ಡರ್ಟ್‌ಫಸ್ಟ್ 2025 ಟೈಮ್ ಅಟಾಕ್ ಕಾರು ಗ್ಯಾಲಿ
1 min readಡರ್ಟ್‌ಫಸ್ಟ್ 2025 ಟೈಮ್ ಅಟಾಕ್ ಕಾರು ಗ್ಯಾಲಿ
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಸ್ಪೋರ್ಟ್ಸ್ ಕ್ಲಬ್‌ನಿಂದ ಡರ್ಟ್‌ಫಸ್ಟ್ 2025 ಟೈಮ್ ಅಟಾಕ್ ಕಾರು ಬ್ಯಾಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಅಲ್ಮಾಸ್ ಅಹಮದ್ ತಿಳಿಸಿದರು.
ಅವರು ಇಂದು ವಾಹಿನಿಯೊಂದಿಗೆ ಮಾತನಾಡಿ, ತಾಲೂಕಿನ ಬಂಡಿಹಳ್ಳಿಯಲ್ಲಿರುವ ಈಶ್ವರ ದೇವಾಸ್ಥಾನದ ಎದುರು ಇರುವ ಖಾಲಿ ಜಾಗದಲ್ಲಿ ರಾಲಿ ಆಯೋಜಿಸಲಾಗಿದೆ. ಜ.25 ರಂದು ನೊಂದಣಿ, ಟ್ರ್ಯಾಕ್ ವಾಕ್, ವೀಕ್ಷಣೆ, ದಾಖಲಾತಿ ಪರಶೀಲನೆ ಪ್ರಕ್ರಿಯೆಗಳು ನಡೆಯುತ್ತವೆ ಎಂದರು.
ಸಾಧ್ಯವಾದರೆ ಒಂದರೆಡು ವಿಭಾಗದಲ್ಲಿ ಸ್ಪರ್ಧೆ ನಡೆಸುತ್ತೇವೆ. ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಇಡೀ ದಿನ ವಿವಿಧ ವಿಭಾಗದಲ್ಲಿ ರಾಲಿಯ ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕ ಸೇರಿದಂತೆ ನಾಗಲ್ಯಾಂಡ್, ಕೇರಳ, ತಮಿಳುನಾಡು, ಕೊಯಮತ್ತೂರು, ದೆಹಲಿ ಮತ್ತಿತರೆ ಕಡೆಯಿಂದ ಸ್ಪರ್ಧಿಗಳು ನೋಂದಣಿ ಮಾಡಿಕೊಂಡಿದ್ದು, ಒಟ್ಟು 150 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಇದರಲ್ಲಿ ಮಹಿಳಾ ಸ್ಪರ್ಧಿಗಳು ಇದ್ದಾರೆ ಎಂದು ಹೇಳಿದರು.
ಆಯೋಜಕರಾದ ಭಾಸ್ಕರ್‌ಗುಪ್ತ ಮಾತನಾಡಿ ಸ್ಪರ್ಧೆಯಲ್ಲಿ ವಿಜೇತ ಅಭ್ಯರ್ಥಿಗಳಿಗೆ 1 ಲಕ್ಷ ರೂ ನಗದು ಬಹುಮನ ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಿದ್ದಾರ್ಥ್, ವಿಶ್ವನಾಥ್ ಉಪಸ್ಥಿತರಿ ದ್ದರು.