ವಿಶ್ವ ಮಾನವ ದಿನಾಚರಣೆಯ ಪ್ರಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ್ಯಗಾರ..
1 min readಗಿರಿದರ್ಶಿನಿ ಹಾಸ್ಟೇಲ್ ಕಾಲೇಜು ವಿದ್ಯಾರ್ಥಿ ಬಳಗದ ವತಿಯಿಂದ
ವಿಶ್ವ ಮಾನವ ದಿನಾಚರಣೆಯ ಪ್ರಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ್ಯಗಾರವನ್ನು
ನಗರದ ದೀನ್ ದಯಾಳ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಬೆಳ್ಳಗಿನ ಉದ್ಘಾಟನ ಕಾರ್ಯಕ್ರಮದಲ್ಲಿ
ಅಧ್ಯಕ್ಷತೆಯನ್ನು ಸಮರ್ಥ್ ಹೆಚ್. ಕೆ ರವರು ವಹಿಸಿಕೊಂಡಿದರು.
ಉದ್ಘಾಟಕರಾಗಿ ಶ್ರೀಯುತ ಎಂ ಪಿ ಕುಮಾರಸ್ವಾಮಿ ಯವರು ಆಗಮಿಸಿ ಉದ್ಘಾಟನಾ ನುಡಿಗಳುನಾಡಿದರು .
ಶ್ರೀಯುತ ಕೆಂಚಯ್ಯ ಏನ್ ಅತ್ತಿಗೆರೆಯವರು ಕುವೆಂಪು ರವರ ವಿಚಾರ ಮಂಡನೆಯನ್ನು ಮಾಡಿದರು.
ಗೌರವ ಉಪಸ್ಥಿತರಾಗಿ
ಮಾಜಿ ಶಾಸಕರಾದ ಬಿ ಬಿ ನಿಂಗಯ್ಯ, ನಿಲಯದ ಹಳೆ ವಿದ್ಯಾರ್ಥಿ ಬಿ ರುದ್ರಯ್ಯ, ಎಂ ಎಸ್ ಅನಂತ್ ಇದ್ದರು
ಮೂಡಿಗೆರೆ ತಾಲ್ಲೂಕು ದಂಡಧಿಕಾರಿಗಳಾದ ರಾಜಶೇಖರ್ ಮೂರ್ತಿ ಮಾತನಾಡಿ ವಿದ್ಯಾರ್ಥಿಗಳಿಗೆ ಕುವೆಂಪುರವರ ವಿಚಾರಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದರು
ಉಪನ್ಯಾಸಕರಾದ ಶ್ರೀಮತಿ ಎಂ ಬಿ ಸಾವಿತ್ರಮ್ಮನವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು , ಈ ಸಂದರ್ಭದಲ್ಲಿ ಗಿರಿದರ್ಶಿನಿ ವಿದ್ಯಾರ್ಥಿ ನಿಲಯದ ನಿಲಯ ಪಾಲಕರದ ಪ್ರಸಾದ್ ಅರ್, ಕಾಲೇಜು ಬಾಲಕಿಯರ ಹಾಸ್ಟೇಲ್ ವಿದ್ಯಾರ್ಥಿಗಳಾದ ಅನುಷಾ ಹಾಗೂ ದೀಪು ರವರು ಉಪಸ್ಥಿತರಿದ್ದರು.
ಮಧ್ಯಾಹ್ನದ ನಂತರದಲ್ಲಿ
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನೌಷದ್ ಹೆಚ್ ರವರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹೇಗೆ ಎಂಬ ವಿಶೇಷವಾದ ತರಬೇತಿಯನ್ನು ನೀಡಿದರು ಜೊತೆಗೆ ಎಸ್ ಎಸ್ ಎಲ್ ಸಿ ಮತ್ತೆ ಪಿ ಯು ಸಿ ನಂತರ ಯಾವುದೆಲ್ಲಾ ಕೋರ್ಸ್ ಗಳನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.