ಮಲೆನಾಡಿನಲ್ಲಿ ರಾಜಕೀಯ ಕಿಚ್ಚು
1 min readಚಿಕ್ಕಮಗಳೂರು: ಮಲೆನಾಡಿನಲ್ಲಿ ರಾಜಕೀಯ ಕಿಚ್ಚು ಹೆಚ್ಚಾಗಿ ಇರಲಿಲ್ಲ ಆದರೆ ಬಯಲುಸೀಮೆ ರಾಜಕಾರಣದಲ್ಲಿ ಸದಾ ಕಿತ್ತಾಟ ಮಾರಮಾರಿ ಪ್ರತಿಭಟನೆ ಸಾಮಾನ್ಯವಾಗಿ ಇದ್ದವು. ಹಳ್ಳಿಯಲ್ಲಿ ಪಕ್ಷ, ಪಕ್ಷ ಎಂದು ಜಟಾಪಟಿ ಇರುತ್ತಿದ್ದವು .ಆದರೆ ಮಲೆನಾಡಿನಲ್ಲಿ ಚುನಾವಣೆಯಲ್ಲಿ ಮಾತ್ರ ಪಕ್ಷ ರಾಜಕಾರಣ ಇದ್ದು ಚುನಾವಣೆ ಮುಗಿಯುತ್ತಿದಂತೆ ಬಾವ,ನೆಂಟ ಎಂದು ಹೆಗಲ ಮೇಲೆ ಕೈಹಾಕಿಕೊಂಡು ಸಹಬಾಳ್ವೆ ಮಾಡುತ್ತಿದ್ದರು.
ಬಯಲುಸೀಮೆಯಲ್ಲಿ ರಾಜಕೀಯ ಕಿತ್ತಾಟ ಕಡಿಮೆ ಆಗಿವೆ.ಕೋರ್ಟ್ ಕಛೇರಿ ತಿರುಗುವವರ ಕಡಿಮೆ ಆಗಿ ಅಡ್ಜಸ್ಟಮೆಂಟ್ ರಾಜಕೀಯ ನಡೆಯುತ್ತಿದೆ ಆದರೆ ಮಲೆನಾಡಿನ ಶೃಂಗೇರಿ ಕ್ಷೇತ್ರದಲ್ಲಿ ಪದೇ,ಪದೇ ಕಿತ್ತಾಟ ಮತ್ತು ಪ್ರತಿಭಟನೆ ನಡೆಯುತ್ತಿದೆ.
ಶಾಸಕ ಟಿ.ಡಿ.ರಾಜೇಗೌಡv/s ಮಾಜಿ ಶಾಸಕ ಜೀವರಾಜ್ ಕಿತ್ತಾಟ ಪರಸ್ಪರ ಹೇಳಿಕೆ ಪ್ರತಿಹೇಳಿಕೆ ಪದೇ,ಪದೇ ನಡೆಯುತ್ತಿದೆ. ಇತ್ತೀಚಿಗೆ ನಡೆಯುತ್ತಿರುವ ಸಹಕಾರಿ ಚುನಾವಣೆಯಲ್ಲಿ ಮತ್ತಷ್ಟು ಹೆಚ್ಚಾಗಿದೆ.
ರಾಜೇಗೌಡರು ಹೇಗಾದರು ಸರಿ ಕಾಂಗ್ರೆಸ್ ನವರನ್ನು ಗೆಲ್ಲಿಸಬೇಕು ಎಂದು ಕಾರ್ಯತಂತ್ರ ರೂಪಿಸಿದರೆ ಇದಕ್ಕೆ ಪ್ರತಿಯಾಗಿ ಜೀವರಾಜ್ ಪ್ರತಿತಂತ್ರ ರೂಪಿಸಿ ಬಿಜೆಪಿ ಗೆಲ್ಲಿಸಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ.
ಇತ್ತೀಚೆಗೆ ಹೇರೂರು ಸಹಕಾರ ಸಂಘ(vssn) ಮತ್ತು ಹಲಂದೂರು ಸಹಕಾರ ಸಂಘಗಳ ನಡೆದು ಹಾದಿ ರಂಪ,ಬೀದಿರಂಪ ಮಾಡಿಕೊಂಡು ಕಿತ್ತಾಟ ನಡೆದಿರುವುದೇ ಸಾಕ್ಷಿ.
ಕಾಂಗ್ರೆಸ್ ನವರು ಕಿತ್ತಾಟವೇನಿಲ್ಲ ಭಜರಂಗದಳವರ ಹಾರಾಟ ಹೆಚ್ಚಾಗಿದೆ ಎಂದರೆ ಬಿಜೆಪಿಯವರು ಅಧಿಕಾರಿಗಳು ಮತ್ತು ಪೊಲೀಸ್ ರ ಬಲ ಬಳಸಿಕೊಂಡು ಅನ್ಯ ಮಾರ್ಗದಲ್ಲಿ ಚುನಾವಣೆ ನಡೆಸುತ್ತಿದ್ದಾರೆ ಎನ್ನುತ್ತಾರೆ.
ರಾಜೇಗೌಡ ಶಾಸರಾದ ಮೇಲೆ ಜೀವರಾಜ್ ಗೆ ಸರಿಯಾಗಿ ನಿದ್ದೆಬರುತ್ತಿಲ್ಲ ಹೀಗಾಗಿ ಸದಾ ವಿರೋಧ ಮಾಡುವುದು ಹೇಳಿಕೆ ನೀಡುವುದರಲ್ಲಿ ನಿರತರಾಗಿ ಆಕ್ಷೇಪ, ಹೇಳಿಕೆ ನೀಡುತ್ತಿದ್ದಾರೆ .
ಒಟ್ಟಾರೆ ಬಯಲು ಸೀಮೆಯಲ್ಲಿ ಸಾಟಿ ವ್ಯಾಪಾರ ನಡೆದರೆ ಮಲೆನಾಡಿನಲ್ಲಿ ಸದಾ ಒಂದಲ್ಲ ಒಂದು ಜಟಾಪಟಿ ನಡೆಯುತ್ತಿದೆ.