ಅಕ್ಟೋಬರ್ 23ರ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟಕ್ಕೆ ಬೆಂಬಲಿಸಿ AIKKS ಮತ್ತು TUCI ಜಿಲ್ಲಾ ಸಮಿತಿ ವತಿಯಿಂದ ಮೂಡಿಗೆರೆ ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು……
1 min read
*ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ – TUCI ಅಖಿಲ ಭಾರತ ಕ್ರಾಂತಿಕಾರಿ ಕಿಸಾನ್ ಸಭಾ – AIKKS*
ಜಿಲ್ಲಾ ಸಮಿತಿ ಚಿಕ್ಕಮಗಳೂರು
ಅಕ್ಟೋಬರ್ 23ರ ಸಂಯುಕ್ತ ಕಿಸಾನ್ ಮೋರ್ಚಾ ಹೋರಾಟಕ್ಕೆ ಬೆಂಬಲಿಸಿ AIKKS ಮತ್ತು TUCI ಜಿಲ್ಲಾ ಸಮಿತಿ ವತಿಯಿಂದ ಮೂಡಿಗೆರೆ ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು

ಈಗಾಗಲೇ ದೇಶಾದ್ಯಂತ ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಜನರು, ಮಹಿಳೆಯರು ಮತ್ತು ಪ್ರಜಾಪ್ರಭುತ್ವವಾದಿಗಳು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟಕ್ಕೆ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಾದ ಮತದಾನದ ಹಕ್ಕನ್ನು ನಾಶಪಡಿಸುವ SIR ಕಾಯ್ದೆಯ ಮೂಲಕ ಪ್ರಜಾಪ್ರಭುತ್ವದ ಮೂಲಭೂತ ಹಕ್ಕನ್ನೇ ನಿರಾಕರಿಸಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಈ ನೀತಿಯ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೇಂದ್ರೀಕರಿಸಿ ಅವರ ಹಕ್ಕುಗಳನ್ನು ನಾಶಪಡಿಸುವ ಜೊತೆಗೆ ದಲಿತ ಆದಿವಾಸಿಗಳನ್ನು ಕೇಂದ್ರೀಕರಿಸಿ ತಮ್ಮ ಮತಬ್ಯಾಂಕನ್ನು ಭದ್ರಪಡಿಸುವ ಸಂಚು ರೂಪಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭ್ರಷ್ಟಾಚಾರದ ಮೂಲಕ ಬಳಸಿಕೊಳ್ಳಲಾಗುತ್ತಿದೆ.
ಹಾಗೂ ಕೃಷಿ ಉತ್ಪನ್ನಗಳಿಗೆ ಕಾನೂನು ಬದ್ಧ ಕನಿಷ್ಠ ಬೆಂಬಲ ಬೆಲೆ (MSP) ಕಾಯ್ದೆ ಜಾರಿ ಮಾಡುವುದರಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಮತ್ತು ಹೋರಾಡಿ ಪಡೆದ ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ ಕೇವಲ 4 ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದೆ. ಅಲ್ಲದೆ, ಮನರೇಗಾವನ್ನು ಬದಲಿಸಿ ದುಡಿಯುವ ವರ್ಗದ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ.
ಇಂತಹ ನೀತಿಗಳನ್ನು ಸರಿಪಡಿಸಲೆಂದು ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುವ ಹೋರಾಟಗಳನ್ನು ಹತ್ತಿಕ್ಕಿ ಬಾಡಿಗೆ ಗೂಂಡಾಗಳಿಂದ ಲಾಠಿಚಾರ್ಜ್ ಮಾಡಿಸುವ ಮೂಲಕ ವಿದ್ಯಾರ್ಥಿ ಯುವಜನರನ್ನು ಗಾಯಗೊಳಿಸಿ ಅಕ್ರಮವಾಗಿ ಬಂಧಿಸಿ ಮೊಕದ್ದಮೆ ದಾಖಲಿಸಲಾಗುತ್ತಿದೆ.
ಇದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನೀತಿಯಾಗಿರುವುದರಿಂದ ಇದನ್ನು ನಾವು ಹೋರಾಟಗಳ ಮೂಲಕ ಉಗ್ರವಾಗಿ ಖಂಡಿಸುತ್ತಾ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರವನ್ನು ಮತ್ತು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಾನ್ಯ ರಾಷ್ಟ್ರಪತಿಗಳಿಗೆ ತಾಸಿಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು
ಈ ಪ್ರತಿಭಟನೆ ಹೋರಾಟದಲ್ಲಿ AIKKS ಪ್ರಧಾನ ಕಾರ್ಯದರ್ಶಿ *ಬಿ ರುದ್ರಯ್ಯ* ಯವರು ಭಾಗವಹಿಸಿ ಮಾತನಾಡಿದರು, TUCI ಜಿಲ್ಲಾ ಅಧ್ಯಕ್ಷರಾದ *ಕೃಷ್ಣಪ್ಪ* ಅವರು ಭಾಗವಹಿಸಿ ಮಾತನಾಡಿದರು , ಶೇಖರ್, ಸುರೇಶ್, ಭಾಗವಹಿಸಿದ್ದರು

