ಸ್ಮಶಾನ ಜಾಗದ ವಿವಾದ: ಒಕ್ಕಲಿಗರು ವರ್ಸಸ್ ದಲಿತರ ಮಧ್ಯೆ ಜಟಾಪಟಿ.
1 min readಸ್ಮಶಾನ ಜಾಗದ ವಿವಾದ: ಒಕ್ಕಲಿಗರು ವರ್ಸಸ್ ದಲಿತರ ಮಧ್ಯೆ ಜಟಾಪಟಿ.
ಚಿಕ್ಕಮಗಳೂರು. ಜಿಲ್ಲೆ.ಆಲ್ದೂರಿನಲ್ಲಿ
ಹೆಣ ಹೂಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಫಿನಾಡಲ್ಲಿ ಒಕ್ಕಲಿಗರು ವರ್ಸಸ್ ದಲಿತರ ಮಧ್ಯೆ ವಾರ್ ನಡೆದಿದೆ.
ಶವ ಹೂಳುವ ಗುಂಡಿಗೆ ಇಳಿದು ಒಕ್ಕಲಿಗ ಮಹಿಳೆ ತೀವ್ರ ಆಕ್ರೋಶ ವ್ಯಕ್ತಪಡಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಒಕ್ಕಲಿಗರ ಸಮುದಾಯ ಭವನ ವರ್ಸಸ್ ದಲಿತರ ಸ್ಮಶಾನದ ಜಾಗದ ವಿವಾದ ಈಗ ತಾರಕಕ್ಕೆ ಏರಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದ ಬಿರಂಜಿ ಹೊಳೆಪಕ್ಕದ ಸ್ಮಶಾನ ಜಾಗದ ವಿವಾದ ಬೂದಿ ಮುಚ್ಚಿದ ಕೆಂಡದಂತಿತ್ತು.
ಇಂದು ವಿವಾದಿತ ಜಾಗ ನಮ್ಮದೆಂದು ಶವ ಹೂಳಲು ದಲಿತರು ತೆರಳಿದಾಗ ಒಕ್ಕಲಿಗ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ವಿವಾದಿತ ಜಾಗದ ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದು ಒಕ್ಕಲಿಗರ ಗುಂಪು ವಾದಿಸುತ್ತಿದೆ.
ಗುಂಡಿಗೆ ಇಳಿದು ಶವ ಹೂಳಲು ಒಕ್ಕಲಿಗ ಮಹಿಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೂರ್ಣಿಮಾ ಶ್ರೀನಿವಾಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇವರ ಜೊತೆಗೆ ಇನ್ನುಳಿದ ಮೂರ್ನಾಲ್ಕು ಮಹಿಳೆಯರು ಗುಂಡಿಯೊಳಗೆ ಇಳಿದು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ
ತಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಗುಂಡಿಗೆ ಇಳಿದಿದ್ದ ಎಲ್ಲರನ್ನು ಎಳೆದು ಮೇಲೆ ಹಾಕಿದ್ದಾರೆ.
ಠಾಣಾದಿಕಾರಿ ಸಹ ಎಕ ಪಕ್ಷಿಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಸ್ಥಳದಲ್ಲಿ ಬಿಗುವಿನ ವಾತಾವರಣ ಆಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.