ಆನೆಮಹಲ್ ನಿಂದ ಹಾನುಬಾಳು ಹುರುಡಿ ಸೇತುವೆ ವರೆಗೂ ರಸ್ತೆ ಗುಂಡಿ ಬಿದ್ದಿದ್ದು ಅದನ್ನು ಮುಚ್ಚಿಸುವ ಕಾರ್ಯ ವನ್ನು ಬೇಗ ಮಾಡಬೇಕು,….
1 min read
ನೆನ್ನೆ ಶನಿವಾರ ಸಕಲೇಶಪುರದ PWD AEE ಪ್ರಸನ್ನ ಹಾಗೂ JE ಅಬ್ದುಲ್ ರಜಾಕ್ ಅವರನ್ನು ಅವರ ಇಲಾಖೆಯ ಕಚೇರಿಯಲ್ಲಿ ಭೇಟಿ ಆಗಿ ಆನೆಮಹಲ್ ನಿಂದ ಹಾನುಬಾಳು ಹುರುಡಿ ಸೇತುವೆ ವರೆಗೂ ರಸ್ತೆ ಗುಂಡಿ ಬಿದ್ದಿದ್ದು ಅದನ್ನು ಮುಚ್ಚಿಸುವ ಕಾರ್ಯ ವನ್ನು ಬೇಗ ಮಾಡಬೇಕು,
ಹಾನುಬಾಳು ಪ್ರವೇಶ ದ ಇಂಡಿಯನ್ ಸ್ಕೂಲ್ ಮುಂಭಾಗ hump ಇದ್ದು ಅದರ ಬಣ್ಣ ಅಳಿಸಿ ಹೋಗಿದ್ದು, ಈ hump ಕಾಣದೆ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದು. ನಾಲ್ಕು ಚಕ್ರ ವಾಹನಗಳು ಜೋರಾಗಿ ಬಂದು hump ನ್ನು ಹಾರಿಸಿಕೊಂಡು ಹೋಗುತ್ತಿದ್ದು ಇದು ವಾಹನಕ್ಕೆ ದಕ್ಕೆ ಉಂಟುಮಾಡುತ್ತಿದೆ ಈ ನಿಟ್ಟಿನಲ್ಲಿ ತಕ್ಷಣ hump ಗೆ ಬಣ್ಣ ಬಳಿಯಬೇಕು ಹಾಗೂ ಆ hump ನ 10 ಮೀಟರ್ ಹಿಂದೆ speed control multiple Rumblers strips ನ ಹಾಕಬೇಕು ಅಂತ ಸಲಹೆ ಕೊಡಲಾಯಿತು
ರಸ್ತೆ patch work ಕೆಲಸಕ್ಕೆ ಶೀಘ್ರದಲ್ಲಿ ಟೆಂಡರ್ ಕರೆದು ಕೆಲಸ ಮಾಡಿಸಲಾಗುವುದು. ಹಾಗೂ hump ಗೆ ಬಣ್ಣ ಬಳಿದು ಅಲ್ಲಿ ಸುರಕ್ಷಾ ಕ್ರಮ ಕೈ ಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ
✍️ ಅವರೇಕಾಡು ಪೃಥ್ವಿ

