“ನನ್ನ ಊರು…ನನ್ನ ಕನಸು…!!”
1 min read
ನಿದ್ರೆಯಲ್ಲಿ ಕಾಣುವ ಕನಸು ಕೇವಲ ಕನಸಾಗೇ ಉಳಿಯುತ್ತದೆ, ಅದೇ ಎಚ್ಚರವಿದ್ದಾಗ ಕಾಣುವ ಕನಸು ನನಸಾಗುತ್ತದೆ ಎಂದು ಸಾಧಕರು ಹೇಳುತ್ತಾರೆ. ಅದರಂತೆ ನನಗೂ ಒಂದು ಕನಸಿತ್ತು, ಅದೇನೆಂದರೆ, ನಾನು ನನ್ನೂರಿಗೆ ಚುನಾಯಿತಾ ಪ್ರತಿನಿಧಿಯಾಗಬೇಕು, ನನ್ನೂರಿನ ಅಭಿವೃದ್ಧಿಯಲ್ಲಿ ನಾನು ದಾಖಲೆ ಮಾಡಬೇಕು, ಸರ್ಕಾರದಿಂದ ಬರುವ ಅನುದಾನದಲ್ಲಿ ಪಕ್ಷಬೇದ, ಜಾತಿಭೇದ, ಬಡವ -ಬಲ್ಲಿದನೆಂಬ ತಾರತಮ್ಯ ಮಾಡದೆ ಊರಿನ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಸಿಗುವಂತಾಗಬೇಕು ಎಂಬ ಕನಸು ಕಂಡಿದ್ದೆ.
ಆ ಕನಸು ನನಸಾಗಲು ಹತ್ತು ವರ್ಷ ಶ್ರಮಪಟ್ಟೆ, ಕೊನೆಗೂ ನನಗೆ ಅವಕಾಶ ಒಲಿದು ಬಂದಿದ್ದು 2010ರಲ್ಲಿ, ಸಾಮಾನ್ಯ ಕ್ಷೇತ್ರ, ಪ್ರಬಲ ಪ್ರತಿಸ್ಪರ್ಧಿ, ಆದರೂ ಅಂತಿಮ ಗೆಲುವು ನನ್ನದಾಗಿತ್ತು. ಜನರ ನಂಬಿಕೆ ನನ್ನ ಮೇಲಿತ್ತು. ಆ ನಂಬಿಕೆಯನ್ನು ಹುಸಿಗೊಳಿಸಲಿಲ್ಲ.ಬೈಗೂರು ಗ್ರಾಮ ಪಂಚಾಯಿತಿ ಸದಸ್ಯನಾದೆ, ನಂತರದ ದಿನಗಳಲ್ಲಿ ಉಪಾಧ್ಯಕ್ಷನಾದೆ.ಅಧ್ಯಕ್ಷನಾಗುವುದಕ್ಕೆ ಅರ್ಹತೆ ಇದ್ದರೂ ಅವಕಾಶ ಸಿಗಲಿಲ್ಲ, ಅದಕ್ಕೆ ದೃತಿಗೆಡಲಿಲ್ಲ, ನನ್ನ ಸಹಪಾಠಿ ಸದಸ್ಯರುಗಳಾದ *ಹೆಚ್.ಕೆ ಶಶಿಧರ್,ಶ್ರೀಮತಿ ಮೋಹನಾಕ್ಷಿ* ಇವರುಗಳ ಸಂಪೂರ್ಣ ಸಹಕಾರದೊಂದಿಗೆ ನನ್ನೂರಿನ ಅಭಿವೃದ್ಧಿಯ ಬಗ್ಗೆ ಒಂದು ನೀಲಿನಕ್ಷೆ ತಯಾರು ಮಾಡಿಕೊಂಡೆ.
ಅದರಂತೆ ಕ್ರಿಯಾಯೋಜನೆಯಲ್ಲಿ ಆದ್ಯತೆ ಮೇರೆಗೆ ಕಾಮಗಾರಿಯ ಹೆಸರು ಸೇರಿಸಿಕೊಂಡು ಈ ಕೆಳಕಂಡ ಕಾಮಗಾರಿಗಳನ್ನು ಮಾಡಿದ್ದೇನೆ.
- ಕೆರೆಮಕ್ಕಿ ಚಿಕ್ಕಮ್ಮ ದೇವಾಲಯದ ಸುತ್ತ ನೀರುಗಾಲುವೆ ನಿರ್ಮಾಣ.ಅಂದಾಜು ಮೊತ್ತ:-2.00ಲಕ್ಷ**.(ಉದ್ಯೋಗ ಖಾತ್ರಿ ).
- ಕೆರೆಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತ ಕಾಂಪೌಂಡ್ ನಿರ್ಮಾಣ,6-00ಲಕ್ಷ.(ಉದ್ಯೋಗ ಖಾತ್ರಿ).
- ಕೆರೆಮಕ್ಕಿ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆಗೆ ತಡೆಗೋಡೆ ಮತ್ತು ನೀರುಗಾಲುವೆ ನಿರ್ಮಾಣ,3-00ಲಕ್ಷ (ಉದ್ಯೋಗ ಖಾತ್ರಿ).
- ಕೆರೆಮಕ್ಕಿ ಪರಿಶಿಷ್ಟ ಕಾಲೋನಿಗೆ ಸಮುದಾಯ ಭವನಕ್ಕೆ ಸ್ಥಳ ಕಾಯ್ದಿರಿಸಲಾಯಿತು.
- ಕೆರೆಮಕ್ಕಿ ಗ್ರಾಮದ ಆಟದ ಮೈದಾನಕ್ಕೆ ಸ್ಟೇಡಿಯಂ ನಿರ್ಮಾಣ,04-00ಲಕ್ಷ (ಉದ್ಯೋಗ ಖಾತ್ರಿ).
- ಕೆರೆಮಕ್ಕಿ ಗ್ರಾಮದ ನೀಲಮ್ಮ ಮನೆಯಿಂದ ಜೂಲೇಗೌಡರ ಮನೆಯವರೆಗೆ ನೀರುಗಾಲುವೆ ನಿರ್ಮಾಣ, 06-00ಲಕ್ಷ (ಉದ್ಯೋಗ ಖಾತ್ರಿ).
- ಕೆರೆಮಕ್ಕಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ರಂಗಮಂದಿರ ನಿರ್ಮಾಣ TP ಮತ್ತು GP,2.50 ಲಕ್ಷ (ಅಭಿವೃದ್ಧಿ ಅನುದಾನ).
- ಕೆರೆಮಕ್ಕಿ ಹೆಚ್.ಬಿ ಮಹೇಂದ್ರ ಮತ್ತು ಇತರರ ಮನೆಗೆ ಹೋಗುವ ರಸ್ತೆಗೆ ತಡೆಗೋಡೆ ನಿರ್ಮಾಣ, 4-00ಲಕ್ಷ (ಉದ್ಯೋಗ ಖಾತ್ರಿ).
- ಕೆರೆಮಕ್ಕಿ ಕೆ. ಎಂ ಶಾಂತೇಗೌಡರ ಮನೆಯ ಜಮೀನಿನ ಪಕ್ಕ ಹಳ್ಳಕ್ಕೆ ಚೆಕ್ ಡ್ಯಾಮ್ ನಿರ್ಮಾಣ,2-00ಲಕ್ಷ (ಉದ್ಯೋಗ ಖಾತ್ರಿ).
- ಕೆರೆಮಕ್ಕಿ ಗ್ರಾಮದ ಸ್ಮಶಾನ ಅಭಿರುದ್ದಿ(ರಸ್ತೆ, ಗೇಟ್, ಜಂಗಲ್ ಕ್ಲಿಯೆರ್)2-00ಲಕ್ಷ.
