“ಗಾಂಜಾ…ಕೋರ್ಟ್ ಕೊಟ್ಟಿದೆ ಸಜಾ…ಪೆಡ್ಲರ್ ಗಳಿಗೆ ಜೈಲೂಟ..”
1 min read
ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಗಾಂಜಾ ಪೆಡ್ಲರ್ ಗಳಿಗೆ ಖಡಕ್ ಸಂದೇಶ ರವಾನೆ ಮಾಡಿದ ನ್ಯಾಯಾಧೀಶರ ತೀರ್ಪು ಆರೋಪಿಗಳಿಗೆ ಹತ್ತು ವರ್ಷ ಕಠಿಣ ಸಜೆ. ತಲಾ ಒಂದು ಲಕ್ಷ ರೂಪಾಯಿ ದಂಡವಿಧಿಸಿ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ. ಗಾಂಜಾ ಮಾಫೀಯಕ್ಕೆ ದೊಡ್ಡ ಪೆಟ್ಟು ನೀಡಿದ ಈ ಸಂದೇಶದಿಂದ ಪೆಡ್ಲರ್ ಗಳ ಎದೆಯಲ್ಲಿ ಢವಢವ. ಕೇವಲ ಸ್ಟೇಷನ್ ಬೇಲ್ ಮೇಲೆ ರಿಲೀಸ್ ಆಗ್ತಿದ್ದ ಎನ್ ಡಿ ಪಿ ಎಸ್ ಕೇಸ್ ಗೆ ಹತ್ತು ವರ್ಷ ಕಠಿಣ ಸಜೆಯಾಗುವಷ್ಟರ ಮಟ್ಟಿಗೆ ಈ ಗಾಂಜಾ ಪ್ರಕರಣ ಗಂಭೀರತೆ ಪಡೆದಿದ್ದು ಹೇಗೆ ಗೊತ್ತಾ..???
ಇಲ್ಲಿದೆ ವಿವರ.
ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನು ಗಾಂಜಾ ಪೆಡ್ಲರ್ ಗಳು ದಂಧೆ ಮಾಡಬೇಕೆಂದರೆ..ಈ ತೀರ್ಪನ್ನು ಓದಲೇ ಬೇಕು. ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿಗಳಿಗೆ ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯ ಪ್ರಕರಣದ ನಾಲ್ವರು ಆರೋಪಿಗಳಿಗೆ ಹತ್ತು ವರ್ಷ ಕಠಿಣ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಢ ವಿಧಿಸಿ ತೀರ್ಪು ನೀಡಿದೆ. ಬಹುಷ ಎನ್‌ಡಿಪಿಎಸ್ ಕೇಸ್ ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿಯ ತೀರ್ಪೊಂದು ಹೊರಬಂದಿದ್ದು, ಗಾಂಜಾ ಮಾಫೀಯಕ್ಕೆ ಖಡಕ್ ಸಂದೇಶ ರವಾನೆ ಮಾಡಿದಂತಿದೆ…ಅಷ್ಟಕ್ಕು ಏನು ಈ ಪಘಟನೆ ಅಂತಿರಾ ಮುಂದೆ ಓದಿ.
2021 ರಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಗಾಂಜಾದಿಂದ ಮುಕ್ತ ಮಾಡುವ ನಿಟ್ಟಿನಲ್ಲಿ ಪಣತೊಟ್ಟಿದ್ದ ಅಂದಿನ ಎಸ್ಪಿ ಲಕ್ಷ್ಮಿ ಪ್ರಸಾದ್ ದೊಡ್ಡ ಬೇಟೆಯಾಡುವ ಮೂಲಕ ಗಾಂಜಾ ಮಾಫೀಯಕ್ಕೆ ಕೊಡಲಿಪೆಟ್ಟು ಕೊಟ್ಟಿದ್ದರು. ಶಿವಮೊಗ್ಗ ನಗರ ಪ್ರವೇಶಿಸಿ,ಯುವಜನತೆನ್ನು ಮಾದಕ ನಶೆಯಲ್ಲಿ ರಂಗೇರಿಸಬೇಕಿದ್ದ, ಸುಮಾರು 21 ಕೇಜಿ 315 ಗ್ರಾಂ ತೂಕದ ಒಣ ಗಾಂಜಾವನ್ನು ತುಂಗಾನಗರ ಪೊಲೀಸರು ವಶಪಡಿಸಿಕೊಂಡಿದ್ದರು. ಇದಕ್ಕಾಗಿ ಇನ್ ಸ್ಪೆಕ್ಟರ್ ದೀಪಕ್ ಎರಡು ತಿಂಗಳ ಕಾಲ ನಿದ್ದೆಗೆಟ್ಟು ಕೆಲಸ ಮಾಡಿದ್ದರು.
