AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದಲ್ಲಿ ಹದಿನೈದು ದಿವಸಕ್ಕೊಮ್ಮೆ ನೀರು. avintvcom

1 min read
Featured Video Play Icon

ಹದಿನೈದು ದಿವಸಕ್ಕೊಮ್ಮೆ  ನೀರು ಪೂರೈಕೆಯಿಂದ ಗ್ರಾಮಸ್ಥರಿಗೆ ತೊಂದರೆ

ವರದಿ:ಪ್ರೊ.ಎ.ವೈ.ಸೋನ್ಯಾಗೋಳ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಾಶ್ಚಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯು ದಿನದಿಂದ ದಿನಕ್ಕೆ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಗ್ರಾಮದ ಗ್ರಾಮಸ್ಥರು ಹೈರಾಣಾಗಿದ್ದಾರೆ.

ಪಾಚ್ಚಾಪುರ ಗ್ರಾಮದಿಂದ ಹದಿನೈದು ಕಿಲೋಮೀಟರ್ ಅಂತರದಲ್ಲಿ ಶಿರೂರು ಜಲಾಶಯ , 7 ಕಿಲೋಮೀಟರ್ ಅಂತರದಲ್ಲಿ ಹಿಡಕಲ್ ಜಲಾಶಯ ಹೀಗೆ ಎರಡು ಜಲಾಶಯಗಳನ್ನು ಒಳಗೊಂಡಿದ್ದರೂ ಮಧ್ಯದಲ್ಲಿರುವ ಗ್ರಾಮಕ್ಕೆ ಮಾತ್ರ ನೀರಿನ ಪೂರೈಕೆ ಸಾಧ್ಯವಾಗುತ್ತಿಲ್ಲ . ಹಿಡಕಲ್ ಜಲಾಶಯದಿಂದ ಬೆಳಗಾವಿ ನಗರಕ್ಕೆ ನೀರಿನ ಸರಬರಾಜು  ಗ್ರಾಮದ

ಮುಖಾಂತರವೇ ಆಗುತ್ತಿದ್ದರೂ ಕೂಡಾ

ಗ್ರಾಮದ ಜನರಿಗೆ ನೀರಿನ ಸಮಸ್ಯೆಯ ಭವಣೆ ತಪ್ಪಿಲ್ಲ.

12 ಸಾವಿರ ಜನಸಂಖ್ಯೆಯುಳ್ಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ವಾರ್ಡುಗಳನ್ನು ಹೊಂದಿರುತ್ತದೆ. ಈ ಹಿಂದೆ ಪ್ರತಿ 7-8 ದಿವಸಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು ಆದರೆ ಈಗ ಅದು 15 ರಿಂದ 20 ದಿವಸಕ್ಕೊಮ್ಮೆ.  ನೀರು  ಪೂರೈಕೆಯಾಗುತ್ತಿದೆ. ಗ್ರಾಮದಲ್ಲಿನ ಹೊಟೇಲ್ ಹಾಗೂ ಪ್ರಮುಖ  ಅಂಗಡಿಗಳಲ್ಲಿ ಕುಡಿಯಲಿಕ್ಕೆ ಬೋರ್ವೆಲ್ ನೀರನ್ನು ಬಳಸುತ್ತಿರುವುದರಿಂದ ಹೋಟೆಲ್ಗಳಿಗೆ ಬರುವ ಗ್ರಾಹಕರಿಗೆ ಅನಾರೋಗ್ಯ ಉಂಟಾಗುತ್ತಿದೆ.

ಈ ಹಿಂದೆ ಗ್ರಾಮದ ಪ್ರತಿ ವಾರ್ಡಿಗೆ ಒಂದರಂತೆ ನಿರಂತರ ನೀರು ಪೂರೈಕೆಯ ನಲ್ಲಿಯನ್ನು ಅಳವಡಿಸಲಾಗಿತ್ತು (ಡೈರೆಕ್ಟ್ ನಳ )

ಆದರೆ ಪ್ರಸ್ತುತ ಎಲ್ಲಾ ನಲ್ಲಿ ಗಳನ್ನು ಸ್ಥಗಿತಗೊಳಿಸಲಾಗಿದೆ. ಗ್ರಾಮದಲ್ಲಿನ ಗ್ರಾಮಸ್ಥರು ನೀರಿನ ಸಮಸ್ಯೆ ಕುರಿತು ಪಕ್ಷಾತೀತವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಯಾವುದೇ ಅಧಿಕಾರಿಗಳು ಇದರ ಕುರಿತು ಚಕಾರ ಎತ್ತಿಲ್ಲ

ಆದ್ದರಿಂದ ಎರಡು ಜಲಾಶಯಗಳು ಸಮೀಪದಲ್ಲಿರುವ ಪಾಶ್ಚಾ ಪುರ ಗ್ರಾಮಕ್ಕೆ ಪ್ರತಿ ಎರಡರಿಂದ ಮೂರು ದಿನಕ್ಕೊಮ್ಮೆಯಾದರೂ ನೀರು ಪೂರೈಕೆಯಾಗುವಂತೆ ಸಂಬಂಧಿಸಿದ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ.

About Author