- ಕೆರೆಮಕ್ಕಿಯಿಂದ ಬೈಗೂರಿಗೆ ಹೋಗುವ ರಸ್ತೆಗೆ ತಡೆಗೋಡೆ ನಿರ್ಮಾಣ.6-00ಲಕ್ಷ (ಉದ್ಯೋಗ ಖಾತ್ರಿ).
- ಆವತಿಪೇಟೆ ಉರೊಳಗೆ ಕುಡಿಯುವ ನೀರಿನ ಸೌಲಭ್ಯ, ಸಿಸ್ಟೆನ್ ನಿರ್ಮಾಣ, 8-00ಲಕ್ಷ (ಜಿಲ್ಲಾ ಪಂಚಾಯಿತಿ).
- ಕೆರೆಮಕ್ಕಿ ಮುಖ್ಯರಸ್ತೇಯಿಂದ ಆವತಿಪೇಟೆ ಮಾರ್ಗವಾಗಿ ಹೊಸಳ್ಳಿ handpost ರಸ್ತೆಗೆ ಕಾಂಕ್ರೀಟ್ 2-00ಲಕ್ಷ (ಉದ್ಯೋಗ ಖಾತ್ರಿ).
- ಆವತಿಪೇಟೆ ಉರೊಳಗಡೆ ಮೊದಲಬಾರಿಗೆ ಬೀದಿದೀಪ ಅಳವಡಿಕೆ.
- ಹೊಂಬಳದಹಳ್ಳಿ ಮುಖ್ಯರಸ್ತೆಯ ಪಕ್ಕ ತಡೆಗೋಡೆ ನಿರ್ಮಾಣ 4-00ಲಕ್ಷ (ಉದ್ಯೋಗ ಖಾತ್ರಿ).
- ಹೊಂಬಳದಹಳ್ಳಿ ಮುಖ್ಯರಸ್ತೆಯ ಹಳ್ಳಕ್ಕೆ ಸೇತುವೆ ನಿರ್ಮಾಣ,3-00ಲಕ್ಷ (ಪಶ್ಚಿಮ ಘಟ್ಟ ಯೋಜನೆ).
- ಹೊಂಬಳದಹಳ್ಳಿ ಜಗದೀಶ್ ಮನೆಯ ಎದುರು ನೀರುಗಾಲುವೆ ನಿರ್ಮಾಣ, 5-00ಲಕ್ಷ (ಉದ್ಯೋಗ ಖಾತ್ರಿ).
ಕಸಿಗೆ ಗ್ರಾಮದಲ್ಲಿ ಅಭಿವೃದ್ಧಿ.
- ಕಸಿಗೆ,ಕೆರೇಹಳ್ಳಿಗೆ ಕುಡಿಯುವ ನೀರಿಗೆ ಚೆಕ್ ಡ್ಯಾಮ್ ಮತ್ತು ಪೈಪ್ ಲೈನ್ ಅಳವಡಿಕೆ,5-00ಲಕ್ಷ*(ಜಿಲ್ಲಾ ಪಂಚಾಯಿತಿ).
- ಕಸಿಗೆ ಐನಾರ್ ಮಕ್ಕಿಗೆ ಹೋಗುವ ರಸ್ತೆಗೆ ಕಾಂಕ್ರೀಟ್, 2-00ಲಕ್ಷ (ಉದ್ಯೋಗ ಖಾತ್ರಿ).
- ಕಸಿಗೆ ಕೂಗಳ ರಸ್ತೆಗೆ ಕಾಂಕ್ರೀಟ್, 5-00ಲಕ್ಷ (ಉದ್ಯೋಗ ಖಾತ್ರಿ).
- ಕಸಿಗೆ,ಮಂಜನ ದೇವರ ದೇವಾಸ್ಥಾನಕ್ಕೆ ತಡೆಗೋಡೆ ನಿರ್ಮಾಣ, 4-00ಲಕ್ಷ (ಉದ್ಯೋಗ ಖಾತ್ರಿ).
- ಕಸಿಗೆ,ದ್ರುವಕುಮಾರ್ ಇತರರ ಮನೆಯ ಎದುರು ರಸ್ತೆಯ ಪಕ್ಕ ನೀರುಗಾಲುವೆ ನಿರ್ಮಾಣ ಮತ್ತು ಸೇತುವೆ ನಿರ್ಮಾಣ,2.5ಲಕ್ಷ (ಉದ್ಯೋಗ ಖಾತ್ರಿ).
- ಕಸಿಗೆ,ದೊಡ್ದುಗ ಶೆಟ್ಟರ ಜಮೀನಿನ ಪಕ್ಕ ಹಳ್ಳಕ್ಕೆ ಸೇತುವೆ ನಿರ್ಮಾಣ, 4-00ಲಕ್ಷ (ಪಶ್ಚಿಮ ಘಟ್ಟ ಯೋಜನೆ).
- ಕಸಿಗೆ ಬೈಪಾಸ್ ರಸ್ತೆ ಲಾನ್ಸಿ ಮೋನಿಸ್ ಜಮೀನಿನ ಪಕ್ಕ ರಸ್ತೆಗೆ ಕಾಂಕ್ರೀಟ್, 1-00ಲಕ್ಷ(ಉದ್ಯೋಗ ಖಾತ್ರಿ).
- ಕಸಿಗೆ ಲೋಕೇಶ್ ಭಂಡಾರಿ ಇತರರ ಮನೆಗೆ ಹೋಗುವ ರಸ್ತೆಗೆ ಕಾಂಕ್ರೀಟ್, 2-00ಲಕ್ಷ (ಉದ್ಯೋಗ ಖಾತ್ರಿ).
- ಕಸಿಗೆ,ಬೈಪಾಸ್ ರಸ್ತೆ ಬಿ. ಡಿ ಕುಮಾರ್ ಜಮೀನಿನ ಪಕ್ಕ ರಸ್ತೆಗೆ ಕಾಂಕ್ರೀಟ್, 2-00ಲಕ್ಷ (ಉದ್ಯೋಗ ಖಾತ್ರಿ).
- ಕೆರೆಮಕ್ಕಿ -ಕಸಿಗೆಗೆ ಹೋಗುವ ಬೈಪಾಸ್ ರಸ್ತೆಗೆ ಕಾಂಕ್ರೀಟ್,2-00ಲಕ್ಷ (ಜಿಲ್ಲಾ ಪಂಚಾಯಿತಿ ಅನುದಾನ).
- ಕಸಿಗೆ ದೊಡ್ದುಗಶೆಟ್ರು ಇತರರ ಮನೆಗೆ ಹೋಗುವ ರಸ್ತೆಗೆ ಕಾಲು ಸೇತುವೆ ನಿರ್ಮಾಣ,50-000 (ಅಭಿವೃದ್ಧಿ ಅನುದಾನ).
- ವಾರ್ಡ್ ವ್ಯಾಪ್ತಿಯ ಕಚ್ಚಾ ರಸ್ತೆಗಳಿಗೆ ಮಳೆಗಾಲದ ನಂತರ ಮಣ್ಣು ಹಾಕುವುದು.(ಅಭಿವೃದ್ಧಿ ಅನುದಾನ).
- ರಾಜೀವ್ ಗಾಂಧಿ ವಿದ್ಯುಧಿಕರಣ ಯೋಜನೆಯಲ್ಲಿ ಕರೆಂಟ್ ಇಲ್ಲದ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ.
ಇಷ್ಟೆಲ್ಲಾ ಕಾಮಗಾರಿ ನಿರ್ವಹಿಸಲು ಅಂದಿನ ಎಲ್ಲಾ ಅಧ್ಯಕ್ಷರುಗಳು, ಪಂಚಾಯಿತಿಯ ಆಡಳಿತ ಮತ್ತು ಸಿಬ್ಬಂದಿವರ್ಗ,ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಆಡಳಿತವರ್ಗ,ನಮ್ಮ ವಾರ್ಡಿನ ಎಲ್ಲಾ ನಾಗರೀಕರ ಸಹಕಾರವೇ ಮುಖ್ಯ ಕಾರಣ.