ಅಂದು ಆಂದ್ರ ಪ್ರದೇಶದಿಂದ ಗಾಂಜಾ ಶಿವಮೊಗ್ಗಕ್ಕೆ ಬರುವ ಖಚಿತ ಮಾಹಿತಿ ಪೊಲೀಸರಿಗೆ ಗ್ರೌಂಡ್ ಲೆವೆಲ್ ನಲ್ಲಿ ಸಿಕ್ಕಿತ್ತು. ದೊಡ್ಡ ಮಟ್ಟದಲ್ಲಿ ಗಾಂಜಾ ಶಿವಮೊಗ್ಗ ನಗರ ಪ್ರವೇಶಿಸಿದರೆ ಅಪಾಯ ಹೆಚ್ಚೆಂದು ಭಾವಿಸಿದ್ದ ಎಸ್ಪಿ ಲಕ್ಷ್ಮಿ ಪ್ರಸಾದ್ ,ತುಂಗಾನಗರ ಇನ್ ಸ್ಪೆಕ್ಟರ್ ದೀಪಕ್ ಮತ್ತವರ ತಂಡವನ್ನು ಅಲರ್ಟ್ ಮಾಡಿದ್ದರು. ಒಂದುವರೆ ತಿಂಗಳಿನಿಂದ ಗಾಂಜಾ ಬೆನ್ನುಬಿದ್ದಿದ್ದ ತುಂಗಾ ನಗರ ಪೊಲೀಸರಿಗೆ 11-12-21 ರ ಮದ್ಯಾಹ್ನ ಇನ್ನೋವಾ ಕಾರಿನಲ್ಲಿ ಗಾಂಜಾ ಬರುತ್ತಿರುವ ಮಾಹಿತಿ ಸಿಕ್ಕಿತ್ತು.
ಲಕ್ಕಿನಕೊಪ್ಪ ಕ್ರಾಸ್ ಮೂಲಕ ಕಡೇಕಲ್ ಗ್ರಾಮದ ಕಡೆಗೆ ಗಾಂಜಾ ವಾಹನ.
11-12-2021 ರಂದು ಮಧ್ಯಾಹ್ನ ದೌಲತ್, ಮುಜೀಬ್ ಖಾನ್, ಶೋಹೇಬ್ ಮತ್ತು ಮಹಮ್ಮದ್ ಜಫ್ರುಲ್ಲ ಎಂಬುವರು ಆಂಧ್ರಪ್ರದೇಶ ರಾಜ್ಯ ದಿಂದ ನೋಂದಣಿ ಸಂಖ್ಯೆ ಕೆ.ಎ03 ಡಿ-1702 ಇನ್ನೋವಾ ಕಾರ್ ನಲ್ಲಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಲಕ್ಕಿನಕೊಪ್ಪ ಕ್ರಾಸ್ ಮೂಲಕ ಕಡೇಕಲ್ ಗ್ರಾಮದ ಕಡೆಗೆ ಸಾಗಾಟ ಮಾಡಲು ಬರ್ತಿದ್ರು. ಈ ಮಾಹಿತಿ ಪೊಲೀಸರ ಮೂಗಿಗೆ ಬಡಿದಿತ್ತು. ತಕ್ಷಣ ಕಾರ್ಯ ಪ್ರವೃತ್ತರಾದ,ತುಂಗಾನಗರ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿಗಳ ತಂಡವು ಲಕ್ಕಿನ ಕೊಪ್ಪ ಕ್ರಾಸ್ ಕಡೆಯಿಂದ ಹಾಲ್ ಲಕ್ಕವಳ್ಳಿ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರ್ ನ ಮೇಲೆ ಅನುಮಾನ ಬಂದು, ಕಾರ್ ಅನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದ್ರು. ಆಗ ದಂಧೆಕೋರರು ಕಾರಿನಲ್ಲಿ ಗಾಂಜವನ್ನು ಹೇಗೆಲ್ಲಾ ಸಪ್ಲೆ ಮಾಡ್ತಾರೆ ಅನ್ನೋದು ಗೊತ್ತಾಯಿತು.
