ ಎನ್ನಲೇ……
ಅಂತರಂಗದ ಚಳುವಳಿಯಲ್ಲಿ ಮಗ್ನರಾಗಿರುವ ನಿಮ್ಮನ್ನು ಒಬ್ಬ ಆಧ್ಯಾತ್ಮಿ ಎನ್ನಲೇ…….
ಭಾಗಶಃ ಎಲ್ಲಾ ರೀತಿಯಲ್ಲೂ ತನ್ನದೆಂಬುದರಿಂದ ವಿಮುಕ್ತಿ ಪಡೆಯುತ್ತಿರುವ ನಿಮ್ಮನ್ನು ಒಬ್ಬ ವಿರಾಗಿ ಎನ್ನಲೇ…..
ಇದ್ದುದ್ದನ್ನು ಇದ್ದ ಹಾಗೆ ಹೇಳಿ ಕೆಲವರ ಅತೃಪ್ತಿಗೆ ಕಾರಣರಾದ ನಿಮ್ಮನ್ನು ನಿಷ್ಠುರವಾದಿ ಎನ್ನಲೇ….
ಸ್ವಾಸ್ಥ್ಯ ಸಮಾಜದ ಅಪ್ಪಟ ಕನಸುಗಾರರಾದ ನಿಮ್ಮನ್ನು ಒಬ್ಬ ಅಪ್ರತಿಮ ಆದರ್ಶವಾದಿ ಎನ್ನಲೇ……
ಸ್ವಯಂ ಅರಿವಿಗೆ ಬಾರದೆ ಏನನ್ನೂ ನಂಬದ ಹಾಗೂ ಮೂಢನಂಬಿಕೆಗಳನ್ನು ಧಿಕ್ಕರಿಸುವ ನಿಮ್ಮನ್ನು ವೈಚಾರಿಕವಾದಿ ಎನ್ನಲೇ….
ಯಾರ ಉಸಾಬಾರಿಗು ಒಳಗಾಗದೆ ಮುಲಾಜಿಲ್ಲದೆ ಟೀಕಿಸುವ, ಸರಿ ಕಂಡದ್ದನ್ನು ಸರಿ ಎನ್ನುವ ಒಬ್ಬ ಸ್ವತಂತ್ರ ಚಿಂತಕ ಎನ್ನಲೇ….
ಕೆಲವೊಮ್ಮೆ ಎಡಚರರಂತೆ, ಕೆಲವೊಮ್ಮೆ ಬಲಚರರಂತೆ, ಮತ್ತೆ ಕೆಲವೊಮ್ಮೆ ಮಧ್ಯಚರರಂತೆ ಗೋಚರಿಸುವ ನಿಮ್ಮ ತತ್ವವನ್ನು ವಿವೇಕಾನಂದವಾದ ಎನ್ನಲೇ….
ನಮ್ಮ ಸಮಾಜವನ್ನು ಸೂಕ್ಷ್ಮವಾಗಿ ಅರಿಯಲು ಮತ್ತು ತಿದ್ದಲು ಸಂತನ ರೀತಿ ಊರೂರು ಅಲೆಯುವ ಪ್ರವಾದಿ ಎನ್ನಲೇ……
ಹಣ ಸಂಪಾದನೆಗಾಗಿ ಏನನ್ನೂ ಮಾಡಲು ಒಪ್ಪದ ನಿಮ್ಮನ್ನು ಭವ ಬಂಧನಗಳಿಂದ ಬಹುತೇಕ ಮುಕ್ತಿ ಪಡೆಯಲೆತ್ನಿಸುತ್ತಿರುವ ನಿಸ್ವಾರ್ಥ ಆತ್ಮ ಎನ್ನಲೇ…….
ಪ್ರತಿದಿನ ಬೆಳಗೆದ್ದು ಸಮಾಜದ ಸ್ವಾಸ್ಥ್ಯಕ್ಕಾಗಿ, ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಡುವ ನಿಮ್ಮನ್ನು ಒಬ್ಬ ಸಮಾಜವಾದಿ ಎನ್ನಲೇ……
ಜನರ ಒಳಿತಿಗಾಗಿ ಪ್ರಬುದ್ಧ ಸಮಾಜ ಕಟ್ಟಲು ಹಗಲಿರುಳು ಎನ್ನದೆ ಸತತ ಚಿಂತಿಸುವ ನಿಮ್ಮನ್ನು ಒಬ್ಬ ಆದರ್ಶ ಕನಸುಗಾರ ಎನ್ನಲೇ…..
