ಬಣಕಲ್ ನಲ್ಲಿ ನಡೆದ ಜಯಪಾಲ್ ಮತ್ತು ಅನಿತಾ ಅವರ ಮದುವೆ ಸಮಾರಂಭದಲ್ಲಿ #avintvcom
1 min readಬಣಕಲ್ ನಲ್ಲಿ ನಡೆದ ಜಯಪಾಲ್ ಮತ್ತು ಅನಿತಾ ಅವರ ಮದುವೆ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಮತ್ತು ಬಣಕಲ್ ಘಟಕದ ವತಿಯಿಂದ ಮೂರನೇ ಸಾಹಿತ್ಯಾಕ್ಷತೆ ಕಾರ್ಯಕ್ರಮ, ಗೀತಾಗಾಯನ, ಸಂವಿಧಾನ ಸಮರ್ಪಣಾ ದಿನ ನಡೆಯಿತು.
ಕಾರ್ಯಕ್ರಮದಲ್ಲಿ ವಧುವರರ ಪೋಷಕರಿಗೆ ವೀಳ್ಯ ಸಮರ್ಪಣೆ ಮಾಡುವ ಮೂಲಕ ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಬಣಕಲ್ ಕಸಾಪ ಅಧ್ಯಕ್ಷ ವಸಂತ್ ಹಾರ್ ಗೋಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಬಿ ನಿಂಗಯ್ಯ, ಗಾಯಕರಾದ ಬಕ್ಕಿ ಮಂಜುನಾಥ್, ಬಿಎಸ್ಪಿ ರಾಜ್ಯ ಕಾರ್ಯದರ್ಶ ಜಾಕೀರ್ ಹುಸೇನ್, ಜಿಲ್ಲಾ ಕಾರ್ಯದರ್ಶಿ ಪಿ.ಕೆ ಮಂಜುನಾಥ್, ಕಸಾಪ ಪದಾಧಿಕಾರಿಗಳಾದ ಹಾ.ಬಾ ನಾಗೇಶ್, ಎಂ.ಎಸ್ ನಾಗರಾಜ್, ಹಮೀದ್ ಸಬ್ಬೇನಹಳ್ಳಿ, ಪ್ರಕಾಶ್, ಆರೀಪ್, ನಾಗರಾಜ್, ಲಿಂಗರಾಜ್, ವೆಂಕಟೇಶ್ ಹೆಸ್ಗಲ್, ರವೀಂದ್ರ, ಆನಂದ್, ಸಬ್ಲಿ ದೇವರಾಜ್, ಬೆಟ್ಟಗೆರೆ ಲೋಕೇಶ್ ಮುಂತಾದವರು ಇದ್ದರು.


