AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಡ್ಡಿಕೆರೆ ಗೋಪಾಲ್ ೭೭: ಅಭಿನಂದನಾ ಸಮಾರಂಭಕ್ಕೆ ಸಕಲ ಸಿದ್ಧತೆ.”

1 min read

ಮೈಸೂರು : ಎರಡು ಬಾರಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರಾದ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕಿನ ಮಡ್ಡಿಕೆರೆ ಗೋಪಾಲ್‌ ಅವರು ೭೭ ವಸಂತಗಳನ್ನು ಪೂರೈಸಿದ್ದಾರೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ ಅವರ ಸೇವೆಯನ್ನು ಗುರುತಿಸಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಮತ್ತು ಸಾಹಿತ್ಯಭಿಮಾನಿಗಳು ಒಟ್ಟುಗೂಡಿ ಮಡ್ಡಿಕೆರೆ ಗೋಪಾಲ್ ೭೭ ಅಭಿನಂದನಾ ಗ್ರಂಥದ ಜನಾರ್ಪಣೆ ಸಮಾರಂಭವನ್ನು ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದಾರೆ.

ಪದವಿ ವಿದ್ಯಾಭ್ಯಾಸವನ್ನು ಚಿಕ್ಕಮಗಳೂರಿನ ಐ ಡಿ ಎಸ್ ಜಿ ಕಾಲೇಜಿನಲ್ಲಿ ಮುಗಿಸಿ, ತದನಂತರ ಕಾನೂನು ಪದವಿ ಪಡೆಯಲು ಮೈಸೂರಿಗೆ ಪಯಣಿಸುತ್ತಾರೆ, ಕಾನೂನು ಪದವಿ ಪಡೆದ ನಂತರ ಸಾಂಸ್ಕೃತಿಕ ನಗರ ಮೈಸೂರಿನ ಜನರು, ಅಲ್ಲಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಇವರಿಗೆ ತೀರಾ ಹತ್ತಿರವಾಗಿ ಅಲ್ಲಿನ ಜನಮುಖಿ ಮನಸ್ಸುಗಳ ಒಡನಾಟ ಮತ್ತು ಸ್ನೇಹ ಸಂಬಂಧ ಗಾಢವಾಗಿ ಹಬ್ಬಿದ ಕಾರಣ ಮೈಸೂರಿನಲ್ಲಿಯೇ ನೆಲೆ ನಿಂತು ಅಲ್ಲಿಯೇ ವಕೀಲ ವೃತ್ತಿ ಆರಂಭಿಸುತ್ತಾರೆ,

ಮಡ್ಡಿಕೆರೆ ಗೋಪಾಲ್ ಅವರ ತಾತ ಈರೇಗೌಡರು , ಮೈಸೂರು ಮಹಾ ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಸಮಯದಲ್ಲಿ ಮೈಸೂರಿನ ಪ್ರಜಾ ಪ್ರತಿನಿಧಿ ಸಂಸ್ಥೆಯಲ್ಲಿ ಪ್ರತಿನಿಧಿಯಾಗಿ (ಎಂ ಆರ್ ಇ ) ಆಯ್ಕೆಯಾಗಿ ಮಲೆನಾಡಿನ ಜನರಿಗೆ ಒಂದು ಹೆಗ್ಗಳಿಕೆಯಾಗಿದ್ದರು, ಕಾಕತಾಳಿಯವೆಂದರೆ ಇದೇ ಈರೇಗೌಡರ ಮೊಮ್ಮಗ ಮಡ್ಡಿಕೆರೆ ಗೋಪಾಲ್ ಅವರು ಕಾನೂನು ವಿದ್ಯಾಭ್ಯಾಸ ಮಾಡಲು ಮೈಸೂರಿಗೆ ಹೋಗಿ, ಮುಂದೆ ಮೈಸೂರು ಪಟ್ಟಣದ ಗಾಯಿತ್ರಿಪುರಂ ನಲ್ಲಿ ನೆಲೆಗೊಂಡು, ಅಲ್ಲಿನ ಸಾಂಸ್ಕೃತಿಕ ಮನಸ್ಸುಗಳಿಗೆ ಹತ್ತಿರವಾಗಿ, ಮೈಸೂರಿನ ಜನರ ಪ್ರೀತಿ ವಿಶ್ವಾಸವನ್ನು ಪಡೆಯುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರು ಸಂಸ್ಥಾಪಿಸಿದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ೨೦೦೮ರಿಂದ ೨೦೧೧ ಮತ್ತು ಪ್ರಸ್ತುತ ೨೦೨೧ರಿಂದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ತಾತ ಮತ್ತು ಮೊಮ್ಮಗ ನಾಲ್ವಡಿ ಕೃಷ್ಣರಾಜರ ಒಡೆಯರ ಆಶಯಕ್ಕೆ ಪೂರಕವಾಗಿ ದುಡಿಯುವ ಅವಕಾಶ ದೊರೆತದ್ದು ಚಿಕ್ಕಮಗಳೂರು ಜಿಲ್ಲೆಯ ಹೆಗ್ಗಳಿಕೆಯಾಗಿದೆ.