ಮನೆ ಇಲ್ಲದವರ ಪಟ್ಟಿ ಮಾಡಿ ಕೇಳಿದಷ್ಟು ಮನೆಗಳನ್ನು ಪಾರದರ್ಶಕವಾಗಿ ನೀಡಲಾಗಿತ್ತು,(ಮನೆ ನೀಡಿಕೆಯಲ್ಲಿ ವಿಳಂಬ ಧೋರಣೆ ಖಂಡಿಸಿ ಏಕಾಂಗಿಯಾಗಿ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾಗಿದ್ದೆ.)ಪ್ರತಿ ಮನೆ-ಮನೆಗೂ ಸಿಲ್ವರ್ ಗಿಡಗಳ ವಿತರಣೆ, ರಾಷ್ಟ್ರೀಯ ಹಬ್ಬಗಳಂದು ನನ್ನ ಸ್ವಂತ ಖರ್ಚಿನಲ್ಲಿ ಹಣ್ಣಿನ ಗಿಡಗಳನ್ನು ತಂದು ಶಾಲೆಯಲ್ಲಿ ವಿತರಿಸಿದ್ದೇನೆ.ನನ್ನ ವಾರ್ಡಿನ 20 ಹಿರಿಯ ನಾಗರೀಕರಿಗೆ ಸಂಧ್ಯಾಸುರಕ್ಷಾ, ವಿಧವಾ ವೇತನಕ್ಕೆ ನನ್ನ ವಾಹನದಲ್ಲಿ ಕರೆದುಕೊಂಡು ಹೋಗಿ ಸಣ್ಣ ಪುಟ್ಟ ಖರ್ಚನ್ನು ಭರಿಸಿ ಸಹಕಾರ ನೀಡಿದ್ದೇನೆ. ಶೌಚಾಲಯ ನಿರ್ಮಾಣ ಮಾಡಿಕೊಂಡ ಪ್ರತಿ ಅರ್ಹ ಮನೆಗೆ 5000 ರೂಗಳ ಚೆಕ್ ವಿತರಣೆ, ಪ್ರತಿಯೊಂದು ವಾರ್ಡ್ ಮತ್ತು ಗ್ರಾಮಸಭೆಗಳಲ್ಲಿ ಭಾಗಿ, ನನಗೆ ಸಿಗುತ್ತಿದ್ದ ಗೌರವ ಧನ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯ ದಿನ ನಮ್ಮ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ ವಿತರಣೆ(5ವರ್ಷ ಪೂರ್ತಿ).
ಆವತಿ ಹೋಬಳಿ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯಿತಿಗಳ ವಾರ್ಡ್ ಒಂದರಲ್ಲಿ ಅಭಿವೃದ್ಧಿಯಾಗಿರುವ ನನ್ನೂರು ಕೆರೆಮಕ್ಕಿಯ ಇಲ್ಲಿಯವರೆಗಿನ ದಾಖಲೆ.
ಇದನ್ನು ಗಮನಿಸಿದ ಜಿಲ್ಲಾ ಮಟ್ಟದ ಪಾಕ್ಷಿಕ ಪತ್ರಿಕೆಯೊಂದು 2015 ರಲ್ಲಿ ನನ್ನನ್ನು ಸಂದರ್ಶನ ಮಾಡಿ *”ಬೈಗೂರು ಗ್ರಾಮ* *ಪಂಚಾಯಿತಿ ಸೂಪರ್ ಹೀರೋ ಕೆರೆಮಕ್ಕಿಮಹೇಶ್*” ಎಂದು ಮುಖಪುಟದಲ್ಲಿ ಬರೆದಾಗ ನನ್ನ ಶ್ರಮಕ್ಕೆ ಸಾರ್ಥಕತೆ ಸಿಕ್ಕಿತ್ತು.
