ಆತ್ಮೀಯ ರೈತ ಬಾಂಧವರೇ
1 min readಆತ್ಮೀಯ ರೈತ ಬಾಂಧವರೇ
ಮೂಡಿಗೆರೆ ತಾಲೂಕಿನ ವಿವಿಧ ಸ್ಥಳಗಳಲ್ಲಿ ಮೆಸ್ಕಾಮ್ ನಿಂದ ವಿದ್ಯುತ್ ಸಂಪರ್ಕ ಪಡೆದು ಕಾರಣಾಂತರದಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ರೈತರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಪ್ರಕ್ರಿಯೆಯನ್ನು ಜಾರಿಗೊಳಿಸಿದ್ದಾರೆ ಸರ್ಕಾರದ ಆದೇಶದ ಪ್ರಕಾರ ರೈತರ ವಿದ್ಯುತ್ ಸಂಪರ್ಕಗಳನ್ನು ದಿಢೀರ್ ಎಂದು ಕಡಿತಗೊಳಿಸುವಂತಿಲ್ಲ ಅಲ್ಲದೆ ಬಾಕಿ ಮನ್ನಾ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆಯಲ್ಲಿದೆ ಈ ಹಂತದಲ್ಲಿ ಬೆಸ್ಕಾಂ ಅಧಿಕಾರಿಗಳು ಆತುರಾತುರವಾಗಿ ಸಂಪರ್ಕವನ್ನು ಕಡಿತಗೊಳಿಸಲು ಮುಂದಾಗುತ್ತಿದ್ದಾರೆ ಈಗ ರೈತರಿಗೆ ಅಗತ್ಯವಾಗಿ ಸ್ಪಿಂಕ್ಲರ್ ಮಾಡಲು ಪಲ್ಪರ್ ಮಾಡಲು ವಿದ್ಯುತ್ ಅಗತ್ಯವಿರುವುದನ್ನು ಮನಗಂಡು ಈ ಸಂದರ್ಭದಲ್ಲಿ ರೈತರ ಮೇಲೆ ಪ್ರಹಾರ ಮಾಡಲು ವಿದ್ಯುತ್ ಇಲಾಖೆ ಒಂದಾಗಿದೆ ಅದರಿಂದ ಇದರ ಬಗ್ಗೆ ದೀರ್ಘವಾಗಿ ಚರ್ಚಿಸಿ ಮೆಸ್ಕಾಂ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ಸರ್ಕಾರದಿಂದ ಅಧಿಕೃತ ಆದೇಶ ಬರುವವರೆಗೆ ಯಾವುದೇ ರೈತರ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಬಾರದೆಂದು ಮನವಿ ಮಾಡಲು ನಾಳೆ ಶುಕ್ರವಾರ 10:30ಕ್ಕೆ ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಐಪಿ ಸೆಟ್ ಹೊಂದಿರುವ ರೈತರು ಚರ್ಚೆ ನಡೆಸಿ ಬೆಸ್ಕಾಂ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಕೆಚ್ಚಿಸಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ಕಾಫಿ ಬೆಳೆಗಾರರು ಆಗಮಿಸಬೇಕಾಗಿ ವಿನಂತಿ.
ದಯಾಕರ್.ಬಾಳಳ್ಳಿ.
ರೈತ ಹೋರಾಟಗಾರರು