ಇನ್ನೋವಾ ಕಾರಿನ ಡೋರ್ ಗಳಲ್ಲಿ ಗೌಪ್ಯವಾಗಿಟ್ಟಿದ್ರು ಮಾಲು..ಎಲ್ಲೆಲ್ಲೂ ಗಾಂಜಾ.!!!
ವಾಹನ ವಶಕ್ಕೆ ಪಡೆದ ತುಂಗಾ ನಗರ ಪೊಲೀಸರು ಇನ್ನೋವಾ ಕಾರನ್ನು ಸಂಪೂರ್ಣವಾಗಿ ಶೋಧಿಸಿದ್ರು.. ಕಾರಿನ ನಾಲ್ಕು ಡೋರ್ ಗಳ ಡೋರ್ ಮ್ಯಾಟ್ ಒಳಗೆ, ಹಿಂಬದಿಯ ಸ್ಟೆಪ್ನಿಯ ಕೆಳಗೆ ಮತ್ತು ಮುಂದಿನ ಬಾನೆಟ್ ಒಳ ಭಾಗದಲ್ಲಿ ಮಾದಕ ವಸ್ತು ಗಾಂಜಾವನ್ನು ಪ್ಯಾಕೆಟ್ ಗಳಾಗಿ ಮಾಡಿ ಇಟ್ಟುಕೊಂಡು ಸಾಗಾಟ ಮಾಡುತ್ತಿರುವುದು ಕಂಡ ಪೊಲೀಸರು ದಂಗಾಗಿ ಹೋಗಿದ್ರು.
ನಂತರ ಪೊಲೀಸರು ಆರೋಪಿಗಳಾದ 1)ದೌಲತ್ @ ಗುಂಡು, 27 ವರ್ಷ, ಮಳಲಿಕೊಪ್ಪ, ಶಿವಮೊಗ್ಗ 2)ಮುಜೀಬ್ ಖಾನ್ @ಬ್ರಸ್ಟ್, 27 ವರ್ಷ ಇಂದಿರಾನಗರ, ಶಿವಮೊಗ್ಗ 3)ಶೋಹೇಬ್ @ ಚೂಡಿ 24 ವರ್ಷ, ಕಡೇಕಲ್ ಶಿವಮೊಗ್ಗ 4)ಮೊಹಮ್ಮದ್ ಜಾಫ್ರುಲ್ಲ, 24 ವರ್ಷ ಕಡೇಕಲ್ ಶಿವಮೊಗ್ಗ ರವರನ್ನು ವಶಕ್ಕೆ ಪಡೆದು ಅಂದಾಜು ಮೌಲ್ಯ 6,50,000/- ರೂಗಳ ಒಟ್ಟು 21 ಕೆಜಿ 315 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರ್ ಅನ್ನು ವಶಪಡಿಸಿಕೊಂಡು , ಆರೋಪಿಗಳ ವಿರುದ್ಧ NDPS ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ರು. ಸದ್ಯ ಈ ಪ್ರಕರಣದ ವಿಚಾರಣೆ ಮುಗಿಸಿರುವ ಶಿವಮೊಗ್ಗ ಸೆಷನ್ ನ್ಯಾಯಾಲಯದ ನ್ಯಾಯಾಧೀಶರು ಮಹತ್ವದ ತೀರ್ಪು ನೀಡಿ, ಗಾಂಜಾ ಮಾಫೀಯಕ್ಕೆ ಎಚ್ಚರಿಕೆಯ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.