“ನಾಗೂರಿಗೆ ಎಸ್.ಎಲ್.ಭೋಜೇಗೌಡ ಭೇಟಿ.”
1 min read
ದಕ್ಷಿಣ ಕನ್ನಡ : ಜಿಲ್ಲೆಯ,ಮಂಗಳೂರು ಸಮೀಪದ ನಾಗೂರಿಯಲ್ಲಿ ಕಳೆದ ತಿಂಗಳಿನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಮನೆಯೊಂದು ನೆಲಸಮ ಮತ್ತು ಸಾವು ನೋವು ಉಂಟಾದ ಸ್ಥಳಕ್ಕೆ ವಿಧಾನಪರಿಷತ್ ಶಾಸಕರಾದ ಸನ್ಮಾನ್ಯ ಎಸ್.ಎಲ್. ಭೋಜೇಗೌಡ ಅವರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಹಾಗೂ ಅದೇ ಸಮಯದಲ್ಲಿ ಹಾನಿಯಾಗಿರುವಂತಹ ಪ್ರದೇಶಗಳಾದ,ಸೋಮೇಶ್ವರ,ಬಟ್ಟಪಾಡಿ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿ,ಕಡಲ್ಕೊರೆತ ಸೇರಿದಂತೆ ಜಿಲ್ಲೆಯ ವಿವಿಧ ಮಳೆ ಹಾನಿ ಪೀಡಿತ ಪ್ರದೇಶಗಳನ್ನು ವೀಕ್ಷಿಸಿ ಪರಿಶೀಲನೆಯ ವೇಳೆ ಕಂಡುಬಂದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿಯನ್ನು ಪಡೆದು, ತುರ್ತಾಗಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಿದ ನಂತರ ಸರ್ಕಾರವು ಕಡಲ್ಕೊರೆತ ತಡೆಗೆ ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ಯೋಜನೆಗಳನ್ನು ಅತಿ ಶೀಘ್ರದಲ್ಲಿ ರೂಪಿಸಬೇಕೆಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಜೆಡಿಎಸ್ ನ ಮಂಗಳೂರು ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
✍🏻ಬರಹ ಕೃಪೆ.✍🏻

ರತ್ನ ನಾಗೇಶ್.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