ಸಾಹಿತ್ಯ ಸಂಸ್ಕೃತಿ ಕಲೆಯ ಅಭಿರುಚಿಯನ್ನು ಮೈಗೂಡಿಸಿಕೊಂಡಿರುವ ಕಾರಣ ತನ್ನ ವಕೀಲ ವೃತ್ತಿಯ ಬದುಕಿಂತ ಹೆಚ್ಚಾಗಿ ಅವರು ಪ್ರವೃತ್ತಿಯಾಗಿ ತೊಡಗಿಸಿಕೊಂಡಿದ್ದು ಸಾಹಿತ್ಯ ಮತ್ತು ಸಂಘಟನೆಯ ಕೆಲಸ ಕಾರ್ಯದಲ್ಲಿ.

ವಿದ್ಯಾರ್ಥಿ ದೆಸೆಯಲ್ಲಿಯೇ ಕನ್ನಡ ಸಂಘದ ಅಧ್ಯಕ್ಷರಾಗಿ ಕನ್ನಡದ ಒಲವನ್ನು ಎತ್ತಿ ಹಿಡದು,ಮೈಸೂರಿನಲ್ಲಿ ಕಾನೂನು ಪದವಿ ಓದುವಾಗ ಅಲ್ಲಿನ ಸಾಂಸ್ಕೃತಿಕ ಸಂಘ ಮತ್ತು , ಅಲ್ಪಸಂಖ್ಯಾತ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಕುಟುಂಬ ನಿಯಂತ್ರಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಕ್ಕೆ ಮಡ್ಡಿಕೆರೆ ಗೋಪಾಲ್ ಭಾಜನರಾಗಿದ್ದಾರೆ.

ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಗಿಡ ನೀಡುವ ಕಾರ್ಯಕ್ರಮ, ಶಾಲಾ ಶಿಕ್ಷಣ ಅಭಿವೃದ್ಧಿ ಕಾರ್ಯಕ್ರಮ, ಸಾಹಿತ್ಯ ಪರಿಷತ್ತಿನ ಮೂಲಕ ವಿವಿಧ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಆಯೋಜನೆ ಮಾಡಿ ಈ ಜಿಲ್ಲೆಯ ಜನಮನಕ್ಕೆ ತೀರ ಹತ್ತಿರವಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ೧೯ ಜುಲೈ ೨೦೨೬ರ ಭಾನುವಾರದಂದು ಮೈಸೂರಿನ ಕಲಾಮಂದಿರದಲ್ಲಿ ಮಡ್ಡಿಕೆರೆ ಗೋಪಾಲ್ ೭೭ ಅಭಿನಂದನಾ ಗ್ರಂಥವನ್ನು ಜನಾರ್ಪಣೆ ಮಾಡುವುದರೊಟ್ಟಿಗೆ ಗೋಪಾಲ್ ಅವರನ್ನು ಈ ಮೂಲಕ ಸತ್ಕರಿಸುತ್ತಿದ್ದಾರೆ.

ಈ ಕಾರ್ಯಕ್ರಮಕ್ಕೆ ತವರೂರು ಚಿಕ್ಕಮಗಳೂರು ಜಿಲ್ಲೆಯಿಂದಲೂ ಅನೇಕರು ಭಾಗಿಯಾಗುತ್ತಿರುವುದು ವಿಶೇಷವಾಗಿದೆ.ಮಡ್ಡಿಕೆರೆ ಗೋಪಾಲ್ ಅವರ ಪತ್ನಿ ವೈದ್ಯರಾಗಿ ಸೇವೆ ಸಲ್ಲಿಸುವ ಮೂಲಕ ಜನಹಿತಕ್ಕೆ ಹತ್ತಿರವಾಗಿದ್ದಾರೆ.

ಈ ಅಭಿನಂದನಾ ಸಮಾರಂಭವು ಮಡ್ಡಿಕೆರೆ ಗೋಪಾಲ್ ಅವರ ಜೀವನದಲ್ಲಿ ಮಹತ್ವದ ಸಾಂಸ್ಕೃತಿಕ ಕ್ಷಣವಾಗಿ ಗುರುತಿಸಿಕೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

✍🏻ಬರಹ ಕೃಪೆ.✍🏻

ಡಿ.ಎಂ.ಮಂಜುನಾಥಸ್ವಾಮಿ.

ಚಿಕ್ಕಮಗಳೂರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed