ಮೂಡಿಗೆರೆ: ವಿದ್ಯುತ್ ಕಡಿತ ಮಾಡಿದರೆ ಪ್ರತಿಭಟನೆ: ಎಚ್ಚರಿಕೆ ನೀಡಿದ ಹಳಸೆ ಶಿವಣ್ಣ.
1 min read![](https://avintv.com/wp-content/uploads/2025/02/IMG-20250201-WA0343-1024x768.jpg)
ಮೂಡಿಗೆರೆ: ವಿದ್ಯುತ್ ಕಡಿತ ಮಾಡಿದರೆ ಪ್ರತಿಭಟನೆ: ಎಚ್ಚರಿಕೆ ನೀಡಿದ ಹಳಸೆ ಶಿವಣ್ಣ.
ಹಿಂದಿನ ಸರ್ಕಾರ ಕಾಫಿ ಬೆಳೆಗಾರರ ಹತ್ತು ಹೆಚ್ ಪಿ ಒಳಗಿನ ವಿದ್ಯುತ್ ಮೋಟಾರ್ ಬಿಲ್ ಅನ್ನು ಮನ್ನಾ ಮಾಡುವುದಾಗಿ ಮತ್ತು ಉಚಿತ ವಿದ್ಯುತ್ ಕೊಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ಇದನ್ನ ಈಗಿನ ಸರ್ಕಾರ ಗಮನಹರಿಸಿ ಕೂಡಲೇ ಬೆಳೆಗಾರರ ನೆರವಿಗೆ ದಾವಿಸಬೇಕು ಎಂದು ರಾಜ್ಯ ಬೆಳೆಗಾರರ ಸಂಘದ ಅಧ್ಯಕ್ಷ ಹಳಸೆ ಶಿವಣ್ಣ ಆಗ್ರಹಿಸಿದರು.
ವಿದ್ಯುತ್ ನಿಗಮದ ಕಚೇರಿಯಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ನಡೆದ ಪ್ರತಿಭಟನೆಯಲ್ಲಿ ಹತ್ತು ಎಚ್ ಪಿ ಒಳಗಿನ ಬೆಳೆಗಾರರ ಪಂಪ್ಸೆಟ್ ಗೆ ನೀಡಲಾದ ವಿದ್ಯುತ್ ಅನ್ನು ಕಡಿತಗೋಳಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಕಡಿತಗೊಳಿಸುತ್ತಿದ್ದು ಇದರಿಂದ ಕಾಫಿ ಪಲ್ಸರ್ ಮಾಡುವ ಮತ್ತು ಅಡಿಕೆ, ಕಾಫಿ, ಕಾಳುಮೆಣಸು, ಎಲಕ್ಕಿ ಗಿಡಗಳಿಗೆ ನೀರುಣಿಸುವ ಸಮಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತೆ ಮಾಡುತ್ತಿದ್ದು, ಇದರಿಂದ ಬೆಳೆ ಒಣಗುತ್ತಿದೆ.
ರೈತರ ಅದಾಯದ ಮೂಲವನ್ನೆ ಹೊಸಕಿ ಹಾಕಲಾಗುತ್ತಿದೆ. ಪ್ರಮುಖವಾಗಿ ದೇಶಕ್ಕೆ ಡಾಲರ್ ನಂತಹ ಆಗಾದ ವಿದೇಶಿ ವಿನಿಮಯ. ಲಕ್ಷಾಂತರ ಉದ್ಯೋಗ ತಂದು ಕೊಡುವ ಕಾಫಿ ಬೆಳೆಗೆ ಸಮಸ್ಯೆ ಆಗುತ್ತಿದ್ದು, ಈಗಾಗಲೆ ಸರಕಾರದೊಂದಿಗೆ ಮಾತುಕತೆ ಮಾಡುತ್ತಿದ್ದು ಮುಂದಿನ ಆದೇಶ ಬರುವವರೆಗೂ ಯಾವ ರೈತರ ವಿದ್ಯುತ್ ಕಡಿತವನ್ನು ಮಾಡಬಾರದು ಎಂದರು. ಬೆಳೆಗಾರರ ಆಹವಾಲನ್ನು ಧಿಕ್ಕರಿಸಿದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಅಮರನಾಥ್ ಮಾತನಾಡಿ, ರಾಜ್ಯದಲ್ಲಿ ಬಹುತೇಕ ಎಲ್ಲರಿಗೂ ಉಚಿತ ವಿದ್ಯುತ್ ನೀಡುತ್ತಿದ್ದು, ಇದರ ಹೊರೆಯನ್ನು ತಗ್ಗಿಸಲು ಕಾಫಿ ಬೆಳೆಗಾರರು ಮತ್ತು ರೈತರ ಮೇಲೆ ಸರ್ಕಾರ ಪ್ರಹಾರ ಮಾಡಲು ಹೊರಟಿದೆ. ಕೇವಲ ಮೂರು ತಿಂಗಳು ಬಳಸುವ ವಿದ್ಯುತ್ ಗೆ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದೆ.
ಸಂಕಷ್ಟದ ಕೃಷಿಯ ಸಂದರ್ಭದಲ್ಲಿ ಯುವ ಪೀಳಿಗೆ ಕೃಷಿಯಿಂದ ವಿಮುಕ್ತಿ ಹೊಂದುತ್ತಿದ್ದು, ಸರ್ಕಾರ ಮತ್ತು ಅಧಿಕಾರಿಗಳ ದ್ವಿಮುಖ ನೀತಿಯಿಂದ ರೈತರಿಗೆ ಕೃಷಿಯೇ ಬೇಡ ಎಂಬ ಸ್ಥಿತಿಗೆ ಬರಲು ಕಾರಣವಾಗುತ್ತಿದ್ದು ಕೂಡಲೇ ರೈತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತಡೆಯಬೇಕು ಎಂದು ತಿಳಿಸಿದರು.