AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪೊಲೀಸ್ ಠಾಣೆಯಲ್ಲಿ ತಮ್ಮ ಕರ್ತವ್ಯ ನಿರ್ವಹಸಿ ಕಾರ್ಯಕ್ರ ಹೊಸದಾಗಿ ಬಂದ ಚೇತನ್ ಪಿಎಸ್ಐ ರವರಿಗೆ ಸ್ವಾಗತ #avintvcom

1 min read
Featured Video Play Icon

ಸ್ಲಗ್:- ಬಿಳ್ಕೊಡಿಗೆ ಸಮಾರಂಭ ಸ್ಥಳ:- ಸುಲೇಪೇಟ ವರದಿ:- ಶಿವಕುಮಾರ ತಳವಾರ ಚಿಂಚೋಳಿ ತಾ ವರದಿಗಾರರು (ಕಲಬುರಗಿ) ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಪೊಲೀಸ್ ಠಾಣೆಯಲ್ಲಿ ತಮ್ಮ ಕರ್ತವ್ಯ ನಿರ್ವಹಸಿ ಬೇರೆ ಕಡೆಗೆ ವರ್ಗಾವಣೆಗೊಂಡ ತಿಮ್ಮಯ್ಯ ಪಿಎಸ್ಐ ರವರಿಗೆ ಬಿಡಕೊಡೆಗೆ ಕಾರ್ಯಕ್ರ ಮತ್ತು ಹೊಸದಾಗಿ ಬಂದ ಚೇತನ್ ಪಿಎಸ್ಐ ರವರಿಗೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. ಹೌದು ಈ ಸಂದರ್ಭದಲ್ಲಿ ಪಿಎಸ್ಐ ತಿಮ್ಮಯ್ಯ ರವರು ಮಾತನಾಡಿ, ನಾನು ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ ಸೇವೆಯು ತುಂಬಾ ಖುಷಿ ಮತ್ತು ಒಳ್ಳೆÀಯ ಅನುಭವ ತಂಡುಕೊಟ್ಟಿದೆ, ನಾನು ಸಲ್ಲಿಸಿದ ಸೇವೆಯ ವೇಳೆಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಪ್ರಕರಣ ಕಂಡಿಲ್ಲ, ಸುಲೇಪೇಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳು ಮತ್ತು ಜನರು ಶಾಂತಿ ಪ್ರಿಯರು, ವಿಶೇಷವಾಗಿ ಸುಲೇಪೇಟ ಗ್ರಾಮ ಮತ್ತು ಗ್ರಾಮದ ಜನರು ಹಿರಿಯರು ಮತ್ತು ಮುಖಂಡರು ತುಂಬಾ ಶಾಂತಿ ಪ್ರಿಯರು, ಪೊಲೀಸ್ ಇಲಾಖೆಗೆ ತುಂಬಾ ಸಹಕಾರ ನೀಡುತ್ತಾರೆ. ಕೊವಿಡ್-೧೯ ಸಂದರ್ಭದಲ್ಲಿ ಅಚ್ಚುಕಟ್ಟುಯಾಗಿ ನಡೆದುಕೊಂಡು ಪೊಲೀಸ್ ಇಲಾಖೆಗೆ ತುಂಬಾ ಸಹಕರಿಸಿದರು. ಸಿಪಿಐ ವಿಜಯ ಮಹಾಂತೇಶ ಮಠಪತಿ ರವರು ತುಂಬಾ ಒಳ್ಳೆಯ ರೀತಿಯಲ್ಲಿ ಮಾಡಿದ ಮಾರ್ಗದರ್ಶನದಲ್ಲಿ ನನ್ನ ಒಂದು ವರ್ಷದ ಸೇವೆಯನ್ನು ಸಲ್ಲಿಸಲು ಅನುಕೂಲವಾಯಿತು. ಇಲ್ಲಿಯ ಸಿಬ್ಬಂದಿ ವರ್ಗವು ತುಂಬಾ ಒಳ್ಳೆಯ ರೀತಿಯಲ್ಲಿ ನನ್ನ ಜೊತೆಯಲ್ಲಿ ಕೂಡಿಕೊಂಡು ತಮ್ಮ ಕರ್ತವ್ಯ ನಿಭಾಯಿಸಿದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿಪಿಐ ವಿಜಯ ಮಹಾಂತೇಶ ಮಠಪತಿ, ಪಿಎಸ್ಐ ಚೇತನ್, ರಾಮಜಿ ರಾಥೋಡ್, ಅಮೃತ, ಶಿವಪುತ್ರಪ್ಪ, ರೇವಣಸಿದ್ದಪ್ಪ, ಶಿವನಂದ, ಕುಮಾರಿ, ಭಾಗ್ಯಮ್ಮ, ಚಂದ್ರಕಾಂತ ಹಾಗೂ ಸುಲೇಪೇಟ ಪೋಲಿಸ್ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗದವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author