AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಜಗತ್ತಿಗೆ ಕೊರೋನ ನಂತರ ಮತ್ತೊಂದು ವೈರಸ್ಸಿನ ಭೀತಿ : ಎಚ್ಚರಿಕೆಯ ಕರೆಗಂಟೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ.”

1 min read

ಮಹಾಮಾರಿ ಕೊರೊನಾ ವೈರಸ್ ಬಳಿಕ ವಿವಿಧ ವೈರಸ್ ಗಳು ಜಗತ್ತಿನ ಜನರ ನಡುವೆ ತಾಂಡವವಾಡುತ್ತಿದೆ.ಇದರ ನಡುವೆಯೇ ಪ್ರಪಂಚದಾದ್ಯಂತ ಇದೀಗ ಮತ್ತೊಂದು ಸೋಂಕಿನ ಆತಂಕ ಎದುರಾಗಿದೆ.ಮಂಕಿಪಾಕ್ಸ್ ಗೆ ಬರೋಬ್ಬರಿ 500 ಜನರು ಸಾವನ್ನಪ್ಪಿರುವ ಘಟನೆ ಕಾಂಗೋದಲ್ಲಿ ನಡೆದಿದೆ.

ಕಾಂಗೋದಲ್ಲಿ 14,000 ಜನರಲ್ಲಿ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿದೆ.500 ಜನರು ಮಂಕಿಪಾಕ್ಸ್ ಗೆ ಬಲಿಯಾಗಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ಹೆಲ್ತ್ ಎಮರ್ಜನ್ಸಿ ಘೋಷಣೆ ಮಾಡಿದೆ.

ಭಾರತದಲ್ಲಿ ಜೂನ್ ವರೆಗೆ 27 ಮಂಕಿಪಾಕ್ಸ್ ಪ್ರಕರಣಗಳು ದಾಖಲಾಗಿವೆ.ಭಾರತದಲ್ಲಿಯೂ ಮಂಕಿಪಾಕ್ಸ್ ಭೀತಿ ಎದುರಾಗಿದೆ.ಅದರಲ್ಲಿಯೂ 15 ವರ್ಷದೊಳಗಿನ ಮಕ್ಕಳಿಗೆ ಈ ಸೋಂಕು ಡೆಂಜರಸ್ ಆಗಿದೆ.

ಮಂಕಿಪಾಕ್ಸ್ ಲಕ್ಷಣಗಳು:

ಕೈ,ಕಾಲು,ಎದೆ,ಮುಖ,ಬಾಯಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.ಬಳಿಕ ಸಣ್ಣ ಗುಳ್ಳೆಗಳು ದೊಡ್ಡದಾಗಿ ಕೀವು ತುಂಬಿರುತ್ತವೆ.ವಾಸಿಯಾಗುವ ಮುನ್ನ ದೇಹವಿಡೀ ಗುಳ್ಳೆಗಳಾಗುತ್ತವೆ.ಗುಳ್ಳೆ ಕಾಣಿಸಿಕೊಳ್ಳುತ್ತಿದಂತೆ ಜ್ವರ,ತಲೆನೋವು,ಮೈಕೈ ನೋವು,ಸ್ನಾಯು ಸೆಳೆತ ಕಾಣಿಸಿಕೊಳ್ಳುತ್ತದೆ.

7ರಿಂದ 14 ದಿನಗಳವರೆಗೆ ಸೋಂಕು ಇರುತ್ತದೆ. ಮಂಕಿಪಾಕ್ಸ್ ಮಾರಣಾಂತಿಕವಾಗಿದ್ದು,ಕಟ್ಟೆಚ್ಚರ ಕೈಗೊಳ್ಳಲಾಗಿದೆ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *