लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
27/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ವಿಶೇಷ ಚೇತನರ ವೇದಿಕೆ ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ….

1 min read

‎ವಿಶೇಷ ಚೇತನರ ವೇದಿಕೆ ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

ಮಾಸ್ಟರ್ ಕೆ.ಹೆಚ್. ಮಂಜುನಾಥ್, ಕಲ್ಮನೆ, ಕೂವೆ ಅಂಚೆ, ಮೊಬೈಲ್.9606698959
‎
‎ಸಜ್ಜನ ಬಂಧುಗಳೇ, ತಮಗೆ ವಿಶೇಷ ನಮಸ್ಕಾರಗಳು,
‎
‎ದಿನಾಂಕ:03-12-2026ರ ಗುರುವಾರದಂದು ದೇಶದಾದ್ಯಂತ ವಿಶ್ವ ವಿಶೇಷ ಚೇತನರ ದಿನಾಚರಣೆ ಆಚರಿಸಲಾಗುತ್ತಿದೆ.

‎ಪ್ರಸ್ತುತ ನಮ್ಮ ದೇಶ ಹಾಗೂ ರಾಜ್ಯದಲ್ಲಿ ವಿಶೇಷ ಚೇತನರ, ಅಂಗವಿಕಲರ, ವಿಧವೆಯರ, ವೃದ್ಧರ ಮಾಸಿಕ ವೇತನ ಅತ್ಯಂತ ಕಡಿಮೆ ಮಟ್ಟದಲ್ಲಿದ್ದು ವಿಕಲಚೇತನರಿಗೆ ಮತ್ತು ವಯೋವೃದ್ಧರಿಗೆ ದಿನಕ್ಕೆ ರೂ.46 ರೂಪಾಯಿ 50ಪೈಸೆ ಅಂದರೆ ಮಾಸಿಕ ರೂ.1400/- ಮತ್ತು ವಿಧವೆಯರಿಗೆ ದಿನಕ್ಕೆ ರೂ.26 ರೂಪಾಯಿ 40ಪೈಸೆಯಂತೆ ಮಾಸಿಕ ರೂ.800/-ಗಳಿದ್ದು ಇದು ಅತ್ಯಂತ ಕನಿಷ್ಟ ಮಾಸಿಕ ವೇತನವಾಗಿದ್ದು ಕಡುಕೆಟ್ಟ ಸಂಪ್ರದಾಯವಾಗಿದೆ.
‎
‎ಆದ್ದರಿಂದ ಮಾನವೀಯತೆ ದೃಷ್ಟಿಯಿಂದ ಬೆಲೆ ಏರಿಕೆಯ ಈ ದಿನದಲ್ಲಿ ವಿಶೇಷ ಚೇತನರ, ಅಂಗವಿಕಲರ, ವಿಧವೆಯರ, ವೃದ್ಧರ ಕನಿಷ್ಟ ವೇತನ ದಿನಕ್ಕೆ ರೂ.150/-ರಂತೆ ಮಾಸಿಕ ವೇತನ ರೂ.4500/-ಕ್ಕೆ ನಿಗಧಿಪಡಿಸಿ ಗೌರವಧನ ನೀಡಲು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಮಾಸಿಕ ವೇತನವನ್ನು ಏರಿಕೆ ಮಾಡುವ ಬಗ್ಗೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ದಿನಾಂಕ:03-12-2026ರ ಗುರುವಾರ ದಂದು ಮೂಡಿಗೆರೆ ತಾಲ್ಲೂಕು ಕಛೇರಿ ಎದುರು ಬೆಳಿಗ್ಗೆ 11.00 ರಿಂದ ನಮ್ಮ ಮೂಡಿಗೆರೆ ತಾಲ್ಲೂಕು ವಿಶೇಷ ಚೇತನರ ವೇದಿಕೆವತಿಯಿಂದ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
‎
‎ಈ ಕಾರ್ಯಕ್ರಮಕ್ಕೆ ಮೂಡಿಗೆರೆ ತಾಲ್ಲೂಕು ಕ್ಷೇತ್ರದ ಎಲ್ಲಾ ವಿಕಲಚೇತನರು, ವಿಧವೆಯರು, ವೃದ್ಧರು ಆಗಮಿಸಲಿದ್ದು ಸಾರ್ವಜನಿಕ ಸಜ್ಜನ ಬಂಧುಗಳಾದ ತಾವುಗಳು ಸಹ ದಯಮಾಡಿ ಆಗಮಿಸಿ ನಮ್ಮ ಹೋರಾಟಕ್ಕೆ ಎಲ್ಲಾ ರೀತಿಯ ಬೆಂಬಲ ನೀಡಬೇಕಾಗಿ ತಮ್ಮಲ್ಲಿ ಕೋರುತ್ತೇವೆ.
‎
‎ಇಂತಿ ತಮ್ಮ ಸಹಾಯ, ಸಲಹೆ, ಸಹಕಾರದ ನಿರೀಕ್ಷೆಯಲ್ಲಿ
‎
ಮಾಸ್ಟರ್ ಕೆ.ಹೆಚ್.ಮಂಜುನಾಥ್, ಕಲ್ಮನೆ ವಿಕಲಚೇತನರ ವೇದಿಕೆ ಮೂಡಿಗೆರೆ.

About Author

Leave a Reply

Your email address will not be published. Required fields are marked *

You may have missed