ಸುದ್ದಿ ಮಾಡಲು ಹೋಗಿ ಸುದ್ದಿಯಾದ ಯೂಟ್ಯೂಬರ್
1 min readಸುದ್ದಿ ಮಾಡಲು ಹೋಗಿ ಸುದ್ದಿಯಾದ ಯೂಟ್ಯೂಬರ್
ಬಿದರತಳ ಗ್ರಾಮದ ವಿಡಿಯೊ ಚಿತ್ರೀಕರಣಕ್ಕೆ ಬಂದ ಸಂದರ್ಭ ಆನೆ ನೋಡಿ ಕಂದಕಕ್ಕೆ ಬಿದ್ದು ಗಾಯಗೊಂಡ ಯೂಟೂಬರ್ .
ಸುದ್ದಿ ಮಾಡಲು ಹೋಗಿ ಯೂಟ್ಯೂಬರ್ ಒಬ್ಬ ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
‘ಚನ್ನರಾಯಪಟ್ಟಣ ಅಭಿಷೇಕ್ ಪಾರಾದವರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಟ್ಟ ಕಡೆಯ ಗ್ರಾಮವಾದ ಬಿದರತಳ ಗ್ರಾಮದ ವಿಡಿಯೊ ಚಿತ್ರೀಕರಣ ಮಾಡಲು ಮಂಗಳವಾರ ಸಂಜೆ ಗ್ರಾಮಕ್ಕೆ ಹೋಗಿದ್ದಾರೆ. ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ಕಚ್ಚಾರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಡಾನೆ ಒಂದುಏಕಾಏಕಿ ದಾಳಿಗೆ ಮುಂದಾಗಿದೆ. ಆನೆಯನ್ನು ಕಂಡ ಅಭಿಷೇಕ್ ಕೂದಲೆಳೆ ಅಂತರದಲ್ಲಿ ಕಂದಕಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾಲು ಹಾಗೂ ಮೂಗಿನ ಭಾಗಕ್ಕೆ ಗಂಭೀರ ಪೆಟ್ಟಾಗಿದೆ. ವಿಷಯ ತಿಳಿಯು ತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಮಾಜ ಸೇವಕ ಆರೀಫ್ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ಕಳಿಸಲಾಯಿತು. ಈ ಸಂದರ್ಭ ನವೀನ್, ಸಂಜಯ್ ಗೌಡ ಕೊಟ್ಟಿಗೆಹಾರ, ಗಿರೀಶ್, ಸುಂದರೇಶ್ ಮತ್ತಿತರರಿದ್ದರು.
ہے