AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪೋಕ್ಸೋ ಚರ್ಚಿಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. #avintvcom

1 min read

ತುಮಕೂರ

ಪೋಕ್ಸೋ ಪ್ರಕರಣಗಳ ಪರಿಶೀಲನಾ ಸಭೆ

ತುಮಕೂರ ಜಿಲ್ಲೆಯ ಮಧುಗಿರಿ ತಾಲೂಕಿನ ಮೈದನಹಳ್ಳಿ ಗ್ರಾಮದಲ್ಲಿ, ಇತ್ತೀಚೆಗೆ ಲೈಗಿಂಕ ಕಿರುಕುಳಕ್ಕೆ ಒಳಗಾಗಿದ್ದ ಅಪ್ರಾಪ್ತ ಬಾಲಕಿಯ ಮನೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭೇಟಿ ನೀಡಿ, ಆರೋಗ್ಯ ವಿಚಾರಿಸಿ, ಪೋಷಕರಿಗೆ ಧೈರ್ಯ ತುಂಬಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಪೋಕ್ಸೋ ಪ್ರಕರಣಗಳ ಕುರಿತಾಗಿ ಚರ್ಚಿಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಪೋಕ್ಸೋ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಆದಷ್ಟು ಬೇಗನೆ ಶಿಕ್ಷೆಯಾಗಬೇಕು. ಆರೋಪಿತರಿಗೆ ಶಿಕ್ಷೆಯಾದರೆ ಬೇರೆಯವರು ಇಂತಹ ತಪ್ಪಿಗೆ ಕೈ ಹಾಕುವುದಿಲ್ಲ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಖುಲಾಸೆಯಾಗದಂತೆ ಕಾರ್ಯನಿರ್ವಹಿಸಬೇಕು. ಗ್ರಾಮಾಂತರ ಪ್ರದೇಶ, ಮಧ್ಯಮ ಹಾಗೂ ಕೆಳ ಮಧ್ಯಮಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಘಟಿಸುತ್ತಿವೆ. ಇದನ್ನು ನಿಯಂತ್ರಿಸಲು ತ್ವರಿತಗತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಕೆ.ವಂಶಿಕೃಷ್ಣ, ಜಿ.ಪಂ. ಸಿಇಒ ಶ್ರೀಮತಿ ಶುಭಾ ಕಲ್ಯಾಣ್, ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

तुमकूर जिल्ह्यातील मधुगिरी तालुक्यातील मैदनहळ्ळी गावात नुकतीच लैंगिक अत्याचार झालेल्या अल्पवयीन मुलीच्या घरी राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भेट देऊन, तब्येतीची विचारपूस केली आणि तिच्या पालकांना धीर दिला. नंतर जिल्हाधिकारी कार्यालयात, महिला आणि बालविकास विभागाच्या अधिकाऱ्यांसह प्रगती आढावा बैठक घेऊन, पोक्सो प्रकरणांवर चर्चा करून, आवश्यक सल्ला व सूचना दिल्या.

जिल्ह्यात मुलींवर अत्याचाराच्या घटनांमध्ये वाढ होत आहे. अशा प्रकारे पोक्सो प्रकरणातील दोषींना लवकरात लवकर शिक्षा झाली पाहिजे. आरोपी दोषी ठरविल्यास, इतर कुणीही अशा चुकीच्या कृतीस हात लावणार नाही. या प्रकरणात नराधमांना शिक्षा झाली पाहिजे असे कार्यवाही केली पाहिजे. ग्रामीण भागात, मध्यम व खालच्या भागात असे प्रकार वाढत आहेत. यावर अंकुश ठेवण्यासाठी तातडीने कार्यवाही करण्याच्या अधिकाऱ्यांना कडक सूचना दिल्या.

यावेळी जिल्हाधिकारी डॉ. राकेश कुमार, जिल्हा पोलिस अधीक्षक डॉ. के वंशीकृष्ण, जिल्हा पंचायत सीईओ श्रीमती शुभ कल्याण, विभागाचे अधिकारी उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

 

About Author