ಶ್ರೀ ಗುರುಜ್ಯೋತಿ ರಥಯಾತ್ರೆಗೆ ಚಕ್ಕುಡಿಗೆಯಲ್ಲಿ ಭವ್ಯ ಸ್ವಾಗತ*
1 min read![](https://avintv.com/wp-content/uploads/2025/02/IMG-20250201-WA0457-1024x771.jpg)
*ಶ್ರೀ ಗುರುಜ್ಯೋತಿ ರಥಯಾತ್ರೆಗೆ ಚಕ್ಕುಡಿಗೆಯಲ್ಲಿ ಭವ್ಯ ಸ್ವಾಗತ*
**************************************
ಮೂಡಿಗೆರೆ : ಗುರು ತೋರಿದ ದಾರಿ ತಿಂಗಳ ಮಾಮನ ತೇರು ಶತೋತ್ತರ ರಜತ 125ನೇ ಪವಿತ್ರ ಹುಣ್ಣಿಮೆ ಹಾಗೂ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಹಳಿ ಅನಾವರಣ ಪ್ರಚಾರದ ಪ್ರಯುಕ್ತ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ಪುತ್ತಳಿ ರಥಪೂಜೆ ಹಾಗೂ ಕೆಂಪೇಗೌಡರ ಪುತ್ಥಳಿ ಅನಾವರಣಕ್ಕೆ ಹೆಗ್ಗರವಳ್ಳಿ ಮತ್ತು ಚಕ್ಕುಡಿಗೆ ಗ್ರಾಮದ ಪವಿತ್ರ ಮಣ್ಣು ಸಂಗ್ರಹಕ್ಕೆ ಗುರು ಜ್ಯೋತಿ ರಥಯಾತ್ರೆ ಚಕ್ಕುಡಿಗೆಗೆ ಆಗಮಿಸಿದ್ದು ರಥವನ್ನು ಸಿ ಆರ್ ನೇಮರಾಜ್ ಮತ್ತು ಹೆಚ್ ಟಿ ಸುಧಾಕರ್ ಅವರ ನೇತ್ರದಲ್ಲಿ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ಗುರುಜ್ಯೋತಿ ರಥಕ್ಕೆ ಗ್ರಾಮದ ಮಹಿಳೆಯರಿಂದ ಆರತಿ ಎತ್ತಿ ಸ್ವಾಗತ ಮಾಡಿ ವಿಧಿ ವಿಧಾನಗಳೊಂದಿಗೆ ಹೆಗ್ಗರವಳ್ಳಿ ಮತ್ತು ಚಕ್ಕುಡಿಗೆ ಗ್ರಾಮಸ್ಥರು ಸಂಗ್ರಹಿಸಿದ ಪವಿತ್ರ ಮಣ್ಣನ್ನು ಸ್ವೀಕರಿಸಿ ಮಾತನಾಡಿದ ಹಾನುಬಾಳು ಹೋಬಳಿ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಾಜೀವ್ ದಿನಾಂಕ 13.02.2025 ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾಪನ ಮಠ ಸಕಲೇಶಪುರ ತಾಲೂಕು, ಒಕ್ಕಲಿಗರ ಸಂಘದ ವತಿಯಿಂದ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆಯು ಫೆಬ್ರುವರಿ 13, 14 ಮತ್ತು 15 ರಂದು ಲೋಕಾರ್ಪಣಗೊಳ್ಳಲಿದ್ದು
125ನೇ ಹುಣ್ಣಿಮೆ ಶಶೋತ್ತರ ರಜತ ಹುಣ್ಣಿಮೆ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ತಳಿ ಅನಾವರಣ ಕಾರ್ಯಕ್ರಮಕ್ಕೆ ಹೆಗ್ಗರವಳ್ಳಿ ಮತ್ತು ಚಕ್ಕುಡಿಗೆ ಗ್ರಾಮಸ್ಥರುಗಳಿಗೆ ಅಹ್ವಾನ ನೀಡಿದರು.
ರಥಸ್ವಾಗತ ಸಮಾರಂಭದಲ್ಲಿ ಗ್ರಾಮದ ಮುಖಂಡರದ ಹೆಚ್.ಏನ್ ಪರಮೇಶ್, ಯು ಎನ್ ಚಂದ್ರೇಗೌಡ, ಸಿ ಎಸ್ ಲಕ್ಷ್ಮಣ, ಹೆಚ್ ಟಿ ಸುರೇಂದ್ರ, ಸಿ ಅರ್ ಯುವರಾಜ್, ಯು ಪಿ ನಾರಾಯಣಗೌಡ, ಯು ಎಲ್ ಲಕ್ಷ್ಮಣ ಗೌಡ, ಗಣೇಶ್ ಹೆಚ್ ಪಿ, ಉಮೇಶ್ ಸಿ ಎಲ್,ಸುದರ್ಶನ್, ಕಿರಣ್ ಕುಮಾರ್ ಸಿ ಇ, ಶ್ರೀಮತಿ ಯಶೋದ, ಕುಮಾರಿ ತ್ರಿಶ ಸಿ ಯು, ಮೂರ್ತಿ ಹೆಚ್ ಡಿ,ಯೋಗೇಂದ್ರ ಹೆಚ್. ಇ, ಗಣೇಶ್ ಹೆಚ್ ಪಿ ಮತ್ತು ಒಕ್ಕಲಿಗ ಸಂಘದ ಕಾರ್ಯದರ್ಶಿ ಸ್ವಾದೀಶ್, ನಿರ್ದೇಶಕರಾದ ಹೆಚ್ ಕೆ ಶಿವಕುಮಾರ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ
ಸಿ. ಎಲ್ ಪೂರ್ಣೇಶ್ ಚಕ್ಕುಡಿಗೆ