B. K. Sundresh ಬಿ.ಕೆ.ಸುಂದರೇಶ್.ಒಂದು ನೆನಪು.
1 min readಬಡವರ ಹೃದಯದ ಕೆಂಪು ಸೂರ್ಯ: ಬಿ ಕೆ ಸುಂದರೇಶ್
ಮಲೆನಾಡಿನ ಹಸಿರಿನೊಳಗೆ ಕಾಫೀಯ ಘಮಲು ಅಲ್ಲಲ್ಲಿ ಟೀ ಸುವಾಸನೆ ನಡುವೆ ಹುದುಗಿ ಹೋಗಿದ್ದ ಬಡವರ ,ಕಾರ್ಮಿಕರ ಕಷ್ಟಗಳಿಗೆ ಹೋರಾಟದ ಮೂಲಕ ದಾರಿ ತೋರಿ ಎಲ್ಲಾ ಶೋಷಿತ ಸಮುದಾಯದ ರೈತಾಪಿ ವರ್ಗ, ಕಾರ್ಮಿಕ ವರ್ಗದ ಹೃದಯದ ಅಂತರಾಳದಲ್ಲಿ ಇವತ್ತಿಗೂ ಮರೆಯದ ನಾಯಕನಾಗಿ ಉಳಿದುಕೊಂಡಿರುವ ಬಿ ಕೆ ಸುಂದರೇಶ್ ನಮ್ಮನ್ನು ಅಗಲಿ ಇಂದಿಗೆ 30 ವರ್ಷ ಆದರೆ ಇಂದಿಗೂ ಮಲೆನಾಡಿನ ಮೂಲೆ ಮೂಲೆಗಳಲ್ಲಿ ಅಡಗಿರುವ ಪ್ರತಿ ಮನೆಗಳಲ್ಲಿ ಇವತ್ತಿಗೂ ಅವರ ಫೋಟೋ ಇದೆ ಎಂದರೆ ಬದುಕಿನುದ್ದಕ್ಕೂ ಅವರ ಹೋರಾಟದ ಹಾದಿಯ ಬದ್ಧತೆ ಜನರ ನಡುವೆ ಅವರ ಹಕ್ಕುಗಳಿಗಾಗಿ ಸವೆಸಿದ ಹೆಜ್ಜೆ ಜನರಿಂದ ಇಂದು ದೂರ ಸರಿಯದಂತೆ ಮಾಡಿಬಿಟ್ಟಿದೆ
ಸುಂದರೇಶ್ ತಮ್ಮ ಜೀವನವನ್ನು ರಾಜಕೀಯ ಮತ್ತು ಸಾಮಾಜಿಕ ಹೋರಾಟಕ್ಕೋಸ್ಕರವೇ ರೂಪಿಸಿಕೊಂಡವರು ವಿದ್ಯಾರ್ಥಿ ದೆಸೆಯಿಂದಲೇ ಮಾರ್ಕ್ಸ ವಾದಿ ಸಿದ್ಧಾಂತವನ್ನು ಆಳವಾಗಿ ಅಧ್ಯಯನ ಮಾಡಿ ವರ್ಗರಹಿತ ಸಮಾಜವನ್ನು ಕಟ್ಟುವ ಕನಸು ಕಂಡವರು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸಕ್ರಿಯ ಸದಸ್ಯರಾಗಿ ತಮ್ಮ ನಿಷ್ಠುರ ವ್ಯಕ್ತಿತ್ವ ತಮ್ಮ ಬಡವರ ಬದುಕಿನ ಚಿಂತನೆಗಳಿಂದ ಚಿಕ್ಕ ವಯಸ್ಸಿಗೆ ಬಹು ದೊಡ್ಡ ಹುದ್ದೆಗಳನ್ನು ಅಲಂಕರಿಸಿದವರು ಚಿಕ್ಕಮಗಳೂರು ಜಿಲ್ಲೆಯ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯದ ಹತ್ತಿರದಲ್ಲಿ ಸೋತಾಗ ರಾಜಕೀಯ ವಿಶ್ಲೇಷಣೆಗಾರರೇ ಅಚ್ಚರಿಗೊಂಡಿದ್ದರು ಅಷ್ಟರಲ್ಲಿಯೇ ಅವರು ಜನರೊಂದಿಗೆ ಬೆರೆಯುತ್ತಿದ್ದ ಸರಳತೆ ಬೆರೆಯುವ ಪ್ರವೃತ್ತಿ ಅವರ ಮಾತುಗಳು ಜನರಿಗೆ ಶಕ್ತಿಯಾಗಿ ಮಾರ್ಪಟ್ಟಿತ್ತು ಅವರ ಓದು ಅವರನ್ನು ಈ ಹಂತಕ್ಕೆ ಬೆಳೆಸಿತ್ತು ಜಾಗತೀಕರಣ ,ಖಾಸಗೀಕರಣ,ಉದಾರೀಕರಣದ ಪರಿಣಾಮವನ್ನು ಸುಂದರೇಶ್ ಈ ದೇಶಕ್ಕೆ ಕಾಲಿಟ್ಟಾಗ ಗ್ಯಾಟ್ ಡೆಂಕಲ್ ಒಂದು ವಿಷ ಸರ್ಪ ಎಂಬ ಪುಸ್ತಕ ಬರೆದು ಜನರನ್ನು ಎಚ್ಚರಿಸಿದರು ಜನರ ಬದುಕಿನ ನೆಲೆಗಾಗಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸೂರಿನ ಹೋರಾಟ ಹೊಸ ಊರುಗಳನ್ನೇ ನಿರ್ಮಿಸಿ ಚಳುವಳಿಗಳ ಮೂಲಕ ಜನರಿಗೆ ಆಶ್ರಯ ಕಲ್ಪಿಸಿದ ರೀತಿ ಯಾವುದೇ ಸರ್ಕಾರ ಮಾಡದ ಕೆಲಸವನ್ನು ಅವರು ಹೋರಾಟದ ಮೂಲಕ ಮಾಡುತ್ತಿದ್ದರು ಅಷ್ಟೇ ಜನರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂಬ ಅವರ ಕನಸು ಉತ್ತಮ ಉದಾಹರಣೆ ಸಹಕಾರ ಸಾರಿಗೆ ಬಸ್ಸನ್ನು ಕಟ್ಟಿ ಬೆಳೆಸಿದ ರೀತಿ ಇಡೀ ಏಷ್ಯಾದಲ್ಲಿಯೇ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಪ್ರಶಸ್ತಿ ಬರಲು ಸುಂದರೇಶ್ ತ್ಯಾಗ ದೂರ ದೃಷ್ಟಿ ಇದೆ ಅಂತಹ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ನಂತರ ಇಂದು ಅಂತಹ ನಾಯಕ ಇಲ್ಲದೇ ರಾಜಕೀಯ ಪ್ರವೇಶ ಒಂದು ಸಹಕಾರ ಸಂಸ್ಥೆ ಅದೋಗತಿಗೆ ತಲುಪಿದ ರೀತಿ ವಿಪರ್ಯಾಸ ಜಿಲ್ಲೆಯ ಕಾಫಿ ಪ್ಲಾಂಟೇಶನ್ ತೋಟದ ಕಾರ್ಮಿಕರಿಗೆ ದೇವರಾಗಿ ಅವರ ಹಕ್ಕುಗಳಿಗೆ ದಿನನಿತ್ಯ ಬಡಿದಾಡಿ ಕೊಳ್ಳುತ್ತಿದ್ದ ಸುಂದರೇಶ್ ಮತ್ತು ಅವರ ಒಡನಾಡಿಗಳ ಋಣ ಅಂದು ಕಾರ್ಮಿಕರಿಗೆ ಅಸಾಧ್ಯವಾಗಿದ್ದ ಸಾರಿಗೆ ವಾಹನ ಇಂದು ಸುಂದರೇಶ್ ಜೊತೆ ಇದ್ದ ಕಾರ್ಮಿಕರ ಮಕ್ಕಳು ಬರಿಗಾಲಲ್ಲಿ ಓಡಾಡಿದ ರಸ್ತೆಯ ಮೇಲೆ ತಮ್ಮ ತಮ್ಮ ಕಾರು ಬೈಕ್ ಗಳ ಮೇಲೆ ಓಡಾಡುತ್ತಿದ್ದರೆ ಅಂದು ತಮ್ಮ ತಂದೆ ತಾಯಿಯರ ಬದುಕಿಗಾಗಿ ಸುಂದರೇಶ್ ಮಾಡಿದ ತ್ಯಾಗದ ಪ್ರತಿಫಲ ಅವರು ಎಲ್ಲಾ ವರ್ಗದ ಜನರ ಸಂಪರ್ಕ ಕೊಂಡಿಯಾಗಿದ್ದರು ಅಂಗನವಾಡಿ ಕಾರ್ಯಕರ್ತೆಯರ ಹೋರಾಟದ ಮುಂಚೂಣಿಯಲ್ಲಿದ್ದರು ತರೀಕೆರೆ ತಾಲ್ಲೂಕಿನ ರೈತರ ಹೋರಾಟ ಅವರನ್ನು ರೈತನಾಯಕನಾಗಿ ಗುರುತಿಸಿತ್ತು ಅವರ ಹೋರಾಟದ ಬದುಕಿಗೆ ಜನ ಸಲ್ಲಿಸಿದ ಗೌರವ 1994 ಡಿಸೆಂಬರ್ 31ರ ರೈಲು ದುರಂತದಲ್ಲಿ ಮಡಿದಾಗ ಜಿಲ್ಲೆಗೆ ಆಗಮಿಸಿದ ಅವರ ಪಾರ್ಥಿವ ಶರೀರ ನೋಡಲು ಸೇರಿದ ಜನ ಸಮೂಹ ತಮ್ಮ ಕುಟುಂಬ ಸದಸ್ಯನನ್ನು ಕಳೆದುಕೊಂಡತೆ ಕಣ್ಣೀರು ಇದುವರೆಗೂ ಜಿಲ್ಜೆಯ ಯಾವ ರಾಜಕಾರಣಿ ,ವ್ಯಕ್ತಿ ಸತ್ತಾಗಲೂ ಜನ ಸೇರಲು ಸಾಧ್ಯವಾಗಲಿಲ್ಲ ಅಂದರೆ ಜನರ ಮನದಲ್ಲಿ ಅವರು ಬೆರೆತಿದ್ದ ರೀತಿ ಅರ್ಥ ಮಾಡಿಕೊಳ್ಳ ಬೇಕು ಜಿಲ್ಲೆಯ ಪ್ರವಾಸೋದ್ಯಮದ ಬಗ್ಗೆ ಅಂದೇ ಬಹಳ ಅಧ್ಯಯನ ಮಾಡಿ ಒಂದು ಪುಸ್ತಕ ಹೊರ ತಂದಿದ್ದರು ಸ್ಥಳೀಯ ಜನರಿಗೆ ಇಲ್ಲಿ ಉದ್ಯೋಗ ಸೃಷ್ಟಿಸುವ ಕನಸು ಕಂಡವರು ಹುಟ್ಟಿದ್ದು 1957 ಜುಲೈ 30 ಬದುಕಿದ್ದು 37 ವರ್ಷ ಅಷ್ಟೊತ್ತಿಗಾಗಲೇ ಜಿಲ್ಲೆಯ ಅಪಾದ್ಭಂದವರಾಗಿ ಬೆರೆತು ನಮ್ಮ ನಡುವೆ ಮರೆತು ಹೋದ ನಾಯಕನ ನೆನಪು ಇಂದಿಗೂ ಉಳಿಸಿ ಹೋಗಿದ್ದು ಅವರ ಹೋರಾಟ
@ರಮೇಶ್ ಕೆಳಗೂರು.