ಅಥವಾ….
ಎಷ್ಟು ತಿದ್ದಿದರು ಸರಿ ಹೋಗದ ನಮ್ಮನ್ನು ತಿದ್ದಿ ತೀಡುತ್ತಾ, ಪದೇ ಪದೇ ರಿಪೇರಿ ಮಾಡುತ್ತಾ, ಪ್ರಬುದ್ಧ ಸಮಾಜ ಕಟ್ಟಲು ತ್ರಿವಿಕ್ರಮನಂತೆ ಕಾಯ, ವಾಚಾ, ಮನಸಾ ಶ್ರಮಿಸುತ್ತಿರುವ ಗ್ರಹಣ ಹಿಡಿದ ಒಬ್ಬ ಮಹಾ ಹುಚ್ಚ ಎನ್ನಲೇ….
ಅಥವಾ…
ಪ್ರಬುದ್ಧ ಮನಸ್ಸಿನ ಒಬ್ಬ ಅದ್ವಿತೀಯ, ವಿಚಿತ್ರ ಸಾಮಾಜಿಕ ಹರಿಕಾರ ಎನ್ನಲೇ….
ಅಥವಾ….
ಎಂದೂ ಸರಿಯಾಗದ ನಮ್ಮ ಸಮಾಜವನ್ನು ಪದೇ ಪದೇ ನಿಮ್ಮ ಚಿಂತನಾಯುಕ್ತ ಬರಹಗಳ ಮುಖಾಂತರ ರಿಪೇರಿ ಮಾಡಲು ಹೊರಟಿರುವ ಒಬ್ಬ ಸೋಶಿಯಲ್ ಮೆಕಾನಿಕ್ ಎನ್ನಲೇ…
ಅಥವಾ…
ಪ್ರಬುದ್ಧ ಸಮಾಜ ಮತ್ತು ಪ್ರಬುದ್ಧ ಮನಸ್ಸಿನ ಕನಸನ್ನು ಯಾವಾಗಲೂ ಹೆಗಲಿಗೆ ಕಟ್ಟಿಕೊಂಡು ಅಲೆಯುವ ಒಬ್ಬ ಮಹಾ ಯಾತ್ರಿಕ ಎನ್ನಲೇ….
ಪ್ರತಿನಿತ್ಯ, ಪ್ರತಿಯೊಂದು ಬರಹದಲ್ಲೂ ಒಂದೊಂದು ರೀತಿಯ ವ್ಯಕ್ತಿತ್ವ ಭಾಸವಾಗುವ ನಿಮ್ಮ ಬಹುಮುಖಿ ವ್ಯಕ್ತಿತ್ವದ ಪುಣ್ಯಾತ್ಮ ನಿಮ್ಮನ್ನು ಏನೆಂದು ಅರ್ಥೈಸಲಿ ಅಥವಾ ಬಣ್ಣಿಸಲಿ….
ವಿವೇಕ + ಆನಂದ = ಯಾವಾಗಲೂ ಆನಂದದಿಂದ, ವಿವೇಕದಿಂದ ಚಿಂತಿಸುವ ವಿವೇಕಾನಂದ. ಎಚ್ ಕೆ ನೀವೇನಾ?
ಏಕೋ.. ಏನೋ…. ಗೊತ್ತಿಲ್ಲ ಇವತ್ತಿನ ನಿಮ್ಮ *ಅಂತರಂಗದ ಪಯಣ* ಕಿರು ಲೇಖನ ಓದಿ ಈ ಎಲ್ಲಾ ಪ್ರಶ್ನೆಗಳನ್ನು ನಿಮ್ಮಲ್ಲಿ ಕೇಳಬೇಕೆನಿಸಿತು.
ಇತಿ ನಿಮ್ಮ ಬರಹಗಳ ಓದುಗ,
ಶ್ರೀನಿವಾಸ್. ಪಿ. ಸಿ.
9868170790
ಸಂಸ್ಥಾಪಕ – ಸಿ ಇ ಓ
ಇಂಡಿಯಾ ಫಾರ್ ಐಎಎಸ್ ಅಕಾಡೆಮಿ, ಬೆಂಗಳೂರು……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……..