ಸರಣಿ ಅಪಘಾತ: ನಾಲ್ವರಿಗೆ ಗಾಯ
1 min readಸರಣಿ ಅಪಘಾತ: ನಾಲ್ವರಿಗೆ ಗಾಯ
ಮೂಡಿಗೆರೆ: ಲಾರಿ, ಒಮಿನಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಾಯಗೊಂಡ ಘಟನೆ ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಹ್ಯಾಂಡ್‌ಪೋಸ್ಟ್ ಬಳಿ ಗುರುವಾರ ಸಂಜೆ ನಡೆದಿದೆ.
ಜನ್ನಾಪುರದಿಂದ ಮೂಡಿಗೆರೆ ಕಡೆಗೆ ತೆರಳುತ್ತಿದ್ದ ಒಮಿನಿ ಕಾರೊಂದು ಮುಂದೆ ಸಾಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದು, ನಂತರ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಹಿಂದೆ ಕುಳಿತಿದ್ದ ಮಹಿಳೆ ಹಾಗೂ ಒಮಿನಿ ಕಾರಿನಲ್ಲಿದ್ದ ಚಾಲಕನಿಗೆ ಗಂಭೀರ ಗಾಯಗೊಂಡಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಹಾಗೂ ಒಮಿನಿ ಕಾರಿನಲ್ಲಿದ್ದ ಚಾಲಕನ ಪತ್ನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಗಾಯಗೊಂಡಿದ್ದ ನಾಲ್ವರನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಡಿಕ್ಕಿಯ ರಬಸಕ್ಕೆ ಒಮಿನಿ ಕಾರು ಮತ್ತು ಬೈಕ್ ನಜ್ಜುಗುಜ್ಜಾಗಿದೆ.