“ಅರಸಿನಮಕ್ಕಿಯಲ್ಲಿ ಯುವಕರ ಸಾಮಾಜಿಕ ಕಾಳಜಿ : ರಸ್ತೆ ಗುಂಡಿ ಮುಚ್ಚಿ ಶ್ರಮದಾನ,ಸಾರ್ವಜನಿಕರ ಮೆಚ್ಚುಗೆ.”
1 min read
ಬೆಳ್ತಂಗಡಿ : ಅರಸಿನಮಕ್ಕಿ-ಬೂಡುಮುಗೇರು ರಸ್ತೆಯಲ್ಲಿ ಹಲವು ಕಡೆಗಳಲ್ಲಿ ದೊಡ್ಡದೊಡ್ಡ ಗುಂಡಿಗಳು ನಿರ್ಮಾಣಗೊಂಡಿದ್ದು, ವಾಹನ ಚಾಲಕರು ಹಾಗೂ ಸಾರ್ವಜನಿಕರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ಇದನ್ನು ಮನಗಂಡ ಅರಸಿನಮಕ್ಕಿಯ ಆಟೋ ರಿಕ್ಷಾ ಚಾಲಕರಾದ ರಾಕೇಶ್ ಶೆಟ್ಟಿ ಹಾಗೂ ಉಪೇಂದ್ರ ಮತ್ತು ಸ್ಥಳೀಯ ಯುವಕರಾದ ಸಲ್ಮಾನ್ ಫಾರೀಜ್,ಮಹಮ್ಮದ್ ಫಝಲ್, ಬ್ರಿಜೇಶ್,ಶ್ರವಣ್ ಕುಮಾರ್,ಹಾಗೂ ಯುವರಾಜ್ ಬಿ.ಎಸ್. ಅವರು ಆಗಸ್ಟ್ 23ರಂದು ಸ್ವಯಂಪ್ರೇರಿತವಾಗಿ ಶ್ರಮದಾನ ನಡೆಸಿದರು.ರಸ್ತೆಯಲ್ಲಿದ್ದ ಗುಂಡಿಗಳಿಗೆ ಕಲ್ಲುಗಳನ್ನು ಹಾಕಿ ಮುಚ್ಚುವ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಯುವಕರ ಈ ಸಾಮಾಜಿಕ ಕಾಳಜಿ ಹಾಗೂ ಶ್ರಮದಾನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಈ ಯುವಕರು ಕುಸಲ್ದ ಬೊಳ್ಳಿಲು (Kusalda bollilu)https://www.instagram.com/kusaldha_bolliluu?igsi=ODB0aHUxdjI5d2Q1ಎಂಬ ಇನ್ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಆಡುಭಾಷೆಯಾದ ತುಳುವಿನಲ್ಲಿ ಕಾಮಿಡಿ ಮತ್ತು ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಡುವ ರೀಲ್ಸ್ ಗಳನ್ನು ಮಾಡಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ವೈರಲ್ ಆಗಿದ್ದಾರೆ
ಇವರ ಸಾಮಾಜಿಕ ಮತ್ತು ಸಾರ್ವಜನಿಕ ಸೇವೆ ಹೀಗೆ ಮುಂದುವರಿಯಲಿ ಎಂಬುದೇ ನಮ್ಮ ವಾಹಿನಿಯ ಆಶಯ.
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

