AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಜಿಲ್ಲೆಯಲ್ಲಿ ಹೆಚ್ಚಾದ ಮಳೆ : ಬಕ್ಕಿ ಗ್ರಾಮದಲ್ಲಿ ರಸ್ತೆ ಕುಸಿತ.”

1 min read

ಚಿಕ್ಕಮಗಳೂರು (Chikkamagaluru): ಜಿಲ್ಲೆಯ ಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಅನೇಕ ತೊಂದರೆಗಳಾಗುತ್ತಿವೆ.

ಒಂದೆಡೆ ಮನೆಗಳು ಕುಸಿದರೆ,ಮತ್ತೊಂದೆಡೆ ಭೂ ಕುಸಿತ, ರಸ್ತೆ ಕುಸಿತಗಳಾಗುತ್ತಿವೆ,ಮಗದೊಂದೆಡೆ ಪ್ರಾಣಹಾನಿ,ಬೆಳೆಹಾನಿ ಸಂಭವಿಸುತ್ತಿದೆ.

ಇದೇ ರೀತಿಯಲ್ಲಿ ಮೂಡಿಗೆರೆ (Mudigere) ತಾಲ್ಲೂಕಿನ,ತ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ,ಬಕ್ಕಿ ಗ್ರಾಮದ ಕಾರಳ್ಳಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಕುಸಿಯುತ್ತಿದೆ.

ಜನ ಜಾನುವಾರುಗಳು ಭಯದ ವಾತಾವರಣದಲ್ಲಿದ್ದಾರೆ. ಕಳೆದ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಅಲ್ಪ ಪ್ರಮಾಣದ ಕಾಮಗಾರಿಗೆ ಅನುಮತಿ ನೀಡಿದ್ದರು.

ರಸ್ತೆ ಕುಸಿತದ ಬಗ್ಗೆ ಗ್ರಾಮಸ್ಥರ ಮಾತುಗಳು.

ಕಾಮಗಾರಿ ಇನ್ನೂ ಆರಂಭವಾಗಿಲ್ಲ,ಅದ್ದರಿಂದ ಕೂಡಲೇ ಜನಪ್ರತಿನಿಧಿಗಳು,ತಾಲ್ಲೂಕು ಆಡಳಿತ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

About Author

Leave a Reply

Your email address will not be published. Required fields are marked *