लाइव कैलेंडर

October 2026
M T W T F S S
 1234
567891011
12131415161718
19202122232425
262728293031  
24/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

 “ಮಂಗಳೂರಿನ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಿಂದ ‘ಟೈಮ್ ಅನ್ ವೈಲ್ಡ್’ ವಾಚ್ ಮೇಳಕ್ಕೆ ಚಾಲನೆ.”

1 min read

ಮಂಗಳೂರಿನ ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಿಂದ ‘ಟೈಮ್ ಅನ್ ವೈಲ್ಡ್’ ವಾಚ್ ಮೇಳಕ್ಕೆ ಚಾಲನೆ : 15ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ವಾಚ್‌ಗಳ ಪ್ರದರ್ಶನ; ಶೇ. 50ರ ವರೆಗೆ ರಿಯಾಯಿತಿ.

ಮಂಗಳೂರು: ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಮಂಗಳೂರು ಶೋರೂಂ ವತಿಯಿಂದ ಆಯೋಜಿಸಿರುವ ‘ಟೈಮ್ ಅನ್ ವೈಲ್ಡ್’ ವಿಶೇಷ ವಾಚ್‌ಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ದೊರೆತಿದೆ. ಅಕ್ಟೋಬರ್ 23ರಿಂದ ನವೆಂಬರ್ 8ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ 15ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಸಾವಿರಾರು ವಿನ್ಯಾಸದ ಬ್ರ್ಯಾಂಡೆಡ್ ವಾಚ್‌ಗಳು ಗ್ರಾಹಕರಿಗೆ ಲಭ್ಯವಿದೆ.

ಪ್ರದರ್ಶನದಲ್ಲಿ ಆಯ್ದ ಬ್ರ್ಯಾಂಡೆಡ್ ವಾಚ್‌ಗಳ ಮೇಲೆ ಗರಿಷ್ಠ ಶೇ. 50ರ ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಉದ್ಯಮಿ ಹಾಗೂ ಧಾರ್ಮಿಕ ಮುಖಂಡರಾದ ದಿಲ್ ರಾಜ್ ಆಳ್ವ ಅವರು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಬ್ರ್ಯಾಂಡೆಡ್ ವಾಚ್‌ಗಳನ್ನು ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಸಲು ಮಂಗಳೂರಿನ ಜನರಿಗೆ ಇದೊಂದು ಉತ್ತಮ ಅವಕಾಶವಾಗಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಅಂತರರಾಷ್ಟ್ರೀಯ ವಾಚ್ ಬ್ರ್ಯಾಂಡ್‌ಗಳ ವಿಶೇಷ ಕಲೆಕ್ಷನ್‌ಗಳನ್ನು ಗಣ್ಯರು ಅನಾವರಣಗೊಳಿಸಿದರು. ಟ್ಯಾಗ್ ಹ್ಯೂಯರ್ (Tag Heuer) ಕಲೆಕ್ಷನ್ ಅನ್ನು ಮಂಗಳೂರು ಮೂಲದ ಅಬುಧಾಬಿ ಉದ್ಯಮಿ ಅಬ್ದುಸ್ ಸಲಾಂ, ರಾಡೋ (Rado) ಕಲೆಕ್ಷನ್ ಅನ್ನು ಪ್ರೇಮನಾಥ್ ಶೆಟ್ಟಿ ಹೆಜಮಾಡಿ, ಟಿಸ್ಸಾಟ್ (Tissot) ಕಲೆಕ್ಷನ್ ಅನ್ನು ಡಾ. ಮುಸ್ತಫಾ ಬಸ್ತಿಕೋಡಿ, ಕಿಂಗ್ ಸೈಕೋ (King Seiko) ಕಲೆಕ್ಷನ್ ಅನ್ನು ಪದ್ಮನಾಭ ಶೆಟ್ಟಿ ಪುತ್ತೂರು, ಸೈಕೋ (Seiko) ಕಲೆಕ್ಷನ್ ಅನ್ನು ಜಿ.ಎ. ಮೊಹಮ್ಮದ್ ಯೂಸುಫ್ ಕಲ್ಲಡ್ಕ ಹಾಗೂ ಸೆರೂಟಿ (Cerruti) ಕಲೆಕ್ಷನ್ ಅನ್ನು ಸನೀಶ್ ಅಗಸ್ಟೀನ್ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಾಧವ ಮಾವೆ ಸಾಲೆತ್ತೂರು ಅವರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ಕೋರಿದರು.

 

**ಪ್ರದರ್ಶನದ ವಿಶೇಷ ಆಕರ್ಷಣೆಗಳು.**

ಗ್ರಾಹಕರ ಅನುಕೂಲಕ್ಕಾಗಿ ಹಳೆಯ ವಾಚ್‌ಗಳನ್ನು ವಿನಿಮಯ ಮಾಡಿಕೊಂಡು ಹೊಸ ಬ್ರ್ಯಾಂಡೆಡ್ ವಾಚ್‌ಗಳನ್ನು ಖರೀದಿಸುವ ಎಕ್ಸ್‌ಚೇಂಜ್ ಆಫರ್, ಉಚಿತ ಬ್ಯಾಟರಿ ಬದಲಾವಣೆ ಹಾಗೂ ಉಚಿತ ಪಾಲಿಶ್ ಸೌಲಭ್ಯಗಳನ್ನು ಒದಗಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ &ಡೈಮಂಡ್ಸ್ ಮಂಗಳೂರಿನ ನಿರ್ದೇಶಕ ಕರುಣಾಕರನ್ ಅವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಸ್ಟೋರ್ ಹೆಡ್ ಹಫೀಜ್ ರೆಹಮಾನ್, ಶೋರೂಂ ಮ್ಯಾನೇಜರ್ ಗಿರೀಶ್ ರೈ, ಸೇಲ್ಸ್ ಮ್ಯಾನೇಜರ್ ಮೊಹಮ್ಮದ್ ಸಮೀರ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಕ್ ಫರ್ಹಾನ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *