लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
24/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆ ವತಿಯಿಂದ ದಿನಾಂಕ 22/08/2026ನೇ ಶನಿವಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು….

1 min read

ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆ ವತಿಯಿಂದ ದಿನಾಂಕ 22/08/2026ನೇ ಶನಿವಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲು ಜಿ ಹೊಸಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 60ಮಕ್ಕಳಿಗೆ ಪ್ಲಾಸ್ಟಿಕ್ ಬಳಕೆ ಕಮ್ಮಿ ಮಾಡಲು ಸ್ಟೀಲ್ ವಾಟರ್ ಬಾಟಲ್ ವಿತರಣೆ ಮಾಡಲಾಯಿತು. ನಂತರ ಗೋಣಿಬೀಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 60ಮಕ್ಕಳಿಗೆ ಸ್ಟೀಲ್ ಊಟದ ತಟ್ಟೆಯನ್ನು ವಿತರಣೆ ಮಾಡಲಾಯಿತು ಹಾಗೂ ಜನ್ನಪುರದಲ್ಲಿ ಇರುವ ಮೆಸ್ಕಾಂ ನೌಕರರಿಗೆ ಹಳ್ಳಿಗಾಡಿನಲ್ಲಿ ರಾತ್ರಿವೇಳೆ ವಿದ್ಯುತ್ ಸಮಸ್ಯೆ ಆದಾಗ ಆನೆಹಾವಳಿ ಇರುವುದ್ದರಿಂದ ಕೆಲಸ ಮಾಡಲು ಸಹಾಯವಾಗಲಿ ಎಂದು ಬೆಳಕಿನ ಟಾರ್ಚ್ ವಿತರಿಸಲಾಯಿತು. SIR (ತೀವ್ರ ಮತದಾರ ಪಟ್ಟಿ ಪರಿಸ್ಕರಣೆ ) ಪ್ರಕ್ರಿಯಲ್ಲಿ BLO (ಬೂತ್ ಲೆವೆಲ್ ಆಫೀಸರ್ )ಅಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ರಂಗಸ್ವಾಮಿ K R, ಶಕುಂತಲಾ,ಜಗದೀಶ್ D M ಹಾಗೂ ಅನಿತಾ ಪ್ರಭಾಕರ್ ಇವರಿಗೆ ಸನ್ಮಾನಿಸಲಾಯಿತು. ಈ ಎಲ್ಲ ಕಾರ್ಯಕ್ರಮದಲ್ಲಿ ಜೆಸಿಐ ವಲಯ ಅಧ್ಯಕ್ಷರು ಅದ ಜೆಸಿ ಪ್ರಜ್ವಲ್ ಜೈನ್ ಇವರ ಸಮ್ಮುಖದಲ್ಲಿ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಜೆಸಿಐ ಗೋಣಿಬೀಡು ಹೊಯ್ಸಳ ಸಂಸ್ಥೆಯ 2026ಅಧ್ಯಕ್ಷರು ಅದ ಜೆಸಿ ಸಂತೋಷ್, ವಲಯ ಉಪಾಧ್ಯಕ್ಷರು ಆದಂತಹ ಜೆಸಿ ಜಗತ್, ಜೆಸಿ ಶ್ರೀಕಾಂತ್, ಜೆಸಿ ಸುಂದ್ರೇಶ್, ಜೆಸಿ ಯೋಗೇಶ್, ಜೆಸಿ ಸತ್ಯ ಕುಮಾರ್, ಜೆಸಿ ರವಿಕುಮಾರ್, ಜೆಸಿ ದಯಾನಂದ, ಜೆಸಿ ರಂಜಿತ್, ಜೆಸಿ, ದರ್ಶನ್, ಜೆಸಿ ಭರತ್ ಹಾಗೂ ರವಿ, CLP ಮಧು, ಮುಖ್ಯ ಶಿಕ್ಷರು ನಾಗರತ್ನ, JE ರವಿಕುಮಾರ್, ಶಾಲಾ ಶಿಕ್ಷಕರು, ಶಾಲಾ ಪೋಷಕರು, ಶಾಲಾ ಮಕ್ಕಳು, ಮೆಸ್ಕಾಂ ನೌಕರರು ಪಾಲ್ಗೊಂಡಿದ್ದರು.

About Author

Leave a Reply

Your email address will not be published. Required fields are marked *

You may have missed