लाइव कैलेंडर

September 2026
M T W T F S S
 123456
78910111213
14151617181920
21222324252627
282930  
15/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಸಿಯೋನ್ ಆಶ್ರಮಕ್ಕೆ ಹರ್ಷ ಮೇಲ್ವಿನ್ ಲಸ್ರಾದೋ ಸೌಹಾರ್ದ ಭೇಟಿ…..

1 min read

‎ಸಿಯೋನ್ ಆಶ್ರಮಕ್ಕೆ ಹರ್ಷ ಮೇಲ್ವಿನ್ ಲಸ್ರಾದೋ ಸೌಹಾರ್ದ ಭೇಟಿ
‎ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀ ಹರ್ಷ ಮೇಲ್ವಿನ್ ಲಸ್ರಾದೋ ಅವರು ಮಾನವತೆಯ ಮಂದಿರ ಸಿಯೋನ್ ಆಶ್ರಮಕ್ಕೆ ಸೌಹಾರ್ದ ಭೇಟಿ ನೀಡಿ, ಆಶ್ರಮದಲ್ಲಿರುವ ಅನಾಥ ಮಕ್ಕಳು, ರೋಗಿಗಳು ಹಾಗೂ ವೃದ್ಧರೊಂದಿಗೆ ಆತ್ಮೀಯವಾಗಿ ಸಮಯ ಕಳೆಯುವ ಮೂಲಕ ಮಾನವೀಯ ಕಾಳಜೆ ಮೆರೆದರು.

ಆಶ್ರಮಕ್ಕೆ ಭೇಟಿ ನೀಡಿದ ಅವರು ಅಲ್ಲಿನ ನಿವಾಸಿಗಳ ಆರೋಗ್ಯ ವಿಚಾರಿಸಿ, ಅವರ ಯೋಗಕ್ಷೇಮ ಹಾಗೂ ಆಶ್ರಮದಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಸುಮಾರು ಎರಡು-ಮೂರು ಗಂಟೆಗಳ ಕಾಲ ಆಶ್ರಮದಲ್ಲಿದ್ದು, ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ, ವೃದರು ಹಾಗೂ ರೋಗಿಗಳೊಂದಿಗೆ ಕೆಲಕಾಲ ಬೆರೆತು ಅವರ ನೋವು ನಲಿವುಗಳನ್ನು ಆಲಿಸಿದರು.

‎ಬಳಿಕ ಆಶ್ರಮದ ಮಂಡಳಿ ಹಾಗೂ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದ ಅವರು, ಆಶ್ರಮದ ಪ್ರಸ್ತುತ ಅಗತ್ಯತೆಗಳು, ಮೂಲಸೌಕರ್ಯ ಹಾಗೂ ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಸಮಗ್ರವಾಗಿ ಚರ್ಚಿಸಿದರು.

ಆಶ್ರಮದ ಅಭಿವೃದ್ಧಿ ಹಾಗೂ ನಿವಾಸಿಗಳ ಅಗತ್ಯತೆಗಳಿಗೆ ಸರ್ಕಾರದ ವತಿಯಿಂದ ಸಾಧ್ಯವಾದಷ್ಟು ನೆರವು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹರ್ಷ ಮೇಲ್ವಿನ್ ಲಸ್ರಾದೋ ಅವರು ಭರವಸೆ ನೀಡಿದರು.
ಸಮಾಜದ ನಿರ್ಗತಿಕರು, ಅನಾಥರು, ರೋಗಿಗಳು ಹಾಗೂ ವೃದ್ಧರ ಬದುಕಿನಲ್ಲಿ ನೆಮ್ಮದಿ ಮೂಡಿಸುವ ನಿಟ್ಟಿನಲ್ಲಿ ನಡೆದ ಈ ಸೌಹಾರ್ದ ಭೇಟಿ, ಸೇವೆ ಮತ್ತು ಮಾನವೀಯತೆಯ ಮೌಲ್ಯಗಳಿಗೆ ಮತ್ತಷ್ಟು ಅರ್ಥ ತುಂಬುವಂತಿತ್ತು. ಅವರ ಆತ್ಮೀಯತೆ ಹಾಗೂ ಕಾಳಜಿಗೆ ಆಶ್ರಮದ ಆಡಳಿತ ಮಂಡಳಿ ಮತ್ತು ನಿವಾಸಿಗಳು ಸಂತಸ ವ್ಯಕ್ತಪಡಿಸಿದರು.

About Author

Leave a Reply

Your email address will not be published. Required fields are marked *

You may have missed