AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸುಟ್ಟಟ್ಟಿ ಕ್ರಾಸ್ ಸ್ಪೀಡ್ ಬ್ರೇಕರ್ ಇಲ್ಲದೆ ಜನರು ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. #avintvcom

1 min read

ರಾಯಬಾಗ: ಸುಟ್ಟಟ್ಟಿ ಕ್ರಾಸ್ ಬಳಿ ಸ್ಪೀಡ್ ಬ್ರೇಕರ್ ಇಲ್ಲದೆ ಜನರು ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ರಸ್ತೆಗೆ ಹೊಂದಿಕೊಂಡು ಶಾಲೆ ಇದೆ ನಿತ್ಯ ನೂರಾರು ಮಕ್ಕಳು ಇದೆ ರಸ್ತೆ ದಾಟಿಕೊಂಡು ಶಾಲೆಯಿಂದ ತಮ್ಮ ಮನೆಗಳಿಗೆ ಹೋಗಿ ಬಂದು ಮಾಡುತ್ತಾರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಿ, ಪರಿಹಾರ ಕಂಡುಕೊಳ್ಳಬೇಕಾಗಿದೆ ಮುಖ್ಯರಸ್ತೆ ಇರುವ ಕಾರಣ ಸಹಜವಾಗಿಯೇ ಕುಡಚಿ ಮತ್ತು ಹಾರೂಗೇರಿ-ಕ್ರಾಸ್ ಕಡೆಯಿಂದ ವಾಹನಗಳು ಅತಿವೇಗವಾಗಿ ಸಂಚರಿಸುತ್ತವೆ ಇಲ್ಲಿ ನಾಲ್ಕು ಕಡೆಗಳಿಂದ ರಸ್ತೆ ಸೇರುವುದರಿಂದ ಸಹಜವಾಗಿಯೇ ವಾಹನ ಸವಾರರಿಗೆ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಬರುವಿಕೆಯ ಕುರಿತು ತಿಳಿಯುವುದಿಲ್ಲ ರಸ್ತೆ ತಡೆ ನಿರ್ಮಾಣ ಮಾಡಿದರೆ ಎಲ್ಲವೂ ಸಹಜವಾಗಿ ನಡೆಯುತ್ತದೆ ಎಂದು ಸ್ಥಳೀಯ ವಾಹನ ಸವಾರರು ಹೇಳುತ್ತಿದ್ದಾರೆ ಲೋಕೋಪಯೋಗಿ ಅಧಿಕಾರಿಗಳು ಅಪಘಾತವಾಗುವ ಮುಂಚೆ ಎಚ್ಚೆತ್ತುಕೊಳ್ಳಬೇಕು ಜನರ ಬೇಡಿಕೆಯಂತೆ ರಸ್ತೆಗಳಿಗೆ ಸ್ಪೀಡ್ ಬ್ರೇಕರ್ ಅಳವಡಿಸಬೇಕು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯ ಎಂದು ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷರಾದ ಮುರಾರಿ ಬಾನಿ ಎಚ್ಚರಿಸಿದ್ದಾರೆ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author