ಇನ್ನೊಂದು ಅವಕಾಶ ಸಿಕ್ಕರೆ ನನ್ನೂರನ್ನು ಜಿಲ್ಲೆಯಲ್ಲೇ ಮಾದರಿ ಗ್ರಾಮವನ್ನಾಗಿಸುವ ಕನಸಿದೆ.
ಈಗಾಗಲೇ ಗ್ರಾಮಪಂಚಾಯಿತಿ ಚುನಾವಣೆಗೆ ಮೀಸಲಾತಿ ಪ್ರಕಟವಾಗಿದೆ, ಸ್ಪರ್ಧೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು,ಆದರೆ ಯೋಚಿಸಿ ಮತ ಹಾಕುವುದು ಮತದಾರರ ಆದ್ಯ ಕರ್ತವ್ಯ.
ಗ್ರಾಮ ಪಂಚಾಯಿತಿ ಸದಸ್ಯತ್ವ ಮಾರಾಟವಾಗಬಾರದು.
ವೈಯಕ್ತಿಕವಾಗಿ ನನಗೆ ಶತ್ರುವಾಗಿದ್ದರೂ, ಊರಿನ ಅಭಿವೃದ್ದಿಗೆ ಕಾಳಜಿ ವಹಿಸುತ್ತಾರೆಂದರೆ ಅವರಿಗೆ ಅವಕಾಶ ಸಿಗಬೇಕು, ಅವರನ್ನು ಬೆಂಬಲಿಸಬೇಕು.
ಗ್ರಾಮಪಂಚಾಯಿತಿ ಸದಸ್ಯತ್ವ ಜಾತಿಗೆ, ವರ್ಗಕ್ಕೆ, ಸಮುದಾಯಕ್ಕೆ, ನಮ್ಮವರಿಗೆ ನೀಡುವ ಸಮಾಧಾನಕರ ಬಹುಮಾನವಾಗಬಾರದು.
ಗ್ರಾಮಪಂಚಾಯಿತಿಯಲ್ಲಿ ನಾನು ಇದ್ದಷ್ಟು ದಿನ ನಾನು ಗಳಿಸಿಕೊಂಡಿದ್ದು ಹೆಸರನ್ನು ಬಿಟ್ಟರೆ, ಇನ್ನೆಲ್ಲವನ್ನು ಕಳೆದುಕೊಂಡಿದ್ದೇನೆ.
ಸಾರ್ವಜನಿಕ ಜೀವನ ಸೇವೆಗಷ್ಟೇ ನಮ್ಮ ಆದ್ಯತೆಯಾಗಿರಬೇಕು, ವಾಪಾಸ್ ಏನು..? ಎನ್ನುವ ನಿರೀಕ್ಷೆ ಇರಬಾರದು.
ಗ್ರಾಮ ಪಂಚಾಯಿತಿ ಸದಸ್ಯರಾಗುವುದೇ ನಮ್ಮ ಸಾಧನೆಯಗಬಾರದು ಎನ್ನುವುದು ನನ್ನ ಅಭಿಮತ.
ಆತ್ಮೀಯರೇ,ಇಲ್ಲಿ ನನ್ನನ್ನು ನಾನು ಹೊಗಳಿಕೊಂಡಿಲ್ಲ, ಮಾಡಿದ ಕೆಲಸಗಳನ್ನು ನಿಮ್ಮ ಮುಂದಿಟ್ಟಿದ್ದೇನೆ ಅಷ್ಟೇ. ಇಚ್ಛಾಶಕ್ತಿ ಇರುವ ಎಲ್ಲರಿಗೂ ಅವಕಾಶ ಸಿಗಲಿ, ಊರುಗಳು ಅಭಿವೃದ್ಧಿಯಾಗಲಿ ಎನ್ನುವುದಷ್ಟೇ ನನ್ನ ಆಶಯ.
✍🏻ಬರಹ ಕೃಪೆ.✍🏻

ಕೆರೆಮಕ್ಕಿಮಹೇಶ್.
ಮಾಜಿ ಉಪಾಧ್ಯಕ್ಷರು.
ಗ್ರಾ. ಪಂ ಬೈಗೂರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

