ವಾರದ ಸಂತೆಯಿಂದ ಇಲ್ಲಿನ ಬಡಾವಣೆಯ ಜನ ವಸತಿಗೆ ತೊಂದರೆ : ಕಲ್ಕುಳಿ ವಿಠಲ್ ಹೆಗ್ಗಡೆ..
1 min read
ವಾರದ ಸಂತೆಯಿಂದ ಇಲ್ಲಿನ ಬಡಾವಣೆಯ ಜನ ವಸತಿಗೆ ತೊಂದರೆ : ಕಲ್ಕುಳಿ ವಿಠಲ್ ಹೆಗ್ಗಡೆ
ಶೃಂಗೇರಿ: ‘ಶೃಂಗೇರಿ ಶಾರದಾ ನಗರದಲ್ಲಿ ಒಳಂಗಣ ಕ್ರೀಡಾಂಗಣ ಮತ್ತು ಮಕ್ಕಳು ಪಾರ್ಕ್ಗೆ ಆಟವಾಡಲು ಮೀಸಲಿಟ್ಟ ಜಾಗದಲ್ಲಿ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿ ಮತ್ತು ತಹಶೀಲ್ದಾರ್ ಅನೂಪ್ ಸಂಜೋಗ್ ವಾರದ ಸಂತೆ ನಡೆಸಲು ಮುಂದಾಗಿದ್ದರಿಂದ ಇಲ್ಲಿನ ಬಡವಣೆಯ ಜನ ವಸತಿಗೆ ತೊಂದರೆಯಾಗುತ್ತಿದೆ’ ಎಂದು ಪರಿಸರ ಜಾಗೃತಿ ಶೃಂಗೇರಿಯ ಶಾರದಾ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಒಳಂಗಣ ಕ್ರೀಡಾಂಗಣ ಮತ್ತು ಮಕ್ಕಳು ಆಟವಾಡಲು ಪಾರ್ಕ್ಗೆ ಮೀಸಲಿಟ್ಟ ಜಾಗದಲ್ಲಿ ಶಾಸಕ ಟಿ.ಡಿ ರಾಜೇಗೌಡರು ಸಂತೆ ನಡೆಸಬೇಡಿ ಎಂದು ತಹಶೀಲ್ದಾರರಿಗೆ ಮೌಖಿಕವಾಗಿ ಸೂಚಿಸಿದ್ದರೂ ಕೂಡ ಮತ್ತು ವಾರದ ಸಂತೆ ನಡೆಸಲು ಕಟ್ಟಡವಿದ್ದರೂ ಪಂಚಾಯಿತಿಯ ಆಡಳಿತಾಧಿಕಾರಿ ಮತ್ತು ತಹಶೀಲ್ದಾರ್ರವರು ಉದ್ದಟತನ ತೋರಿ ದ್ವೇಷದಿಂದ ವಾರದ ಸಂತೆಯನ್ನು ಜನ ವಸತಿ ಪ್ರದೇಶದಲ್ಲಿ ಮುಂದಾಗಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಕಲ್ಕುಳಿ ವಿಠಲ್ ಹೆಗ್ಗಡೆ ಆರೋಪಿಸಿದ್ದಾರೆ.
ಇದರಿಂದ ವಾತಾವರಣ ಕಲುಷಿತವಾಗಿ ನೆಮ್ಮದಿ ಆರೋಗ್ಯಕ್ಕೆ ದಕ್ಕೆಯಾಗುತ್ತದೆ. ಸಂತೆಯೊಳೆಗೆ ಮನೆ ಮಾಡಿದಂತೆ ಶಾಂತಿಯುತ ಬದುಕ ನಾಶವಾಗುತ್ತದೆ. ಜನ ವಸತಿಯ ವಾತವರಣ ಕೆಡಿಸುವ ವಾರದ ಸಂತೆಯನ್ನು ಉದ್ಯಾನವನಕ್ಕೆ ಕ್ರೀಡಾಂಗಣಕ್ಕೆ ಮೀಸಲಿಟ್ಟ ಜಾಗದಲ್ಲಿ ಮಾಡಬಾರದು. ಹೀಗೆ “ಮುಂದವರಿದರೆ ಇದನ್ನು ಖಂಡಿಸುತ್ತೇವೆ’ ಎಂದರು. ಜನಶಕ್ತಿಯ ಹಾಗಲಗಂಚಿಯ ವೆಂಕಟೇಶ್ ಮಾತನಾಡಿ, ‘ಶಾರದ ನಗರ ಬಡಾವಣೆಯಲ್ಲಿ ವ್ಯವಸ್ಥಿತ ಸಂತೆ ಪ್ರಂಗಾಣವಿದ್ದು ಅನೇಕ ವರ್ಷಗಳಿಂದ ಸಂತೆ ನಡೆಯುತ್ತಿದೆ. ಬೀದಿ ವ್ಯಾಪಾರಿಗಳು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡಿಕೊಂಡಿರುತ್ತಾರೆ. ಅದಕ್ಕೆ ಯಾರಿಂದಲೂ ಆಕ್ಷೇಪಣೆಗಳು ಇರುವುದಿಲ್ಲ. ಸಂತೆ ನಡೆಯಬೇಕಾದಲ್ಲಿ ಸಂತೆ ನಡೆಯಲಿ ಅದಕ್ಕೆ ನಮ್ಮ ಅಭ್ಯಂತರ ವಿರುವುದಿಲ್ಲ. ಸೋಮವಾರ ಸಂತೆ ನಡೆಸಲು ಮುಂದಾದರೆ ವಿವಿಧ ಸಂಘಟನೆಗಳು ಅದನ್ನು ತಡೆದು ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಎದ್ದೇಳೂ ಕರ್ನಾಟಕ ಸಂಘಟನೆಯ ಸುರೇಶ್ ಇದ್ದರು.

